ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಡುಗಡೆಯಾಯಿತು ಕಳೆದ ವಾರದ ಟಿಆರ್ ಪಿ, ಪುಟ್ಟಕ್ಕನ ಮಕ್ಕಳು ಹಾಗೂ ಗಟ್ಟಿಮೇಳ ಧಾರವಾಹಿಗಳಲ್ಲಿ ಗೆದ್ದಿದ್ದು ಯಾವುದು ಗೊತ್ತೆ??

694

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳು ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆಯುವಲ್ಲಿ ಸಾಕಷ್ಟು ಸರ್ಕಸ್ ಮಾಡುತ್ತಿವೆ ಎನ್ನುವುದು ನಿಮಗೆ ತಿಳಿದಿರಬಹುದು. ಕಥೆಯಲ್ಲಿ ಹಲವಾರು ಬದಲಾವಣೆಗಳು ಹಾಗೂ ಈಗಿನ ಜನರ ಅಭಿರುಚಿಗೆ ತಕ್ಕಂತೆ ಟ್ವಿಸ್ಟ್ ಗಳನ್ನು ಕೂಡ ಪ್ರಸಾರ ಮಾಡುತ್ತಿವೆ. ಹೇಗೆ ನಾವು ಸಿನಿಮಾಗಳ ಗೆಲುವನ್ನು ಬಾಕ್ಸಾಫೀಸ್ ಕಲೆಕ್ಷನ್ ಆಧಾರದ ಮೇಲೆ ಲೆಕ್ಕಾಚಾರ ಹಾಕುತ್ತೇವೆಯೋ ಅದೇ ರೀತಿ ಧಾರವಾಹಿಗಳ ಗೆಲುವನ್ನು ಅವುಗಳ ರೇಟಿಂಗ್ ಆಧಾರದಲ್ಲಿ ಲೆಕ್ಕ ಹಾಕುತ್ತೇವೆ.

ನಿಮಗೆಲ್ಲರಿಗೂ ಗೊತ್ತಿರಲಿ ಕೆಲವು ವರ್ಷಗಳಿಂದ ಕನ್ನಡ ಕಿರುತೆರೆ ವಾಹಿನಿಯಲ್ಲಿ ನಂಬರ್ ಒಂದು ಸ್ಥಾನವನ್ನು ಕಾಪಾಡಿಕೊಂಡು ಬಂದಿರುವ ವಾಹಿನಿ ಎಂದರೆ ಅದು ಜೀ ಕನ್ನಡ ವಾಹಿನಿ. ಅದರಲ್ಲೂ ಧಾರವಾಹಿಗಳ ವಿಚಾರದಲ್ಲಿ ಟಾಪ್-5 ಧಾರವಾಹಿಗಳು ಖಂಡಿತವಾಗಿ ಜೀ ಕನ್ನಡ ವಾಹಿನಿಯ ಧಾರವಾಹಿಗಳೇ ಆಗಿರುತ್ತದೆ. ಧಾರಾವಾಹಿ ಮೇಕಿಂಗ್ ಕುರಿತಂತೆ ಜೀ ಕನ್ನಡ ವಾಹಿನಿ ವಿಶೇಷವಾದ ಆಸಕ್ತಿಯನ್ನು ವಹಿಸುತ್ತದೆ ಎನ್ನುವುದು ತಿಳಿದುಬರುತ್ತದೆ. ಅದರಲ್ಲೂ ಇತ್ತೀಚೆಗಷ್ಟೇ ಪ್ರಾರಂಭವಾಗಿರುವ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪ್ರಾರಂಭದಿಂದಲೂ ಕೂಡ ಪಡೆದುಕೊಂಡು ಬರುತ್ತಿದೆ. ಇನ್ನು ಹಲವಾರು ವರ್ಷಗಳಿಂದ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ಕೂಡ ಜನಪ್ರಿಯತೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಗಮನಿಸಿದರೆ ಪುಟ್ಟಕ್ಕನ ಮಕ್ಕಳು ಧಾರವಾಹಿ ರೇಟಿಂಗ್ ವಿಚಾರದಲ್ಲಿ ನಂಬರ್ ಒನ್ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಗಟಿಮೇಳ ಧಾರವಾಹಿ ಕೂಡ ಹಲವಾರು ವರ್ಷಗಳಿಂದ ಪ್ರಸಾರವನ್ನು ಕಾಣುತ್ತಿದೆ. ಅಷ್ಟೊಂದು ಹಳೆಯ ಧಾರವಾಹಿ ಇಂದು ಕೂಡ ಟಾಪ್ ಎರಡರಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ. ಆದರೆ ಈ ಬಾರಿಯ ರೇಟಿಂಗ್ ಹೊರಬಿದ್ದಿದ್ದು ಗಟ್ಟಿಮೇಳ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇದು ಗಟ್ಟಿಮೇಳ ಧಾರವಾಹಿಯ ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಧ್ರುವ ಅದಿತಿ ರವರ ಲವ್ ಸಂಚಿಕೆಗಳು ಎಂದರೆ ತಪ್ಪಾಗಲಾರದು. ಮೊದಲನೇ ಸ್ಥಾನಪಡೆದಿರುವುದಕ್ಕಾಗಿ ನಟ ಹಾಗೂ ನಿರ್ಮಾಪಕರಾಗಿರುವ ರ್ಕ್ಷ ಸೇರಿದಂತೆ ಇಡೀ ಗಟ್ಟಿಮೇಳ ಚಿತ್ರತಂಡ ಹರ್ಷವನ್ನು ವ್ಯಕ್ತಪಡಿಸಿದೆ.

Get real time updates directly on you device, subscribe now.