ಪೋಸ್ಟ್ ಆಫೀಸ್ ನಲ್ಲಿ ಈ ಕಡಿಮೆ ಹಣ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ, ಕೇವಲ 5 ವರ್ಷದಲ್ಲಿ 14 ಲಕ್ಷ. ಗಳಿಸಿ. ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.

ಪೋಸ್ಟ್ ಆಫೀಸ್ ನಲ್ಲಿ ಈ ಕಡಿಮೆ ಹಣ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ, ಕೇವಲ 5 ವರ್ಷದಲ್ಲಿ 14 ಲಕ್ಷ. ಗಳಿಸಿ. ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.

ನಮಸ್ಕಾರ ಸ್ನೇಹಿತರೇ, ದೇಶದ ಅಂಚೆಕಛೇರಿ ಎಷ್ಟು ನಂಬಿಕಸ್ಥ ಹಾಗೂ ಉಪಯುಕ್ತವಾದ ಸಂಸ್ಥೆ ಎಂಬುದು ನಿಮಗೂ ಗೊತ್ತು. ಇದರಲ್ಲಿ ನೀವು ನಿಮಗೆ ಅಗತ್ಯವಿರುವಷ್ಟು, ನಿಮ್ಮ ಕೈಲಾದಷ್ಟು ಹಣವನ್ನು ಹೂಡಿಕೆ ಮಾಡಿ ಬಹಳ ಕಡಿಮೆ ಅವಧಿಗೆ ಹೆಚ್ಚಿನ ಮೊತ್ತವನ್ನು ಪಡೆಯಬಹುದಾಗಿದೆ. ಇಂಥ ಒಂದು ಸುಲಭ ಸ್ಕಿಮ್ ಬಗ್ಗೆ ನಾವಿಲ್ಲಿ ಹೇಳ್ತೀವಿ ಮುಂದೆ ಓದಿ.

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎಂ ಎಸ್ ಸಿ) ಸತ್ಯ ಪೋಸ್ಟ್ ಆಫೀಸ್ ನಲ್ಲಿ ಇರುವ ಅತ್ಯಂತ ವಿಶ್ವಾಸಾರ್ಹ ಉಳಿತಾಯ ಯೋಜನೆಯಾಗಿದೆ. ಇದರಲ್ಲಿ ಸಾಕಷ್ಟು ಜನ ನಂಬಿಕೆ ಇಟ್ಟು ಹೂಡಿಕೆಯನ್ನು ಮಾಡುತ್ತಾರೆ. ಇದರ ವಿಶೇಷತೆ ಅಂದರೆ ಹಿರಿಯ ನಾಗರಿಕರು ಏಕರೂಪದ ಮಾಸಿಕ ಆದಾಯವನ್ನು ಪಡೆಯಲು ಈ ಯೋಜನೆಯನ್ನು ಬಳಸಬಹುದು ಎನ್ ಎಸ್ ಸಿಗಳನ್ನು ಒಬ್ಬ ವ್ಯಕ್ತಿ ಅಥವಾ ಅಪ್ರಾಪ್ತರ ಪರವಾಗಿ ಖರೀದಿಸಬಹುದು. ಯೋಜನೆಯಲ್ಲಿ ಜಂಟಿ ಖಾತೆಯನ್ನು ತೆರೆಯಬಹುದು ಕೂಡ.

ಇನ್ನೂ ಯೋಜನೆಯಲ್ಲಿ ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕಕ್ಕೆ ನಿಗದಿಪಡಿಸುತ್ತದೆ ಸರ್ಕಾರ. ಈಗಿನ ದರವು 6.8% ಆಗಿದೆ. ನೀವು ಇಂದು 1,000 ರೂ.ಗೆ ಎನ್ ಎಸ್ ಸಿಯನ್ನು ಖರೀದಿಸಿದರೆ ನಿಮ್ಮ ಹೂಡಿಕೆಯು ಐದು ವರ್ಷಗಳಲ್ಲಿ 1,389 ರೂ.ಗೆ ಏರುತ್ತದೆ. ಗರಿಷ್ಠ ಮಿತಿ ಇಲ್ಲದಿರುವುದರಿಂದ ಯಾವುದೇ ಮೊತ್ತಕ್ಕೆ ಎನ್ ಎಸ್ ಸಿಯನ್ನೂ ಖರೀದಿಸಬಹುದು. ಉದಾಹರಣೆಗೆ ನೀವು ಇಂದು 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಕೇವಲ ಐದು ವರ್ಷಗಳಲ್ಲಿ ರೂ. 13.89 ಲಕ್ಷ ಗಳಿಸಬಹುದು.

ಇನ್ನು ಈ ಯೋಜನೆಯ ನಿಖರ ಪ್ರಯೋಜನಗಳ ಬಗ್ಗೆ ನೋಡೋಣ. ನೀವು ಎನ್ ಎಸ್ ಸಿಯಲ್ಲಿ ರೂ. 1.5 ಲಕ್ಷದವರೆಗಿನ ಮೊತ್ತವಿದ್ದರೇ ಅದು ಪ್ರತಿ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯುತ್ತದೆ. ಆದರೆ ನೆನಪಿಡಿ, ಈ ಯೋಜನೆ ಮೆಚ್ಯುರಿಟಿ ಆದ ನಂತರ, ಸಂಪೂರ್ಣ ಬಡ್ಡಿಯು ಠೇವಣಿದಾರರ ಕೈಯಲ್ಲಿ ತೆರಿಗೆಗೆ ಒಳಪಡುತ್ತದೆ. ಕಡಿಮೆ ಆದಾಯ ತೆರಿಗೆ ಗುಂಪಿಗೆ ಈ ಹೂಡಿಕೆ ಒಳ್ಳೆಯದು. ಪ್ರಮಾಣಪತ್ರವನ್ನು ರಿಡೀಮ್ ಮಾಡಿದಾಗ ಯಾವುದೇ ಟಿ ಡಿ ಎಸ್ ಕಟ್ಟಾಗುವುದಿಲ್ಲ.

ಇನ್ನು ಎನ್ ಎಸ್ ಸಿಯಲ್ಲಿ ಹೂಡಿಕೆ ಮಾಡಿದರೆ, ಆ ಹಣವನ್ನು ಯಾವಾಗ ಹಿಂಪಡೆಯಬಹುದು ಎಂಬ ಅನುಮಾನ ನಿಮಗೆ ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಎನ್ ಎಸ್ ಸಿ ಯ ಅಕಾಲಿಕ ನಗದು ಹಣವನ್ನು ಮೂರು ಸಂದರ್ಭಗಳಲ್ಲಿ ಮಾತ್ರ ಪಡೆಯಬಹುದು. ಮೊದಲನೆಯದು ಠೇವಣಿದಾರನ ಸಾವು, ಎರಡನೆಯದು ನ್ಯಾಯಾಲಯದ ಆದೇಶಗಳು ಹಾಗೂ ಕೊನೆಯದಾಗಿ ಕೋರ್ಟ್​​ನಿಂದ ಮುಟ್ಟುಗೋಲು ಹಾಕಿಕೊಳ್ಳುವುದು. ಇನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು ಖರೀದಿಸಿದ ಒಂದು ವರ್ಷದೊಳಗೆ ರಿಡೀಮ್ ಮಾಡಿಕೊಂಡರೆ ಮುಖಬೆಲೆಯನ್ನು ಮಾತ್ರ ಪಾವತಿಸಲಾಗುತ್ತದೆ. ಇದಕ್ಕೆ ಯಾವುದೇ ಬಡ್ಡಿದರ ಅನ್ವಯವಾಗುವುದಿಲ್ಲ