ಏಪ್ರಿಲ್ ತಿಂಗಳಲ್ಲಿ ಮೂಡಿಬರಲಿರುವ ವರ್ಷದ ಮೊದಲ ಸೂರ್ಯಗ್ರಹಣದಲ್ಲಿ ಈ ನಾಲ್ಕು ರಾಶಿಯವರ ಜೀವನವೇ ಬದಲಾಗಲಿದೆ? ಯಾರ್ಯಾರಿಗೆ ಅದೃಷ್ಟ ಗೊತ್ತೇ??

ಏಪ್ರಿಲ್ ತಿಂಗಳಲ್ಲಿ ಮೂಡಿಬರಲಿರುವ ವರ್ಷದ ಮೊದಲ ಸೂರ್ಯಗ್ರಹಣದಲ್ಲಿ ಈ ನಾಲ್ಕು ರಾಶಿಯವರ ಜೀವನವೇ ಬದಲಾಗಲಿದೆ? ಯಾರ್ಯಾರಿಗೆ ಅದೃಷ್ಟ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಏಪ್ರಿಲ್ ತಿಂಗಳಿನಲ್ಲಿ ಜ್ಯೋತಿಷ್ಯದ ಪ್ರಕಾರ ಹಲವಾರು ವಿಚಾರಗಳು ವಿಶೇಷತೆಗಳು ನಡೆದುಹೋಗಿವೆ ಇನ್ನು ಕೂಡ ನಡೆಯಲು ಬಾಕಿ ಇದೆ. ಹೀಗಾಗಿ ಒಂದು ಲೆಕ್ಕದಲ್ಲಿ ಏಪ್ರಿಲ್ ತಿಂಗಳನ್ನು ವಿಶೇಷ ತಿಂಗಳೆಂದು ಭಾವಿಸಬಹುದಾಗಿದೆ. ಇದಕ್ಕೆ ಹಲವಾರು ಕಾರಣಗಳು ಕೂಡ ಇವೆ ಅದು ಈಗಾಗಲೇ ನೀವು ಕೂಡ ತಿಳಿದಿದೆ. ಮೊದಲನೆಯದು ಎಪ್ರಿಲ್ ತಿಂಗಳಲ್ಲಿ ಯುಗಾದಿ ಹಬ್ಬ ಅಂದರೆ ಹಿಂದುಗಳ ಹೊಸ ವರ್ಷ ಕೂಡ ಇದೇ ತಿಂಗಳಲ್ಲಿ ಬಂದಿರುವುದು.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳ ರಾಶಿ ಪರಿಚಲನೆಯು ಕೂಡ ಇದೇ ತಿಂಗಳಿನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ 9 ಗ್ರಹಗಳು ಕೂಡ ಬೇರೆ ಬೇರೆ ರಾಶಿಗೆ ಸ್ಥಾನಪಲ್ಲಟವನ್ನು ಮಾಡುತ್ತವೆ. ಇನ್ನು ಮತ್ತೊಂದು ವಿಚಾರವೆಂದರೆ ಈ ವರ್ಷದ ಕೊನೆಯ ದಿನ ಅಂದರೆ ಏಪ್ರಿಲ್ 30ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಮೇಷ ರಾಶಿಯಲ್ಲಿ ಏಪ್ರಿಲ್ 30 ರಂದು ಸೂರ್ಯಗ್ರಹಣ ಸಂಭವಿಸಲಿದ್ದು ಈ ಕಾರಣದಿಂದಾಗಿ 4 ರಾಶಿಯವರಿಗೆ ಹೆಚ್ಚು ಪರಿಣಾಮ ಬೀರಲಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಬಂದಿದೆ. ಹಾಗಿದ್ದರೆ 4 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ಏಪ್ರಿಲ್ 30ರಂದು ಕಂಡು ಬರಲಿರುವ ಸೂರ್ಯಗ್ರಹಣ ಎನ್ನುವುದು ವೃಷಭ ರಾಶಿಯವರಿಗೆ ಶುಭಕರವಾಗಿ ಪರಿಣಮಿಸಲಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಆಗಾಗ ಕಂಡುಬರುತ್ತಿದ್ದ ಅಡೆತಡೆಗಳು ಸಂಪೂರ್ಣವಾಗಿ ನಿಂತು ಹೋಗಲಿದೆ. ಪಿತ್ರಾರ್ಜಿತ ಆಸ್ತಿ ಗಳಲ್ಲಿ ಕೂಡ ನಿಮಗೆ ಪಾಲು ಅತಿಶೀಘ್ರವಾಗಿ ದೊರಕಲಿದ್ದು ಹಲವಾರು ಮೂಲಗಳಿಂದ ಆರ್ಥಿಕವಾಗಿ ನೀವು ಸಮೃದ್ಧ ಸ್ಥಿತಿಯನ್ನು ಹೊಂದುವಂತಹ ಅವಕಾಶ ಅತಿಶೀಘ್ರದಲ್ಲಿ ನಿಮಗೆ ಒದಗಿಬರಲಿದೆ. ಹೀಗಾಗಿ ವೃಷಭ ರಾಶಿಯವರಿಗೆ ಉತ್ತಮ ಪರಿಣಾಮವೇ ಸೂರ್ಯಗ್ರಹಣದ ಸಂದರ್ಭದಲ್ಲಿ ಸಿಗಲಿದೆ.

ಕರ್ಕಾಟಕ ರಾಶಿ; ಸೂರ್ಯಗ್ರಹಣ ಕರ್ಕಾಟಕ ರಾಶಿಯವರ ಮೇಲೆ ಕೂಡ ಶುಭ ಪರಿಣಾಮವನ್ನು ಬೀರಲಿದೆ. ಕೆಲಸ ಹುಡುಕುತ್ತಿರುವವರಿಗೆ ಅವರು ಇಚ್ಚಿಸಿರುವ ಜಾಗದಲ್ಲಿ ಕೆಲಸ ಸಿಗಲಿದೆ. ಇನ್ನು ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಕೂಡ ಸಿಗಲಿದೆ. ಪ್ರಯಾಣದಲ್ಲಿ ಕೂಡ ಹಣ ಗಳಿಸಬಹುದಾದಂತಹ ಅವಕಾಶ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಆರ್ಥಿಕ ಲಾಭ ದೊರೆಯಲಿದ್ದು ಸಮಾಜದಲ್ಲಿ ಪ್ರತಿಷ್ಠೆ ಘನತೆ ಗೌರವಗಳು ಹೆಚ್ಚಾಗಲಿವೆ. ಜೀವನದಲ್ಲಿ ಧನಾತ್ಮಕ ಪರಿಣಾಮಗಳು ಕಂಡುಬರಲಿವೆ.

ತುಲಾ ರಾಶಿ; ತುಲಾ ರಾಶಿಯವರಿಗೆ ಕೊನೆಗೂ ಕೂಡ ಸೂರ್ಯಗ್ರಹಣದ ಸಂದರ್ಭದಲ್ಲಿ ಶುಭದಿನಗಳನ್ನು ಕಾಣುವಂತಹ ಯೋಗವು ಮೂಡಿಬರಲಿದೆ. ವ್ಯಾಪಾರ ವ್ಯವಹಾರ ಹಾಗೂ ಹೂಡಿಕೆ ಕ್ಷೇತ್ರಗಳಲ್ಲಿ ಖಂಡಿತವಾಗಿ ದೊಡ್ಡಮಟ್ಟದ ಆರ್ಥಿಕ ಲಾಭವನ್ನು ಪಡೆಯುವುದು ನಿಶ್ಚಿತ. ಸೂರ್ಯಗ್ರಹಣದ ಪ್ರಭಾವದಿಂದಾಗಿ ನಿಮ್ಮ ಜೀವನದಲ್ಲಿ ಅದೃಷ್ಟದ ಸಾಧ್ಯತೆ ಇನ್ನಷ್ಟು ಹೆಚ್ಚಾಗಲಿದೆ. ಕೆಲಸ ಮಾಡುತ್ತಿರುವವರಿಗೂ ಕೂಡ ಉತ್ತಮವಾದ ದಿನಗಳು ಕಂಡುಬರಲಿವೆ.

ಧನು ರಾಶಿ; ಸೂರ್ಯ ಗ್ರಹಣ ಧನು ರಾಶಿಯವರಿಗೆ ಲಾಭ ಮಾಡಿಕೊಳ್ಳಲು ಹಲವಾರು ಅವಕಾಶಗಳನ್ನು ನೀಡಲಿದೆ. ಸರಕಾರಿ ಕೆಲಸದಲ್ಲಿ ಇರುವವರಿಗೆ ಸೂರ್ಯಗ್ರಹಣ ಎನ್ನುವುದು ಜಾಕ್ ಪಾಟ್ ಆಗಲಿದೆ. ಮೊದಲಿಗಿಂತ ಆರ್ಥಿಕಸ್ಥಿತಿ ನಿಮ್ಮ ಜೀವನದಲ್ಲಿ ಉತ್ತಮ ಹಂತದಲ್ಲಿ ಕಂಡು ಬರಲಿದ್ದು ಅದೃಷ್ಟದ ಸಾಥ್ ನಿಮಗೆ ಸಿಗಲಿದೆ. ಈಗಾಗಲೇ ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಲಿವೆ. ಇದೇ ಸೂರ್ಯಗ್ರಹಣದಿಂದ ಲಾಭವನ್ನು ಪಡೆಯಲಿರುವ 4 ರಾಶಿಯವರು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಕಂಡಿತವಾಗಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.