ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರ್ಚು ಮಾಡಿರುವ ಟಾಪ್ 7 ಹಾಡುಗಳು ಯಾವ್ಯಾವು ಗೊತ್ತೇ??

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರ್ಚು ಮಾಡಿರುವ ಟಾಪ್ 7 ಹಾಡುಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಜೀವಿಗೂ ಕೂಡ ಮನೋರಂಜನೆ ಎನ್ನುವುದು ಬೇಕಾಗುತ್ತದೆ. ಈ ವಿಚಾರದಲ್ಲಿ ಸಿನಿಮಾ ಎನ್ನುವುದು ಖಂಡಿತವಾಗಿ ಮೊದಲನೇ ಆಯ್ಕೆಯಾಗಿರುತ್ತದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಹಾಡುಗಳ ಕುರಿತಂತೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಾಡುಗಳ ಕುರಿತಂತೆ. ಹಾಗಿದ್ದರೆ ಈ ಲಿಸ್ಟಲ್ಲಿ ಯಾವ ಸಿನಿಮಾದ ಯಾವ ಹಾಡು ಇರುತ್ತದೆ ಎಂಬುದನ್ನು ಸವಿವರವಾಗಿ ತಿಳಿಯೋಣ.

ರಾ ವನ್ ಚಿತ್ರದ ಚಮಕ್ ಚಲ್ಲೋ; ಶಾರುಖ್ ಖಾನ್ ಹಾಗೂ ಕರೀನಾ ಕಪೂರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಆಗಿರುವ ರಾ ವನ್ ಸಿನಿಮಾದ ಚಮಕ್ ಚಲ್ಲೋ ಸಾಂಗ್ ಒಂದು ಕಾಲದಲ್ಲಿ ದೊಡ್ಡಮಟ್ಟದ ಸೆನ್ಸೇಶನ್ ಆಗಿತ್ತು. ಈ ಹಾಡನ್ನು ಅಮೆರಿಕದ ಖ್ಯಾತ ಗಾಯಕ ಆಗಿರುವ ಆಕೋನ್ ರವರು ಹಾಡಿದ್ದರು. ಈ ಹಾಡಿಗೆ ಬರೋಬ್ಬರಿ 2.5 ಕೋಟಿಗೂ ಹೆಚ್ಚು ಖರ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ.

ರೋಬೋ ಚಿತ್ರದ ಕಿಲಿಮಂಜಾರೋ; ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಐಶ್ವರ್ಯ ರೈ ಬಚ್ಚನ್ ರವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ರೋಬೋ ಚಿತ್ರದ ಕಿಲಿಮಂಜಾರೋ ಹಾಡಿಗೆ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಖರ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಈ ಸುಂದರವಾದ ಹಾಡಿನ ಚಿತ್ರೀಕರಣ ನಡೆದಿದ್ದು ಪೆರು ದೇಶದಲ್ಲಿ.

ಪುಷ್ಪ ಚಿತ್ರದ ಊ ಅಂಟಾವಾ; ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಇತ್ತೀಚಿಗಿನ ಸೆನ್ಸೇಷನಲ್ ಸೂಪರ್ ಹಿಟ್ ಚಿತ್ರ ಪುಷ್ಪ ಚಿತ್ರದಲ್ಲಿ ಸಮಂತಾ ರವರು ಸೊಂಟ ಬಳುಕಿಸಿರುವ ಊ ಅಂಟಾವಾ ಮಾವ ಐಟಂ ಸಾಂಗಿಗೆ ಬರೋಬ್ಬರಿ 5 ಕೋಟಿಗೂ ಅಧಿಕ ಖರ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ. ಹಾಡು ಸಾಮಾನ್ಯವಾಗಿದ್ದರೂ ಇದಕ್ಕಾಗಿ ಸಮಂತಾ ರವರು ಪಡೆದಿದ್ದ ಸಂಭಾವನೆ ಸರಿಸುಮಾರು 5 ಕೋಟಿಗೆ ಹತ್ತಿರವಿತ್ತು.

ಧೂಮ್ 3 ಚಿತ್ರದ ಮಲಂಗ್; ಅಮೀರ್ ಖಾನ್ ದ್ವಿಪಾತ್ರದಲ್ಲಿ ಹಾಗೂ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದ ಧೂಮ್-3 ಚಿತ್ರ ದೊಡ್ಡ ಮಟ್ಟದಲ್ಲಿ ಹಿ’ಟ್ ಆಗಿತ್ತು. ಈ ಚಿತ್ರದಲ್ಲಿ ಬರುವಂತಹ ಮಲಂಗ್ ಹಾಡಿಗಾಗಿ ಐದು ಕೋಟಿ ರೂಪಾಯಿಗೂ ಅಧಿಕ ಖರ್ಚಾಗಿತ್ತು. ಇದರಲ್ಲಿ ಇನ್ನೂರಕ್ಕೂ ಅಧಿಕ ಜಿಮ್ನಾಸ್ಟಿಕ್ ಪರಿಣಿತರನ್ನು ಉಪಯೋಗಿಸಲಾಗಿತ್ತು. ಇದು ಕೂಡ ಅಮೇರಿಕದಲ್ಲಿ ಚಿತ್ರಿತವಾಗಿರುವ ಹಾಡಾಗಿದೆ.

ಬಾಸ್ ಚಿತ್ರದ ಪಾರ್ಟಿ ಆಲ್ ನೈಟ್; ಅಕ್ಷಯ್ ಕುಮಾರ್ ನಟನೆಯ ಬಾಸ್ ಚಿತ್ರದ ಪಾರ್ಟಿ ಆಲ್ ನೈಟ್ ಎನ್ನುವ ಪಾರ್ಟಿ ಸಾಂಗ್ ಚಿತ್ರೀಕರಿಸುವುದು ಕಾಗಿ ಬರೋಬರಿ ಆರುನೂರಕ್ಕೂ ಅಧಿಕ ವಿದೇಶಿ ಮಾಡೆಲ್ಗಳನ್ನು ಹಿನ್ನೆಲೆ ಡ್ಯಾನ್ಸರ್ ಆಗಿ ಉಪಯೋಗಿಸಲಾಗಿತ್ತು. ಇನ್ನು ಈ ಹಾಡು ಯೋಯೋ ಹನಿ ಸಿಂಗ್ ಅವರು ತಮ್ಮ ಉನ್ನತ ಅವಧಿಯಲ್ಲಿ ಹಾಡಿದಂತಹ ಹಾಡಾಗಿದೆ. ಈ ಹಾಡಿಗಾಗಿ ಬರೋಬ್ಬರಿ ಆರು ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ.

ರಾಮ್ ಲೀಲಾ ಚಿತ್ರದ ರಾಮ್ ಲೀಲಾ ಹಾಡು; ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಈ ಸೂಪರ್ಹಿಟ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ರವರು ರಾಮಲೀಲಾ ಎನ್ನುವ ಐಟಂ ಸಾಂಗ್ ಮಾಡಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಈ ಹಾಡಿಗಾಗಿ ಬರೋಬ್ಬರಿ ಆರು ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಮೊದಲನೇ ಸ್ಥಾನದಲ್ಲಿ ರೋಬೋ 2.0 ಚಿತ್ರದ ಎಂತರ ಲೋಕಪು ಸಾಂಗ್; ಸೂಪರ್ ಸ್ಟಾರ್ ರಜನಿಕಾಂತ್ ಅಕ್ಷಯ್ ಕುಮಾರ್ ಹಾಗೂ ಅಮಿ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 2.0 ಚಿತ್ರದ ಎಂತರ ಲೋಕಪು ಬರೋಬ್ಬರಿ 20 ಕೋಟಿ ಬಜೆಟ್ ನಲ್ಲಿ ಚಿತ್ರೀಕರಣವಾಗಿರುವಂತಹ ಸಾಂಗ್ ಆಗಿದೆ. ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಖರ್ಚಿನಲ್ಲಿ ಚಿತ್ರಿತವಾಗಿರುವ ಸಾಂಗ್ ಇದಾಗಿದೆ ಎಂಬ ಹೆಗ್ಗಳಿಕೆ ಕೂಡ ಇದೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಸಾಂಗ್ ಯಾವುದು ಎನ್ನುವುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.