ರೋಹಿತ್ ನಂತರ ಭಾರತದ ಮುಂದಿನ ನಾಯಕನ ರೇಸ್ ಗೆ ಹೊಸ ಹೆಸರು ಸೇರ್ಪಡೆಗೊಳಿಸಿದ ರವಿ ಶಾಸ್ತ್ರೀ. ಯಾರು ಗೊತ್ತೇ ಆ ಯುವ ಆಟಗಾರ??

ರೋಹಿತ್ ನಂತರ ಭಾರತದ ಮುಂದಿನ ನಾಯಕನ ರೇಸ್ ಗೆ ಹೊಸ ಹೆಸರು ಸೇರ್ಪಡೆಗೊಳಿಸಿದ ರವಿ ಶಾಸ್ತ್ರೀ. ಯಾರು ಗೊತ್ತೇ ಆ ಯುವ ಆಟಗಾರ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಕೇವಲ ಉದಯೋನ್ಮುಖ ಆಟಗಾರರಿಗೆ ಮಾತ್ರವಲ್ಲದೇ ಹಲವರಿಗೆ ಭಾಗ್ಯದ ಬೆಳಕು ನೀಡುತ್ತದೆ.‌ ಅದರಲ್ಲಿ ನಾಯಕತ್ವ ಸಹ. ಐಪಿಎಲ್ ಮೂಲಕ ತಮ್ಮ ನಾಯಕತ್ವದ ಕೌಶಲಗಳನ್ನು ಪ್ರದರ್ಶಿಸಿ, ಸೈ ಅನಿಸಿಕೊಂಡವರು ಇದ್ದಾರೆ. ಇನ್ನು ಸದ್ಯ ಭಾರತ ತಂಡದ ನಾಯಕ ರೋಹಿತ್ ಶರ್ಮಾರವರಿಗೆ 34 ವರ್ಷ. ಅವರಿಗೆ ಈಗಾಗಲೇ ಮುಂದಿನ ನಾಯಕನನ್ನು ಬೆಳೆಸುವ ಮಹತ್ತರ ಜವಾಬ್ದಾರಿಯಿದೆ.

ಈ ನಡುವೆ ಭಾರತ ತಂಡದ ಸಂಭವನೀಯ ನಾಯಕರ ರೇಸ್ ನಲ್ಲಿರುವ ಕನ್ನಡಿಗ ಕೆ.ಎಲ್.ರಾಹುಲ್, ವೇಗದ ಬೌಲರ್ ಜಸಪ್ರಿತ್ ಬುಮ್ರಾ, ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಇದ್ದಾರೆ. ಆದರೇ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಈ ಬಗ್ಗೆ ಮಾತನಾಡಿ ಟೀಂ ಇಂಡಿಯಾ ಕ್ಯಾಪ್ಟನ್ ರೇಸ್ ನಲ್ಲಿ ಈ ಆಟಗಾರರನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಬನ್ನಿ ಆ ಆಟಗಾರ ಯಾರು ಎಂದು ತಿಳಿಯೋಣ.

ಅಷ್ಟಕ್ಕೂ ರವಿಶಾಸ್ತ್ರಿ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ, ಅದು ಸದ್ಯ ಐಪಿಎಲ್ ನ ಹೊಸತಂಡವಾಗಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ಹೌದು ಟೀಂ ಇಂಡಿಯಾದ ಅನುಭವಿ ಆಲ್ ರೌಂಡರ್ ಆಗಿರುವ ಹಾರ್ದಿಕ್ ಪ್ರಸ್ತುತ ಯಶಸ್ವಿ ತಂಡವಾದ ಗುಜರಾತ್ ಟೈಟಾನ್ಸ್ ತಂಡದ ನಾಯಕ. ಆಡಿರುವ ಮೊದಲು ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನ ಪಡೆದಿತ್ತು. ಹಾಗಾಗಿ ಹಾರ್ದಿಕ್ ಪಾಂಡ್ಯ ರವರ ನಾಯಕತ್ವ ಸಹ ಗಮನ ಸೆಳೆದಿತ್ತು. ಇನ್ನು ಹಾರ್ದಿಕ್ ಈ ಭಾರಿ ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದಿಂದ ಗಮನಸೆಳೆದಿದ್ದಾರೆ. ಹಾಗಾಗಿ ಹಾರ್ದಿಕ್ ಪಾಂಡ್ಯ ಸಹ ರೋಹಿತ್ ಶರ್ಮಾ ನಂತರ ಭಾರತ ತಂಡದ ಸಂಭವನೀಯ ನಾಯಕರ ರೇಸ್ ನಲ್ಲಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.