ದಿ ಕಾಶ್ಮೀರಿ ಫೈಲ್ಸ್ ಜನರ 4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ಎಂದ ಗ್ರೇಟೆಸ್ಟ್ ನಿರ್ದೇಶಕ ರಾಜಗೋಪಾಲ್ ವರ್ಮ. ಯಾವ್ಯಾವ ಕಲ್ಪನೆ ಗೊತ್ತೇ??

ದಿ ಕಾಶ್ಮೀರಿ ಫೈಲ್ಸ್ ಜನರ 4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ಎಂದ ಗ್ರೇಟೆಸ್ಟ್ ನಿರ್ದೇಶಕ ರಾಜಗೋಪಾಲ್ ವರ್ಮ. ಯಾವ್ಯಾವ ಕಲ್ಪನೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ದಿ ಕಾಶ್ಮೀರಿ ಫೈಲ್ಸ್. ಹೌದು ಈ ಚಿತ್ರ ಮೊದಲ ದಿನ ಮೂರು ಕೋಟಿ ಆಸುಪಾಸಿನಲ್ಲಿ ಬಾಕ್ಸಾಫೀಸ್ ನಲ್ಲಿ ಗಳಿಸಿತ್ತು. ಆದರೆ ಇದೀಗ 14ನೇ ದಿನದ ಅಂತ್ಯಕ್ಕೆ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಚಿತ್ರವಲ್ಲ ಕಾಶ್ಮೀರಿ ಪಂಡಿತರ ಭಾವನೆ ಎಂಬುದಾಗಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ.

ಇನ್ನು ನಮ್ಮ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸುದ್ದಿಯಾಗಿರುವ ನಿರ್ದೇಶಕರೆಂದರೆ ಅದು ರಾಮ್ ಗೋಪಾಲ್ ವರ್ಮಾ ರವರು. ಸ್ವತಹ ಅವರೇ ನಮ್ಮ ಭಾರತೀಯರಲ್ಲಿ ಇದ್ದಂತಹ ನಾಲ್ಕು ತಪ್ಪುಕಲ್ಪನೆಗಳನ್ನು ದಿ ಕಾಶ್ಮೀರಿ ಫೈಲ್ಸ್ ಚಿತ್ರ ತೊಡೆದುಹಾಕಿದೆ ಎಂಬುದಾಗಿ ವಿವರಿಸಿದ್ದಾರೆ. ಹಾಗಿದ್ದರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೆಯದು ಏನೆಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದ ಸಿನಿಮಾ ಪ್ರೇಕ್ಷಕರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನೆಂದರೆ ಒಂದು ಸಿನಿಮಾ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡಬೇಕು ಎಂದರೆ ಸ್ಟಾರ್ ನಟರು ಇದ್ದರೆ ಮಾತ್ರ ಸಾಧ್ಯ ಎಂಬುದಾಗಿ ಮೂ’ಢನಂಬಿಕೆ ಇತ್ತು. ದಿ ಕಾಶ್ಮೀರ್ ಫೈಲ್ಸ್ ಚಿತ್ರ ವಿಚಾರಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದೆ ಎಂಬುದಾಗಿ ಹೇಳಿದ್ದಾರೆ. ಯಾವುದೇ ಸ್ಟಾರ್ ನಟ ಇಲ್ಲ ಆದರೆ ಸ್ಟಾರ್ ಕಂಟೆಂಟ್ ಇರುವುದರಿಂದಾಗಿ ಈ ಚಿತ್ರ ಈಗಾಗಲೇ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆಗಿದೆ ಎಂಬುದಾಗಿ ರಾಮ್ ಗೋಪಾಲ್ ವರ್ಮಾ ರವರು ಹೇಳುತ್ತಾರೆ.

ಎರಡನೇದಾಗಿ ಕೇವಲ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿರುವ ಅಂತಹ ಸಿನಿಮಾಗಳನ್ನು ಮಾತ್ರ ಪ್ರೇಕ್ಷಕರು ಸಿನಿಮಾ ಥಿಯೇಟರ್ ಗಳಲ್ಲಿ ಮುಗಿಬಿದ್ದು ನೋಡುತ್ತಾರೆ ಎನ್ನುವುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಅತಿ ಕಡಿಮೆ ಬಜೆಟ್ ನಲ್ಲಿ ನಿರ್ಮಾಣಗೊಂಡು ಈಗಾಗಲೇ 200 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ದಾಟಿದೆ. ಈ ವಿಚಾರವನ್ನು ಕೂಡ ರಾಮ್ ಗೋಪಾಲ್ ವರ್ಮಾ ರವರು ವಿವರಿಸಿದ್ದಾರೆ.

ಮೂರನೆಯ ತಪ್ಪುಕಲ್ಪನೆ ಏನೆಂದರೆ ಪ್ರತಿಯೊಂದು ಬಾಲಿವುಡ್ ಚಿತ್ರಗಳು ಕೂಡ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋ ವನ್ನು ಅವಲಂಬಿಸಿರುತ್ತವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತೀಯ ಟೆಲಿವಿಜನ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ರೇಟಿಂಗ್ ಪಡೆಯುವಂತಹ ಹಾಗೂ ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿರುವಂತಹ ಶೋ ಇದಾಗಿದೆ. ಹೀಗಾಗಿ ಇಲ್ಲಿ ಬಂದು ಪ್ರಚಾರ ಮಾಡಿದರೆ ಖಂಡಿತವಾಗಿ ನಮ್ಮ ಚಿತ್ರಕ್ಕೆ ಒಳ್ಳೆ ಪ್ರಮೋಷನ್ ಸಿಗುತ್ತದೆ ಎನ್ನುವುದು ಬಾಲಿವುಡ್ ಚಿತ್ರ ನಿರ್ಮಾಪಕರ ತಪ್ಪು ಕಲ್ಪನೆಯಾಗಿದೆ. ಯಾಕೆಂದರೆ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಕಪಿಲ್ ಶರ್ಮ ಕಾರ್ಯಕ್ರಮದಲ್ಲಿ ಪ್ರಮೋಷನ್ ಮಾಡದೇ ಇದ್ದರೂ ಕೂಡ ಈಗಾಗಲೇ ದೇಶದಾದ್ಯಂತ ವಿದೇಶಗಳಲ್ಲಿಯೂ ಕೂಡ ಪ್ರಚಾರವನ್ನು ಪಡೆದುಕೊಂಡಿದೆ. ಬಾಲಿವುಡ್ ಫಿಲಂ ಮೇಕರ್ ಗಳ ಈ ನಂಬಿಕೆ ಹಾಗೂ ತಪ್ಪುಕಲ್ಪನೆಗಳನ್ನು ಕೂಡ ಈ ಚಿತ್ರ ನಿವಾರಿಸಿದೆ ಎಂದು ಹೇಳಬಹುದಾಗಿದೆ.

ಕೊನೆದಾಗಿ ನೀವು ಗಮನಿಸಿರಬಹುದು ಬಹುತೇಕ ಎಲ್ಲಾ ಸಿನಿಮಾಗಳಲ್ಲಿಯೂ ಕೂಡ ಚಿತ್ರ ಗೆಲ್ಲಲು ಒಂದು ಸೂಪರ್ ಹಿಟ್ ಸಾಂಗ್ ಬೇಕೇ ಬೇಕು ಎನ್ನುವುದಾಗಿ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಈ ಎಲ್ಲಾ ಸೂತ್ರಗಳನ್ನು ಮೀರಿ ಕೇವಲ ಕಂಟೆಂಟ್ ಮೂಲಕ ಜನರ ಮನಸ್ಸನ್ನು ಗೆದ್ದು ಈಗಾಗಲೇ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆಗಿದೆ.

ಹೀಗಾಗಿ ಈಗಾಗಲೇ ದಿ ಕಾಶ್ಮೀರಿ ಪೈಲ್ಸ್ ಚಿತ್ರ ಕಾಶ್ಮೀರದಲ್ಲಿ ನಡೆದಿರುವಂತಹ ಎಲ್ಲಾ ಘಟನೆಗಳ ಸತ್ಯಾಂಶವನ್ನು ಹೊರಹಾಕಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದಾಗಿ ಭಾರತದ ಗ್ರೇಟೆಸ್ಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜಗೋಪಾಲ್ ವರ್ಮಾ ರವರು ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.