ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲಲು ಪ್ರಮುಖ ಕಾರಣಗಳೇನು ಗೊತ್ತೇ?? ಭರ್ಜರಿ ಆಟವಾಡಿದರು ಸೋಲಲು ಕಾರಣಗಳೇನು ಗೊತ್ತೇ??

ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲಲು ಪ್ರಮುಖ ಕಾರಣಗಳೇನು ಗೊತ್ತೇ?? ಭರ್ಜರಿ ಆಟವಾಡಿದರು ಸೋಲಲು ಕಾರಣಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದಿರುವಂತಹ ಐಪಿಎಲ್ ಪಂದ್ಯಾಟ ಯಾರೂ ಕೂಡ ಊಹಿಸದಂತಹ ಫಲಿತಾಂಶವನ್ನು ಪಡೆದಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಐಪಿಎಲ್ ಪಂದ್ಯಾವಳಿಗಳಲ್ಲಿ ಬದ್ಧವೈ’ರಿ ಗಳಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಿದ್ದವು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನಯ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 23 ರನ್ನುಗಳಿಂದ ಸೋಲಿಸಿತು. ಈಗಾಗಲೇ ಹಾಡಿರುವ 4ಕ್ಕೆ ನಾಲ್ಕು ಪಂದ್ಯಗಳಲ್ಲಿ ಸೋತಿರುವುದು ಸೂಪರ್ ಕಿಂಗ್ಸ್ ತಂಡ ಈ ಬಾರಿ ಟೂರ್ನಿಯ ಫೇವರೆಟ್ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವುದು ದೊಡ್ಡ ಸುದ್ದಿಗೆ ಕಾರಣವಾಗಿದೆ.

ಡುಪ್ಲೆಸಿಸ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಗೆದ್ದು ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ಗಳ ನಷ್ಟಕ್ಕೆ 216 ರನ್ನುಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಇದನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ಗಳ ನಷ್ಟಕ್ಕೆ ಕೇವಲ 193 ರನ್ನುಗಳನ್ನು ಬಾರಿಸಲು ಮಾತ್ರ ಸಾಧ್ಯವಾಯಿತು. ಹೀಗಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲನ್ನು ಸೋಲು ಅನುಭವಿಸಲು ಇದ್ದಂತಹ ನಾಲ್ಕು ಕಾರಣಗಳು ಯಾವುದೆಂಬುದು ತಿಳಿಯೋಣ ಬನ್ನಿ.

ಮೊದಲಿಗೆ ನೋಡುವುದಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಸಂಪೂರ್ಣವಾಗಿ ವಿಫಲವಾಯಿತು. ಚೆನ್ನೈ ತಂಡದ ಮೊದಲ ಎರಡು ವಿಕೆಟ್ ಗಳಾಗಿರುವ ರುತುರಾಜ್ ಗಾಯಕ್ವಾಡ್ ಹಾಗೂ ಮೊಯಿನ್ ಅಲಿ ರವರ ವಿಕೆಟನ್ನು ಕಬಳಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿ ಆಯಿತಾದರೂ ಕೂಡ ಮುಂದೆ ಯಾವುದೇ ವಿಕೆಟ್ಗಳನ್ನು ಅಷ್ಟೊಂದು ಸುಲಭವಾಗಿ ಕೀಳಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಹಾಗೂ ಆಕಾಶದೀಪ್ ಇಬ್ಬರೂ ಕೂಡ ದುಬಾರಿಯಾದರೂ. ಶ್ರೀಲಂಕಾ ಮೂಲದ ಆಟಗಾರನಾಗಿರುವ ಹಸರಂಗ ವಿಕೆಟ್ ಕಬಳಿಸಲು ಯಶಸ್ವಿಯಾದರೂ ಕೂಡ ಅವರಿಂದಲೂ ರನ್ ಪ್ರವಾಹವನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತಂಡ ಲಾಭವನ್ನಾಗಿ ಪರಿವರ್ತಿಸಿತು.

ಎರಡನೇದಾಗಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡು ಬಂದಿದ್ದು. ಗುರಿಯ ಮೊತ್ತ ದೊಡ್ಡದಾಗಿದ್ದರೂ ಕೂಡ ಬ್ಯಾಟಿಂಗ್ ಪಿಚ್ ಆಗಿದ್ದ ಕಾರಣದಿಂದಾಗಿ ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೊಡೆ ಬಡಿಯ ಬ್ಯಾಟ್ಸ್ಮನ್ಗಳು ಇದ್ದ ಕಾರಣದಿಂದಾಗಿ ಈ ಗುರಿ ಸುಲಭವಾಗಿ ಬೆನ್ನತ್ತಬಹುದು ಎನ್ನುವುದಾಗಿ ಅಂದುಕೊಳ್ಳಲಾಗಿತ್ತು. ನಾಯಕ ಡುಪ್ಲೆಸಿಸ್ ರವರು ಕೇವಲ ಎಂಟು ರನ್ ಗಳಿಸಿದರೆ ವಿರಾಟ್ ಕೊಹ್ಲಿ ರವರು ಕೇವಲ ಒಂದು ರನ್ನಿಗೆ ಔಟ್ ಆಗುತ್ತಾರೆ. ಗ್ಲೆನ್ ಮ್ಯಾಕ್ಸ್ ವೆಲ್ ರವರು 26 ರನ್ನುಗಳನ್ನು ವೇಗವಾಗಿ ಪೂರೈಸಿದರು ಕೂಡ ಇದೆ ತಂಡದ ಗೆಲುವಿಗೆ ಪರಿಣಾಮಕಾರಿಯಾಗಲಿಲ್ಲ. ಇಂತಹ ದೊಡ್ಡ ಮಟ್ಟದ ಚೇಸಿಂಗ್ ಮಾಡುವ ಸಂದರ್ಭದಲ್ಲಿ ಪ್ರಮುಖ ಬ್ಯಾಟ್ಸ್ಮನ್ಗಳು ಕೈಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಮೂರನೇ ಕಾರಣವೆಂದರೆ ತಂಡದ ಪ್ರಮುಖ ಬೌಲರ್ ನ ಕೊರತೆ ಕಾಡಿದ್ದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದುಬಾರಿ ಮೊತ್ತದ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲರವರ ತಮ್ಮ ತಂಗಿಯ ಹಠಾತ್ ಮರಣದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತಂಡದ ಯಾವ ಬೌಲರ್ ಕೂಡ ಇವರ ಪಾತ್ರವನ್ನು ತುಂಬಲು ಸಾಧ್ಯವಾಗಲಿಲ್ಲ ಈ ಕಾರಣದಿಂದಾಗಿ ಪ್ರತಿಯೊಬ್ಬ ಬೌಲರ್ ಕೂಡ ರನ್ ಹೊಳೆಯನ್ನು ತಡೆಯಲು ವಿಫಲರಾದರು.

ಕೊನೆಯದಾಗಿ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ರವರ ಸಾಲಿಡ್ ಪಾರ್ಟ್ನರ್ಶಿಪ್; ಆರಂಭಿಕ ಹಿನ್ನಡೆ ಯಿಂದ ಬಳಲುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಜೊತೆಯಾಟವನ್ನು ನೀಡುತ್ತಾರೆ. ರಾಬಿನ್ ಉತ್ತಪ್ಪ ರವರು 50 ಎಸೆತಗಳಲ್ಲಿ 88 ರನ್ನುಗಳನ್ನು ಬಾರಿಸಿದರೆ, ಅತ್ತಕಡೆ ಐಪಿಎಲ್ ನ ಹರ್ಕ್ಯುಲಸ್ ಆಗಿರುವ ಶಿವಂ ದುಬೆ 46 ಎಸೆತಗಳಲ್ಲಿ ನಾಟೌಟ್ 96 ರನ್ ಗಳನ್ನು ಬಾರಿಸಿದ್ದರು. ಇವರಿಬ್ಬರೂ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದರು ಎನ್ನುವುದನ್ನು ಕೂಡ ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ಎಲ್ಲಾ ಕಾರಣಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ ಕಾರಣವಾಗಿದೆ.