ಬಿಗ್ ನ್ಯೂಸ್: PSB ಲೋನ್ ನ ಅಡಿಯಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ 5 ಕೋಟಿ ವರೆಗೆ ಲೋನ್ ಪಡೆಯುವುದು ಹೇಗೆ ಗೊತ್ತೇ??

ಬಿಗ್ ನ್ಯೂಸ್: PSB ಲೋನ್ ನ ಅಡಿಯಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ 5 ಕೋಟಿ ವರೆಗೆ ಲೋನ್ ಪಡೆಯುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈ ಸಾಲವನ್ನು ಸಣ್ಣ ಉದ್ಯೋಗ ಮಧ್ಯಮ ಉದ್ಯೋಗಕ್ಕಾಗಿ ಮೀಸಲಿಟ್ಟಿದೆ ಸರ್ಕಾರ. ಕೆಲವೇ ಕೆಲವು ದಾಖಲೆಗಳನ್ನು ನೀಡಿ ನೀವು ನಿಮಗೆ ಅಗತ್ಯವಿರುವಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಇದನ್ನು ಸಾರ್ವಜನಿಕ ವಲಯದ ಬ್ಯಾಂಕ್ ಸಾಲಗಳು ಅಥವಾ ಪಿ ಎಸ್ ಬಿ ಎಂದೇ ಕರೆಯಲಾಗುತ್ತದೆ. ಈ ಸಲ ಯೋಜನೆಯ ವಿಶೇಷತೆಯೆಂದರೆ ಕೇವಲ 59 ನಿಮಿಷಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹೇಗೆ ಗೊತ್ತಾ ಮುಂದೆ ಓದಿ.

ಹೌದು,ಸೆಪ್ಟೆಂಬರ್ 29, 2018 ರಂದು ಈ ಸಾಲವನ್ನು ನೀಡಲು psbloansin59minutes.com ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ. ಅಲ್ಲದೇ ಈ ವರ್ಷದ ಫೆಬ್ರವರಿ 28 ರವರೆಗೆ ವ್ಯಾಪಾರ ಸಾಲ ವಿಭಾಗದಲ್ಲಿ 39,580 ಕೋಟಿ ಮೊತ್ತದ 2,01,863 ಪ್ರಸ್ತಾವನೆಗಳನ್ನು ವಿತರಿಸಿದೆ. ಕೇವಲ 59 ನಿಮಿಷಗಳಲ್ಲಿ ಪೀ ಎಸ್ ಬಿ ಬಿಸಾಲಗಳು ಲಭ್ಯ. ಇದು ಸಣ್ಣ ವ್ಯವಹಾರಗಳಿಗೆ ಮೀಸಲಾಗಿದೆ. ಕನಿಷ್ಠ ಒಂದು ಲಕ್ಷದಿಂದ 5 ಕೋಟಿ ರೂ.ವರೆಗಿನ ಮೊತ್ತವನ್ನು ಇದರಲ್ಲಿ ಸಾಲ ಪಡೆಯಬಹುದು. ಇನ್ನು ಈ ಸಾಲಕ್ಕೆ ಬಡ್ಡಿಯ ದರವು ವರ್ಷಕ್ಕೆ 8.5 ಪ್ರತಿಶತದಿಂದ ಆರಂಭವಾಗುತ್ತದೆ. ಸಾಲವನ್ನು ಪಡೆಯಲು ಕನಿಷ್ಠ ದಾಖಲೆಗಳನ್ನು ಮಾತ್ರ ಸಲ್ಲಿಸಿದರೆ ಸಾಕು.

ಇನ್ನು ಅಗತ್ಯವಿರುವ ದಾಖಲೆಗಳೆಂದರೆ ಸಾಲ ಪಡೆಯುವವರ ಜಿ ಎಸ್ ಟಿ, ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್ ಪೇಪರ್‌ಗಳು, ಭರ್ತಿ ಮಾಡಿದ ಅರ್ಜಿ, ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳು, ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ನ ವಿವರಗಳು, ಸಾಲಗಳ ವಿವರಗಳು ಈ ದಾಖಲೆಗಳನ್ನು ನೀವು ಸಲ್ಲಿಸಬೇಕು. ಇನ್ನು ಸಾಲ ನೋಂದಾಯಿಸಿಕೊಳ್ಳಲು ಈ ರೀತಿ ಮಾಡಬೇಕು. ಮೊದಲಿಗೆ ಪೋ ಎಸ್ ಬಿ ಅಧಿಕೃತ ವೆಬ್‌ಸೈಟ್ psbloansin59minutes.com ಗೆ ಹೋಗಿ ಅಲ್ಲಿ ರಿಜಿಸ್ಟರ್ ಅನ್ನು ಕ್ಲಿಕ್ ಮಾಡಿ. ನಂತರ ಸಾಲದಾರನ ಹೆಸರು, ಇಮೇಲ್, ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ. ನಂತರ ಓಟಿಪಿ ಪಡೆಯಿರಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿಯನ್ನ ಪಡೆದು ನಿಮ್ಮ ಹೆಸರನ್ನು ನೋಂದಾಯಿಸಿ.

ಬಳಿಕ ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಿ ಅಲ್ಲಿನ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುವುದರ ಮೂಲಕ ಮುಂದುವರೆಯಿರಿ. ಎಲ್ಲಾ ಕಾಲಮ್‌ಗಳನ್ನು ನಮೂದಿಸಿದ ನಂತರ ‘ಮುಂದುವರಿಯಿರಿ’ ಕ್ಲಿಕ್ ಮಾಡಿ ಈಗ ಖಾತೆಗಾಗಿ ಪಾಸ್‌ವರ್ಡ್ ರಚಿಸಬೇಕು. ಖಾತೆಯೇನೋ ತೆರೆದಾಯಿತು. ಈಗ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ನೋಡೋಣ. ನಿಮ್ಮ ಹೊಸದಾಗಿ ರಚಿಸಿದ ಖಾತೆಗೆ ಮೊದಲು ಲಾಗಿನ್ ಆಗಿ. ವ್ಯಾಪಾರ ಅಥವಾ ಎಂ ಎಸ್ ಎಂ ಈ ಸಾಲವನ್ನು ಪಡೆಯಲು ನಿಮ್ಮ ಪ್ರೊಫೈಲ್ ಅನ್ನು ‘ವ್ಯಾಪಾರ’ ಎಂದು ಆಯ್ಕೆಮಾಡಿ. ನಂತರ ಪ್ರೋಸಿಡ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಇಲ್ಲಿ ಪ್ರೊಫೈಲ್ ರಚಿಸಿ, ನಿಮ್ಮ ವ್ಯಾಪಾರದ ಪ್ಯಾನ್ ವಿವರಗಳನ್ನು ನಮೂದಿಸಿ ಮತ್ತು ‘ಮುಂದುವರಿಯಿರಿ’ ಎಂಬುದರ ಮೇಲೆ ಕ್ಲಿಕ್ ಮಾಡಿ.

ಕಳೆದ 6 ತಿಂಗಳು ನಿಮ್ಮ ಜಿ ಎಸ್ ಟಿ ವಿವರಗಳು, ತೆರಿಗೆ ರಿಟರ್ನ್ಸ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ. ನಂತರ ನಿಮ್ಮ ಐಟಿಆರ್ ಅನ್ನು ಅಪ್‌ಲೋಡ್ ಮಾಡಿ, ಇತರ ಅಗತ್ಯ ವಿವರಗಳನ್ನು ನಮೂದಿಸಿ. ಇಲ್ಲಿ ನಿಮ್ಮ ಬ್ಯಾಂಕ್ ವಿವರಗಳನ್ನು ನಮೂದಿಸಬೇಕಾಗುತ್ತದೆ.

ಈ ಎಲ್ಲಾ ಮಾಹಿತಿಗಳು ಭರ್ತಿಯಾದ ಬಳಿಕ ಒಟಿಪಿ ಯೊಂದು ನಿಮಾಂ ಮೊಬೈಲ್ ಗೆ ಬರುತ್ತದೆ. ನಿಮ್ಮ ಇಮೇಲ್ ವಿಳಾಸವನ್ನು ಪರಿಶೀಲಿಸಲು ಅದನ್ನು ನಮೂದಿಸಿ. ನಂತರ ನೀವು ಈ ಸಾಲವನ್ನು ತೆಗೆದುಕೊಳ್ಳಲು ಬಯಸುವ ನಿಮ್ಮ ಬ್ಯಾಂಕ್ ಮತ್ತು ಅದರ ಶಾಖೆಯನ್ನು ಆಯ್ಕೆಮಾಡಿ ಅದರ ಮಾಹಿತಿ ನೋಡಿ. ಕೂಡಲೇ ನೀವು ಬ್ಯಾಂಕ್‌ನಿಂದ ತಾತ್ವಿಕ ಅನುಮೋದನೆಯನ್ನು ಸ್ವೀಕರಿಸುತ್ತೀರಿ. ನೀವು ಸಲ್ಲಿಸಿದ ಎಲ್ಲ ದಾಖಲೆಗಳು ಸರಿದ ಇದ್ದು, ಪರಿಶೀಲನೆ ಆದ ನಂತರ ಕೇವಲ 59 ನಿಮಿಷಗಳಲ್ಲಿ ನಿಮ್ಮ ಖಾತೆಗೆ ಸಾಲದ ಮೊತ್ತ ಬಂದು ಸೇರುತ್ತದೆ