RRR ಯಶಸ್ಸು ಪಡೆದ ಬೆನ್ನಲ್ಲೇ ರಾಜಮೌಳಿ ಮುಂದಿನ ಚಿತ್ರದ ಬಗ್ಗೆ ಬಾರಿ ಅಪ್ಡೇಟ್, ಈ ಬಾರಿ ಬಜೆಟ್ ಎಷ್ಟು ಕೋಟಿ ಗೊತ್ತೇ?? ನಾಯಕನ್ಯಾರು ಗೊತ್ತೇ?

RRR ಯಶಸ್ಸು ಪಡೆದ ಬೆನ್ನಲ್ಲೇ ರಾಜಮೌಳಿ ಮುಂದಿನ ಚಿತ್ರದ ಬಗ್ಗೆ ಬಾರಿ ಅಪ್ಡೇಟ್, ಈ ಬಾರಿ ಬಜೆಟ್ ಎಷ್ಟು ಕೋಟಿ ಗೊತ್ತೇ?? ನಾಯಕನ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ರಾಜಮೌಳಿಯವರು ಸಿನಿಮಾವನ್ನು ನಿರ್ದೇಶನ ಮಾಡಿದರೆ ಖಂಡಿತವಾಗಿಯೂ ಚಿತ್ರ ಬಾಕ್ಸಾಫೀಸ್ ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದನ್ನು ಚಿಕ್ಕ ಮಕ್ಕಳು ಕೂಡ ಅನುಮಾನವಿಲ್ಲದೆ ಹೇಳುತ್ತಾರೆ. ಅಷ್ಟರಮಟ್ಟಿಗೆ ರಾಜಮೌಳಿಯವರು ತಮ್ಮ ಸಿನಿಮಾಗಳ ಮೂಲಕ ಭಾರತದ ಸಿನಿಮಾ ಪ್ರೇಕ್ಷಕರಲ್ಲಿ ನಂಬಿಕೆಯನ್ನು ಹುಟ್ಟುಹಾಕಿದ್ದಾರೆ.

ಈಗಾಗಲೇ ಬಾಹುಬಲಿ ಸರಣಿ ಚಿತ್ರಗಳ ಮೂಲಕ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಬಹುದು ಎನ್ನುವುದನ್ನು ಭಾರತೀಯ ಚಿತ್ರರಂಗದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸಾಬೀತುಪಡಿಸಿ ತೋರಿಸಿದವರು. ಇನ್ನು ಈಗ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಆರ್ ಆರ್ ಆರ್ ಚಿತ್ರ ಕೂಡ ಇದಾಗಲೇ ನೂರು ಕೋಟಿ ಕಲೆಕ್ಷನ್ ಅನ್ನು ಪೂರೈಸಿದೆ ಹಾಗೂ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವಂತಹ ಸುಳಿವನ್ನು ಈಗಾಗಲೇ ತೋರಿಸಿದೆ. ಹೀಗಾಗಿ ರಾಜಮೌಳಿಯವರು ತಮ್ಮ ರೆಕಾರ್ಡ್ ಅನ್ನು ತಾವೇ ಮುರಿಯುತ್ತಿದ್ದಾರೆ. ಆರ್ ಆರ್ ಆರ್ ಚಿತ್ರದ ನಂತರ ರಾಜಮೌಳಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದಾಗಿ ಎಲ್ಲರೂ ಕೂಡ ದೊಡ್ಡ ಪ್ರಶ್ನೆಯಾಗಿ ಉಳಿದುಕೊಂಡಿತ್ತು. ಈಗ ಆ ಪ್ರಶ್ನೆಗೆ ಉತ್ತರ ಹಾಗೂ ಎಷ್ಟು ಕೋಟಿ ಬಜೆಟ್ ನಲ್ಲಿ ಸಿನಿಮಾ ಮೂಡಿಬರಲಿದೆ ಎನ್ನುವ ಕಂಪ್ಲೀಟ್ ಡೀಟೇಲ್ಸ್ ಸಿಕ್ಕಿದೆ. ಹಾಗಿದ್ದರೆ ಸಹಸ್ರಾರು ಲಕ್ಷಾಂತರ ಅಭಿಮಾನಿಗಳ ಈ ಪ್ರಶ್ನೆಗೆ ಸಿಕ್ಕಿರುವ ಉತ್ತರವಾದರೂ ಏನು ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ರಾಜಮೌಳಿ ಅವರ ಮುಂದಿನ ಸಿನಿಮಾ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬುರವರ ಜೊತೆಗೆ. ಈ ಸಿನಿಮಾವನ್ನು ಕೆಎಲ್ ನಾರಾಯಣ್ ರವರು ನಿರ್ಮಾಣ ಮಾಡಲಿದ್ದಾರಂತೆ. ಚಿತ್ರವು ಆಫ್ರಿಕನ್ ಕಾಡುಗಳಲ್ಲಿ ಆಕ್ಷನ್ ಅಡ್ವೆಂಚರ್ ಮಾದರಿಯಲ್ಲಿ ನಿರ್ಮಾಣವಾಗಲಿದೆ ಎಂಬುದಾಗಿ ಸುದ್ದಿ ಕೇಳಿ ಬಂದಿದೆ. ಇನ್ನು ಈ ಚಿತ್ರಕ್ಕಾಗಿ ಬರೋಬ್ಬರಿ 800 ಕೋಟಿ ಬಜೆಟ್ ವಿನಿಯೋಗವಾಗಲಿದೆ ಎನ್ನುವ ಸುದ್ದಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಇದು ಇಡೀ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಚಿತ್ರಕ್ಕಾಗಿ ಮಹೇಶ್ ಬಾಬು ರವರು ಕೂಡ ಕಾತರರಾಗಿದ್ದಾರೆ ಎಂಬುದನ್ನು ಈಗಾಗಲೇ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಸಿನಿಮಾ ಹಾಲಿವುಡ್ ಸಿನಿಮಾಗಳ ರೆಕಾರ್ಡ್ ಕೂಡ ಬ್ರೇ’ಕ್ ಮಾಡಲಿ ಎಂಬುದಾಗಿ ಆಶಿಸೋಣ.