ನನ್ನನ್ನು ಸಿ.ಎಸ್.ಕೆ ತಂಡಕ್ಕೆ ಸೇರಿಸಿಕೊಂಡಿದ್ದು ಧೋನಿ ಅಲ್ಲ ಎಂದ ರಾಬಿನ್ ಉತ್ತಪ್ಪ, ಹಾಗಾದ್ರೆ ಉತ್ತಪ್ಪ ಚೆನ್ನೈ ಸೇರಲು ಕಾರಣ ಯಾರು ಗೊತ್ತೇ??

ನನ್ನನ್ನು ಸಿ.ಎಸ್.ಕೆ ತಂಡಕ್ಕೆ ಸೇರಿಸಿಕೊಂಡಿದ್ದು ಧೋನಿ ಅಲ್ಲ ಎಂದ ರಾಬಿನ್ ಉತ್ತಪ್ಪ, ಹಾಗಾದ್ರೆ ಉತ್ತಪ್ಪ ಚೆನ್ನೈ ಸೇರಲು ಕಾರಣ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡಿಗ ರಾಬಿನ್ ಉತ್ತಪ್ಪ. 2007 ರ ಟೀಂ ಇಂಡಿಯಾ ಚೊಚ್ಚಲ ಟಿ 20 ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯ. ಆ ನಂತರ ಭಾರತ ತಂಡದಲ್ಲಿ ಖಾಯಂ ಸ್ಥಾನ ಗಳಿಸಲು ವಿಫಲರಾದರು. ಆದರೇ ಈ ಮಧ್ಯೆ ಐಪಿಎಲ್ ನಲ್ಲಿ ಪ್ರತಿ ಸೀಸನ್ ನಲ್ಲಿಯೂ ಅದ್ಭುತವಾಗಿ ಆಡಿ ಗಮನ ಸೆಳೆಯುತ್ತಿದ್ದರು. ಆರ್ಸಿಬಿ, ಕೆಕೆಆರ್, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳ ಪರ ರಾಬಿನ್ ಉತ್ತಪ್ಪ ಆಡಿದ್ದರು. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು.

ಆದರೇ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಲು ಎಲ್ಲರೂ ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ತಿಳಿದಿದ್ದರು. ಆದರೇ ಇತ್ತಿಚೆಗೆ ಮಾತನಾಡುವ ವೇಳೆ ರಾಬಿನ್ ಉತ್ತಪ್ಪ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ. ಹೌದು ಸದ್ಯ ಕೇರಳ ತಂಡದ ಪರ ರಣಜಿ ಪಂದ್ಯ ಆಡುತ್ತಿರುವ ರಾಬಿನ್ ಉತ್ತಪ್ಪ , ಒಮ್ಮೆ ಹೈದರಾಬಾದ್ ತಂಡದ ವಿರುದ್ಧ ಆಡುತ್ತಿದ್ದಾಗ, ಆ ತಂಡದ ಆಟಗಾರ ಅಂಬಾಟಿ ರಾಯುಡು ಭೇಟಿಯಾದರಂತೆ.

ಆಗ ಮಾತನಾಡಿದ ಅಂಬಾಟಿ ರಾಯುಡು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿಮ್ಮಂತಹ ಅನುಭವಿ ಆಟಗಾರನ ಅವಶ್ಯಕತೆ ಇದೆ. ನೀವು ಚೆನ್ನೈ ತಂಡ ಸೇರಲು ಇಚ್ಚಿಸುವುದಾದರೇ ನಾನು ಆ ತಂಡದ ಮ್ಯಾನೇಜರ್ ಶಿವಕಾಶಿ ನಂಬರ್ ನೀಡುತ್ತೇನೆ.ನೀವು ಅವರಿಗೆ ಕರೆ ಮಾಡಿ ಎಂದರಂತೆ. ಆ ನಂತರ ರಾಜಸ್ಥಾನ ರಾಯಲ್ಸ್ ತಂಡದಿಂದ , ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಆದರಂತೆ. ಮೊದಲಿಗೆ ರಾಬಿನ್ ಜೊತೆ ಮಾತನಾಡಿದ ಧೋನಿ, ನಿಮಗೆ ಮೊದಲು ಆಡಲು ಅವಕಾಶ ಸಿಗುವುದಿಲ್ಲ. ಸುರೇಶ್ ರೈನಾ ವಿಫಲರಾದರೇ ಮಾತ್ರ ಅವಕಾಶ ಸಿಗಬಹುದು ಎಂದು ಹೇಳಿದರಂತೆ. ನಂತರದಲ್ಲಿ ರೈನಾ ಬದಲು ರಾಬಿನ್ ಉತ್ತಪ್ಪ ಆಡಲು ಅವಕಾಶ ದೊರೆಯಿತು. ಈ ಭಾರಿಯ ಹರಾಜಿನಲ್ಲಿಯೂ ಸಹ ರಾಬಿನ್ ಉತ್ತಪ್ಪ ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿ, ಆರಂಭಿಕನ ಜವಾಬ್ದಾರಿ ನೀಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ