ಐಪಿಎಲ್ ಆರಂಭವಾಗಿ ಇಷ್ಟು ದಿನಗಳ ಬಳಿಕ ಬಿಸಿಸಿಐ ಕಡೆಯಿಂದ ಕೊನೆಗೂ ಸಿಕ್ತು ಸಿಹಿ ಸುದ್ದಿ, ಅಭಿಮಾನಿಗಳಂತೂ ಫುಲ್ ಕುಶ್. ಯಾಕೆ ಗೊತ್ತೇ??

ಐಪಿಎಲ್ ಆರಂಭವಾಗಿ ಇಷ್ಟು ದಿನಗಳ ಬಳಿಕ ಬಿಸಿಸಿಐ ಕಡೆಯಿಂದ ಕೊನೆಗೂ ಸಿಕ್ತು ಸಿಹಿ ಸುದ್ದಿ, ಅಭಿಮಾನಿಗಳಂತೂ ಫುಲ್ ಕುಶ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಹಲವಾರು ವಿಚಾರಗಳು ಪ್ರಮುಖವಾದ ಸಂತೋಷವನ್ನು ಜನರಿಗೆ ತಂದುಕೊಡುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಲವಾರು ವಿಚಾರಗಳಲ್ಲಿ ಜಾತಿ-ಧರ್ಮದ ಅಂತರ ಬರುತ್ತದೆ ಆದರೆ ಕ್ರೀಡೆಯಲ್ಲಿ ಮಾತ್ರ ಇವುಗಳನ್ನು ಮರೆತು ಎಲ್ಲರೂ ಒಂದಾಗಿ ತಮ್ಮ ನೆಚ್ಚಿನ ತಂಡಗಳಿಗೆ ಸಪೋರ್ಟ್ ಮಾಡುತ್ತಾರೆ. ಈಗ ನಾವು ಮಾತನಾಡುತ್ತಿರುವುದು ಧರ್ಮದ ಚೌಕಟ್ಟೇ ಇಲ್ಲದಂತಹ ಇಡೀ ಭಾರತ ದೇಶದ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಕುರಿತಂತೆ. ಅಂತರಾಷ್ಟ್ರೀಯ ಮಟ್ಟದ ಟೂರ್ನಮೆಂಟಿಗೆ ಹಲವಾರು ದೇಶದ ಆಟಗಾರರು ಬರಲು ಹಪಹಪಿಸುತ್ತಾರೆ.

ಹೊಸ ಹೊಸ ಪ್ರತಿಭೆಗಳಿಗೆ ಕೂಡ ಐಪಿಎಲ್ ವೇದಿಕೆ ಆಗಿರುತ್ತದೆ. ಐಪಿಎಲ್ ನಲ್ಲಿ ಚೆನ್ನಾಗಿ ಆಡಿದರೆ ಆಯಾಯ ದೇಶಗಳ ರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವ ಅಂತಹ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಐಪಿಎಲ್ ಟೂರ್ನಮೆಂಟ್ ಎನ್ನುವುದು ಪ್ರತಿವರ್ಷ ಕೂಡ ಸಾಕಷ್ಟು ಮಹತ್ವವನ್ನು ವಹಿಸಿರುತ್ತದೆ. ಇನ್ನು ಈ ಬಾರಿಯ ಐಪಿಎಲ್ ಈಗಾಗಲೇ ಪ್ರಾರಂಭವಾಗಿದ್ದು ಪ್ರತಿಯೊಂದು ಪಂದ್ಯಗಳು ಕೂಡ ರೋಚಕತೆಯಿಂದ ಕೂಡಿವೆ. ಪ್ರೇಕ್ಷಕರು ಕೂಡ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಆದರೆ ಸ್ಟೇಡಿಯಂನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಬೇಸರ ಅವರಲ್ಲಿ ಕಾಣಿಸಿಕೊಂಡಿತ್ತು. ಹೌದು ಅದೇನೆಂದರೆ ಈ ಬಾರಿಯ ಐಪಿಎಲ್ ನಲ್ಲಿ ಕೂಡ ಕೆಲವೇ ಕೆಲವು ಆಯ್ದ ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂನಲ್ಲಿ ಕ್ರಿಕೆಟ್ ನೋಡುವ ಅವಕಾಶವನ್ನು ನೀಡಲಾಗಿತ್ತು.

ಆದರೆ ಈಗ ಬಿಸಿಸಿಐ ಕ್ರಿಕೆಟ್ ಅಭಿಮಾನಿಗಳಿಗೆ ಯುಗಾದಿ ಹಬ್ಬದ ವಿಶೇಷವಾಗಿ ದೊಡ್ಡ ಸಂತೋಷದ ವಿಚಾರವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಬಿಸಿಸಿಐ ಹೊರಡಿಸಿರುವ ಹೊಸ ಘೋಷಣೆಯಿಂದ ಖಂಡಿತವಾಗಿ ಕ್ರಿಕೆಟ್ ಪ್ರೇಮಿಗಳಿಗೆ ಸಂತೋಷ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಎಪ್ರಿಲ್ 6ರಿಂದ ಪ್ರಾರಂಭವಾಗುವ ಅಂತಹ ಎಲ್ಲಾ ಪಂದ್ಯಗಳಿಂದ ಸ್ಟೇಡಿಯಂನಲ್ಲಿ 50% ಸೀಟಿಂಗ್ ಗೆ ಅವಕಾಶ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆನಂದಿಸಬಹುದಾಗಿದೆ. ಅಭಿಮಾನಿಗಳು ನಡುವೆ ಕ್ರಿಕೆಟ್ ಆಡುವುದಕ್ಕೆ ಕೂಡ ಕ್ರಿಕೆಟಿಗರಿಗೆ ಖಂಡಿತವಾಗಿ ನೆಕ್ಸ್ಟ್ ಲೇವೆಲ್ ಉತ್ಸಾಹ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.