ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಟೀಸರ್ ಬಿಡುಗಡೆ; ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತಾ?? ಈಗ್ಯಾಕೆ ಹೇಳಿದರು??

ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಟೀಸರ್ ಬಿಡುಗಡೆ; ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತಾ?? ಈಗ್ಯಾಕೆ ಹೇಳಿದರು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ನಮ್ಮೆಲ್ಲರ ನೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದ ರಿಲೀಸ್ ಡೇಟ್ ಅನ್ನು ತಿಳಿಸುವಂತಹ ಟೀಸರ್ ಇದೇ ಯುಗಾದಿ ಹಬ್ಬದಂದು ಬಿಡುಗಡೆಯಾಗಿತ್ತು. ಈಗಾಗಲೇ ಬುರ್ಜ್ ಖಲೀಫಾದ ಮೇಲೆ ವಿಡಿಯೋ ತುಣುಕು ಹಾಗೂ ಟೈಟಲನ್ನು ಬಿಡುಗಡೆ ಮಾಡಿದ ದಿನದಿಂದಲೂ ಕೂಡ ವಿಕ್ರಾಂತ್ ರೋಣ ಚಿತ್ರ ಜಾಗತಿಕವಾಗಿ ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ ಸದ್ದು ಮಾಡುತ್ತಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ರವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 3ಡಿ ಸಿನಿಮಾ ವಾಗಿರುವ ವಿಕ್ರಾಂತ್ ರೋಣ ಕೇವಲ ಪಂಚ ಪ್ರಮುಖ ಭಾಷೆಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ನಲ್ಲಿ ಕೂಡ ಬಿಡುಗಡೆಯಾಗುತ್ತಿದೆ. ಚಿತ್ರದ ಟೀಸರ್ ಅನ್ನು ಕನ್ನಡದಲ್ಲಿ ಸ್ವತಃ ಕಿಚ್ಚ ಸುದೀಪ್ ರವರು ತಮಿಳಿನಲ್ಲಿ ಸಿಲಂಬರಸನ್ ರವರು ಮಲಯಾಳಂನಲ್ಲಿ ಲೆಜೆಂಡರಿ ನಟ ಮೋಹನ್ ಲಾಲ್ ರವರು ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ರವರು ಹಾಗೂ ಹಿಂದಿಯಲ್ಲಿ ಸಲ್ಮಾನ್ ಖಾನ್ ರವರು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು. ಚಿತ್ರದ ಇಂಗ್ಲಿಷ್ ಟೀಸರ್ ಅನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬುದಾಗಿ ಸಾಕಷ್ಟು ಕುತೂಹಲ ಮೂಡಿದ್ದವು. ಕೊನೆಗೂ ಆ ರಹಸ್ಯ ಗೊತ್ತಾಗಿಬಿಡ್ತು.

ಹೌದು ಭಾರತೀಯ ತಂಡದ ಮಾಜಿ ಕ್ರಿಕೆಟರ್ ಆಗಿರುವ ವೀರೇಂದ್ರ ಸೆಹ್ವಾಗ್ ಅವರು ಇಂಗ್ಲೀಷ್ ಟೀಸರ್ ಅನ್ನು ಅದ್ದೂರಿಯಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಮಾಡಿದ್ದಾರೆ. ಅವರು ಬಿಡುಗಡೆ ಮಾಡಿ ಹೇಳಿದ್ದೇನು ಗೊತ್ತಾ ಬನ್ನಿ ತಿಳಿಯೋಣ. ಹೌದು ತಮ್ಮ ಸ್ನೇಹಿತ ಕಿಚ್ಚ ಸುದೀಪ್ ರವರ ಮುಂಬರುವ ಚಿತ್ರ ವಿಕ್ರಾಂತ್ ರೋಣದ ಟೀಸರ್ ಬಿಡುಗಡೆ ಮಾಡಿ ನನ್ನ ಗೆಳೆಯ ಕಿಚ್ಚ ಸುದೀಪ್ ರವರ ಮುಂದಿನ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗುತ್ತಿದೆ. ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಈ ಅದ್ಭುತ ಚಿತ್ರವನ್ನು ವೀಕ್ಷಿಸಲು ಸಿದ್ದರಾಗಿ ಎಂಬುದಾಗಿ ಶುಭಹಾರೈಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಚಿತ್ರ ದೊಡ್ಡ ದೊಡ್ಡ ಸೆಲೆಬ್ರೆಟಿಗಳು ಮೂಲಕ ಈಗ ಜಾಗತಿಕವಾಗಿ ಸದ್ದು ಮಾಡಲು ಸಿದ್ಧವಾಗಿದೆ ಎಂದು ಹೇಳಬಹುದಾಗಿದೆ. ಕೆಜಿಎಫ್ ನಂತರ ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ ಜಾಗತಿಕಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಲು ವಿಕ್ರಾಂತ್ ರೋಣ ಸಿದ್ಧನಾಗಿದ್ದಾನೆ ಎಂದು ಹೇಳಬಹುದಾಗಿದೆ.