ಆಧುನಿಕ ಜಗತ್ತನ್ನು ಕೂಡ ಒಂದು ಕ್ಷಣ ದಂಗಾಗಿಸುತ್ತಿರುವ ಈ ದೇವಾಲಯದ ರಹಸ್ಯ ಏನು ಗೊತ್ತೇ?? ನಮ್ಮ ಪೂರ್ವಜರು ಅದೆಂತಹ ದೇವಾಲಯ ನಿರ್ಮಾಣ ಮಾಡಿದ್ದಾರೆ ಗೊತ್ತೇ??

ಆಧುನಿಕ ಜಗತ್ತನ್ನು ಕೂಡ ಒಂದು ಕ್ಷಣ ದಂಗಾಗಿಸುತ್ತಿರುವ ಈ ದೇವಾಲಯದ ರಹಸ್ಯ ಏನು ಗೊತ್ತೇ?? ನಮ್ಮ ಪೂರ್ವಜರು ಅದೆಂತಹ ದೇವಾಲಯ ನಿರ್ಮಾಣ ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದೇಶ ಎನ್ನುವುದು ಹಿಂದೂ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಂತಹ ದೇಶ. ಹೀಗಾಗಿ ಇಲ್ಲಿ ದೇವಾಲಯಗಳ ಸಂಖ್ಯೆ ಕೂಡ ಅತಿಯಾಗಿ ಕಾಣಬಹುದಾಗಿದೆ. ಇನ್ನು ನಾವು ಇಂದು ಮಾತನಾಡಲು ಹೊರಟಿರುವುದು ಕೂಡ ಒಂದು ದೇವಸ್ಥಾನದ ಕುರಿತಂತೆ. ಈ ದೇವಸ್ಥಾನವನ್ನು ಕಟ್ಟಿರುವುದು 130000 ಟನ್ ಗ್ರಾನೆಟ್ ಗಳಿಂದ. ಆದರೆ ಇಲ್ಲಿ ವಿಚಿತ್ರವಾಗಿರುವ ಇನ್ನೊಂದು ಅಂಶವೆಂದರೆ ಇದರ ನೂರು ಕಿಲೋಮೀಟರ್ ಆಸುಪಾಸಿನಲ್ಲಿ ಎಲ್ಲಿಯೂ ಕೂಡ ಗ್ರಾನೆಟ್ ಕ್ವಾರಿಗಳಿಲ್ಲ. ಹಾಗಿದ್ದರೆ ಟ್ರಾನ್ಸ್ಪೋರ್ಟ್ ಗಳು ಸರಿಯಾಗಿ ಇಲ್ಲದಿದ್ದ ಕಾಲದಲ್ಲಿ ನೂರಾರು ಕಿಲೋಮೀಟರ್ ದೂರದಿಂದ ಗ್ರಾನೆಟ್ ಗಳನ್ನು ಸಾಗಿಸಿ ತಂದು ಈ ದೇವಸ್ಥಾನವನ್ನು ಕಟ್ಟಲಾಗಿದೆ.

ಇನ್ನು ಇಂದಿನ ಲೇಸರ್ ಕಟಿಂಗ್ ನಲ್ಲಿ ಕೂಡ ಈ ದೇವಾಲಯದಲ್ಲಿ ಕಂಡುಬರುವಷ್ಟು ಗ್ರಾನೆಟ್ ಗಳನ್ನು ಪರ್ಫೆಕ್ಟ್ ಆಗಿ ಕಟ್ ಮಾಡುವುದಿಲ್ಲ. ಆದರೂ ಅಂದಿನ ಕಾಲದಲ್ಲಿ ನಮ್ಮ ಪೂರ್ವಜರು ಈ ದೇವಸ್ಥಾನವನ್ನು ಇಷ್ಟೊಂದು ಸುಂದರವಾಗಿ ನಿರ್ಮಿಸಿದ್ದಾರೆ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ. ದೇವಸ್ಥಾನದ ಹೊರಮೈಯಲ್ಲಿ ಕಾಣಸಿಗುವ ಕೆತ್ತನೆಗಳು ಖಂಡಿತವಾಗಿ ನಿಮ್ಮನ್ನು ಈ ಕಾಲದ ಶಿಲ್ಪಶಾಸ್ತ್ರದ ಕುರಿತಂತೆ ಒಂದು ಸಣ್ಣ ಝಲಕ್ ತೋರಿಸುವಂತೆ ಮಾಡುತ್ತದೆ. ನಿಜವಾಗಿಯೂ ಕೂಡ ನಯನ ಮನೋಹರವಾಗಿರುವಂತಹ ಕೆತ್ತನೆಗಳು ಈ ದೇವಸ್ಥಾನದ ಹೊರಮೈ ಯಲ್ಲಿ ಕಾಣಸಿಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ದೇವಸ್ಥಾನದ 200 ಅಡಿ ಎತ್ತರದಲ್ಲಿರುವ ಕಲ್ಲನ್ನು ಅಲ್ಲಿಗೆ ತಲುಪಿಸಿದ್ದು ಹೇಗೆ ಎಂಬುದು ಕೂಡ ಆಶ್ಚರ್ಯಕರ ಸಂಗತಿಯಾಗಿದೆ. ಇನ್ನು ಈ ದೇವಸ್ಥಾನ ಇರುವುದು ತಮಿಳುನಾಡಿನ ತಂಜಾವೂರಿನಲ್ಲಿ.

ಈ ದೇಗುಲವನ್ನು ಎಲ್ಲರೂ ದೊಡ್ಡ ದೇಗುಲ ಎಂದು ಕರೆಯುತ್ತಾರೆ. ಈ ದೇವಸ್ಥಾನವಾಗಿದ್ದು 1010 ರಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದು ಚೋಳರ ಪ್ರಖ್ಯಾತ ಅರಸನಾಗಿ ರುವ ಮೊದಲನೇ ರಾಜರಾಜ ಚೋಳ. ಇನ್ನು ಒಂದು ದಿವಸ ರಾಜನ ಕನಸಿನಲ್ಲಿ ಯಾವುದೋ ಶಕ್ತಿ ನನಗೆ ಇರಲು ದೇವಸ್ಥಾನ ಬೇಕು ಕಟ್ಟಿಸಿಕೊಂಡು ಎಂಬುದಾಗಿ ಕೇಳಿದ ತಕ್ಷಣವೇ ಇನ್ನೊಂದು ಕ್ಷಣವು ಕೂಡ ರಾಜ ಯಾವುದನ್ನು ಯೋಚಿಸಿದೆ ದೇವಸ್ಥಾನ ಕೆಲಸವನ್ನು ಪ್ರಾರಂಭ ಗೊಳಿಸುತ್ತಾರೆ. ಇನ್ನು ದೇವಸ್ಥಾನ ನಿರ್ಮಾಣ ಕಾರ್ಯ 1004ಕ್ಕೆ ಪ್ರಾರಂಭವಾಗಿ 1009ಕ್ಕೆ ಮುಕ್ತಾಯವಾಗಿ ಒಂದು ವರ್ಷದ ನಂತರ ಲೋಕಾರ್ಪಣೆ ಆಗುತ್ತದೆ. ಇನ್ನು ಇದರಲ್ಲಿ 9.5 ಅಡಿ ಎತ್ತರದ ಶಿವಲಿಂಗವೂ ಕೂಡಾ ಇದೆ. ಭಾರತದ ಅತ್ಯಂತ ಎತ್ತರದ ಶಿವಲಿಂಗ ಗಳಲ್ಲಿ ಇದು ಕೂಡ ಒಂದು ಅದಕ್ಕಾಗಿ ಇದನ್ನು ಬೃಹದೀಶ್ವರ ಎಂದು ಕರೆಯುತ್ತಾರೆ. ಇನ್ನು ಇಲ್ಲಿ ಏಕಶಿಲಾ ಕೆತ್ತನೆಯ ನಂದಿ ಮೂರ್ತಿ ಕೂಡ ಇದೆ.

ಇನ್ನು ಈ ದೇವಾಲಯದ ಗೋಪುರದ ಎತ್ತರ ಬರೋಬ್ಬರಿ 216 ಅಡಿ. ಇನ್ನು ನಿಮಗೆ ಪೀಸಾ ಗೋಪುರ ಹಾಗೂ ಲಂಡನ್ ನ ಬಿಗ್ ಬೆನ್ ಗಡಿಯಾರದ ಗೋಪುರ ಗೊತ್ತಲ್ವಾ. ಪೀಸಾ ಗೋಪುರ ಈಗಾಗಲೇ ವಾಲುತ್ತಿದೆ ಲಂಡನ್ ನಾ ಬಿಗ್ ಬೆನ್ ಗಡಿಯಾರದ ಗೋಪುರ ಎರಡು ಬಾರಿ ನವೀಕರಣಗೊಂಡಿದೆ. ಆದರೆ ತಂಜಾವೂರಿನಲ್ಲಿರುವ ಈ ದೇವಸ್ಥಾನದ ಗೋಪುರ ಬರೋಬ್ಬರಿ ಸಾವಿರ ವರ್ಷಗಳಿಂದಲೂ ಕೂಡ ಅಲುಗಾಡದೆ ಮಿಸುಕಾಡದೆ ದೃಢವಾಗಿ ನಿಂತಿದೆ. ಹಲವಾರು ಪ್ರಕೃತಿ ವಿಕೋಪಗಳನ್ನು ಎದುರಿಸಿದರು ಕೂಡ ಇಂದಿಗೂ ಅಚಲವಾಗಿ ನಿಂತಿದೆ. ಇನ್ನು ಎಲ್ಲಕ್ಕಿಂತ ಹೆಚ್ಚಾಗಿ 80 ಟನ್ ಭಾರವಿರುವ ಏಕಶಿಲಾ ಕುಂಭವನ್ನು ಆ ದೇವಸ್ಥಾನದ ಮೇಲೆ ಯಾವ ವಸ್ತುವಿನ ಸಹಾಯದಲ್ಲಿ ಆ ಕಾಲದಲ್ಲಿ ಇಟ್ಟಿದ್ದಾರೆ ಎಂಬುದೇ ಚರ್ಚೆಗೆ ನಿಲುಕದ್ದಾಗಿದೆ.

ಆದರೂ ಕೂಡ ಹಲವಾರು ಸಂಶೋಧನೆ ನಂತರ ಅದರ ರಹಸ್ಯ ಕೂಡ ಬಯಲಾಗಿದೆ. ಅದೇನೆಂದರೆ ಮೇಲಿನಿಂದ ಕೆಳಗೆ ಇಳಿಜಾರಿನಂತೆ ಮೆಟ್ಟಿಲುಗಳನ್ನು ರೂಪಿಸಿದ್ದು ನಂತರ 80 ಟನ್ ಭಾರವಿರುವ ಏಕಶಿಲೆಯನ್ನು ಆನೆಗಳ ಸಹಾಯದಿಂದ ಮೇಲೆಕ್ಕೆ ಏರಿಸಿ ಅಲ್ಲಿಯೇ ಕೆತ್ತನೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನು ಅಂದಿನ ಕಾಲದಲ್ಲಿ ಆಗಲಿ ಇಂದಿನ ಕಾಲದಲ್ಲಿ ಆಗಲೇ ಮಾಡಲು ಯಾರಿಗೂ ಕೂಡ ಸಾಧ್ಯವಿಲ್ಲದಂತಹ ಕೆಲಸವಾಗಿದೆ. ಇನ್ನೊಂದು ವಿಚಿತ್ರವಾದ ಸುದ್ದಿಯೇನೆಂದರೆ ಮಧ್ಯಾಹ್ನದ ಹೊತ್ತಿಗೆ ಈ ಗೋಪುರದ ನೆರಳು ಭೂಮಿಗೆ ಗೋಚರಕ್ಕೆ ಸಿಗುವುದಿಲ್ಲ ಅಂತ ಹಾಗಾದರೆ ನೆರಳು ಎಲ್ಲಿ ಮಾಯವಾಗುತ್ತದೆ ಎಂದು ಬಲ್ಲವರು ಕೂಡ ಇಲ್ಲ. ಇನ್ನು ಈ ದೇವಸ್ಥಾನದಲ್ಲಿ ಹಲವಾರು ಗವಿಗಳಿವೆ. ಅಲ್ಲಿಂದ ಹೋದವರು ಅದು ಅರಮನೆಗೆ ದಾರಿಯಾಗಿದೆ ಎಂಬುದನ್ನು ಅನ್ವೇಷಿಸಿದ್ದಾರೆ. ಇನ್ನೂ ಇಲ್ಲ ಇನ್ನೂ ಮುಂದಕ್ಕೆ ಹೋದವರು ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಕೂಡಾ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಈ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ಕಟ್ಟಿಸಿದ ಎಂಜಿನಿಯರ್ ಎಂಬ ಖ್ಯಾತಿಗೆ ಪಾತ್ರರಾಗಿರುವವರು ಕುಂಜರ ಮಲ್ಲನ್ ರಾಜರಾಜ ಪೇರು ನಾಥನ್. ಈ ದೇವಸ್ಥಾನದ ನಿರ್ಮಾಣಕ್ಕೆ ಸಾವಿರಾರು ಕುಶಲಕರ್ಮಿಗಳ ಪರಿಶ್ರಮ ಒಂದಾಗಿದೆ. ಇನ್ನು ಇದು ಇದೇ ಕೌತುಕಗಳ ಹಾಗೂ ವಿಸ್ಮಯಗಳ ಕಾರಣದಿಂದಾಗಿ ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಶಾಮೀಲಾಗಿದೆ. ಅಂತಹ ಪುರಾಣದ ಕಾಲದಲ್ಲಿ ಸಾಕಷ್ಟು ಬುದ್ಧಿಶಕ್ತಿ ಹಾಗೂ ದೇಹ ಶಕ್ತಿಯನ್ನು ಉಪಯೋಗಿಸಿಕೊಂಡು ನಿರ್ಮಾಣ ವಾದಂತಹ ಈ ದೇವಸ್ಥಾನದ ಚರಿತ್ರೆ ಖಂಡಿತವಾಗಿ ವಿಸ್ಮಯಕಾರಿಯಾದದ್ದು.