ಹೆಚ್ಚೇನೂ ಬೇಡ, ಪ್ರತಿ ರಾತ್ರಿ ಮಲಗುವ ಮುಂಚೆ ಈ ಚಿಕ್ಕ ನಾಲ್ಕು ಕೆಲಸ ಮಾಡಿ, ನಿಮ್ಮ ಜೀವನವೇ ಬದಲಾಗುತ್ತದೆ, ಯಶಸ್ಸು ಕಟ್ಟಿಟ್ಟಬುತ್ತಿ. ಯಾವ್ಯಾವು ಗೊತ್ತೇ?

ಹೆಚ್ಚೇನೂ ಬೇಡ, ಪ್ರತಿ ರಾತ್ರಿ ಮಲಗುವ ಮುಂಚೆ ಈ ಚಿಕ್ಕ ನಾಲ್ಕು ಕೆಲಸ ಮಾಡಿ, ನಿಮ್ಮ ಜೀವನವೇ ಬದಲಾಗುತ್ತದೆ, ಯಶಸ್ಸು ಕಟ್ಟಿಟ್ಟಬುತ್ತಿ. ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಏನಾದರೊಂದು ಸಾಧಿಸಬೇಕು ಎಂಬ ಹಠ ಛಲ ಇದ್ದೇ ಇರುತ್ತದೆ. ಕೆಲವರು ತಮ್ಮ ಬುದ್ದಿಶಕ್ತಿ, ಪ್ರತಿಭೆ ,ಸಮಯ ಪ್ರಜ್ಞೆಯಿಂದಾಗಿ ಯೋಜನಾಕ್ರಮ ಅನುಸರಿಸಿ ಶ್ರಮವಹಿಸಿ ತಮ್ಮ ಕನಸನ್ನು ಸಾದರ ಪಡಿಸಿಕೊಳ್ಳುತ್ತಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಶಿಸ್ತು ಮುಖ್ಯ. ಅದಕ್ಕಿಂತ ಸ್ಥಿತಿ ಪ್ರಜ್ಞೆ ಅಗತ್ಯ. ಈ ಸ್ಥಿತಿ ಪ್ರಜ್ಞೆಗಿಂತ ಅತೀ ಮುಖ್ಯವಾದದ್ದು ಅಂದರೆ ಅದು ಉಪ ಪ್ರಜ್ಞೆ. ಏನಿದು ಉಪ ಪ್ರಜ್ಞೆ ಅಂದರೆ ಕಾನ್ಷಿಯಸ್ ಮೈಂಡ್ ರೀತಿಯಾಗಿ ಸಬ್ ಕಾನ್ಷಿಯಸ್ ಮೈಂಡ್ ವ್ಯಕ್ತಿಯ ಜೀವನದ ದಿಕ್ಕನ್ನು ಬದಲಾಯಿಸಿ ಬಿಡುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮುಂಚೆ ಈ ನಾಲ್ಕು ವಿಚಾರಗಳನ್ನು ನಿರಂತರವಾಗಿ ಪಾಲಿಸುತ್ತಾ ಬಂದರೆ ಆ ವ್ಯಕ್ತಿಯೂ ಜೀವನದಲ್ಲಿ ತಾನು ಅಂದುಕೊಂಡಂತಹ ಎಲ್ಲಾ ಸಾಧನೆಗಳನ್ನ ಖಂಡಿತಾ ಮಾಡುತ್ತಾನೆ. ಯಾವ ವ್ಯಕ್ತಿ ತಾನು ಮುಂದಿನ ದಿನ ಅಂದರೆ ಬೆಳಿಗ್ಗೆ ಮಾಡಬೇಕಾದ ಎಲ್ಲಾ ಕೆಲಸ ಕಾರ್ಯಗಳ ಪಟ್ಟಿಯನ್ನು ಹಿಂದಿನ ರಾತ್ರಿ ತಯಾರಿಸಿ ಯೋಜನೆ ಹಾಕಿಕೊಳ್ಳುತ್ತಾನೋ ಆ ವ್ಯಕ್ತಿಯ ಉಪ ಪ್ರಜ್ಞೆ ರಾತ್ರಿಯಲ್ಲಿ ಉತ್ತಮವಾಗಿ ಆ ಕೆಲಸದ ಬಗ್ಗೆ ಯೋಜನೆ ಮಾಡುತ್ತದೆ. ಬೆಳಿಗ್ಗೆ ತಾನು ತಯಾರಿಸಿದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವಂತೆ ಪ್ರೇರೇಪಿಸುತ್ತದೆ. ತನ್ನ ಗುರಿಯ ಬಗ್ಗೆ ನಿರಂತರವಾಗಿ ಯೋಜನಾ ಕ್ರಿಯೆಯನ್ನ ಅನುಷ್ಠಾನಗೊಳಿಸುತ್ತಿರಬೇಕು.

ಪ್ರತಿದಿನ ರಾತ್ರಿ ಮಲಗುವ ಮುಂಚೆ ನಾಳೆ ಮಾಡಬೇಕಾದ ಕೆಲಸ ಕಾರ್ಯಗಳ ಸಾಧ್ಯ ಸಾಧ್ಯತೆಗಳ ಬಗ್ಗೆ ಅವಲೋಕನ ಮಾಡುತ್ತಲೇ ಇರಬೇಕು. ಅನಗತ್ಯವಾಗಿ ಬೇಡವಾದ ವಿಚಾರಗಳ ಬಗ್ಗೆ ಯೋಚಿಸಿ ನಿದ್ದೆ ಮಾಡುವುದಕ್ಕಿಂತ ಪ್ರಶಾಂತವಾಗಿ ಎಲ್ಲವನ್ನು ಮರೆತು ನಿರಾಳವಾಗಿ ಸುಪ್ತ ಮನಸ್ಸಿನಿಂದ ಮಲಗುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ರಾತ್ರಿ ಮಲಗುವಾಗ ಯಾವ ವಿಷಯದ ಬಗ್ಗೆ ಆಲೋಚಿಸಿ ಚಿಂತಿಸಿ ಮಲಗುತ್ತೇವೋ ಅದೇ ವಿಷಯ ನಮ್ಮ ಉಪಪ್ರಜ್ಞೆಗೆ ಸಂದೇಶ ನೀಡುತ್ತಿರುತ್ತದೆ. ನಮ್ಮ ಮನಸ್ಸು ರಾತ್ರಿ ಎಲ್ಲಾ ಯಾವ ವಿಷಯಕ್ಕೆ ಪ್ರಾಶಸ್ತ್ಯ ನೀಡಿರುತ್ತೇವೆಯೋ ಅದೇ ವಿಷಯಗಳು ನಮ್ಮನ್ನು ಕಾಡುತ್ತವೆ.

ನಮ್ಮ ಕನಸು ಗುರಿಗಳು ಜಾಗೃತಿ ಸ್ಥಿತಿಯಲ್ಲಿ ಹೆಚ್ಚು ಪ್ರಭಾವ ಬೀರುವುದಿಲ್ಲ. ಯಾವ ಸಮಯದಲ್ಲಿ ವ್ಯಕ್ತಿ ನಿರ್ವಾಣ ಸ್ಥಿತಿಯಲ್ಲಿ ತಲುಪಿರುತ್ತಾನೋ ಆ ಸಂಧರ್ಭದಲ್ಲಿ ಅಂದರೆ ಮಲಗಿರುವ ಸಮಯದಲ್ಲಿ ಆ ವ್ಯಕ್ತಿಯ ಕನಸು ಗುರಿ ತುಂಬಾನೇ ಗಾಢವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಯಾವುದೇ ರೀತಿಯ ನಕರಾತ್ಮಕ ವಿಚಾರಗಳಿಗೆ ಅವಕಾಶ ಕೊಡದೇ ಕೇವಲ ಸಂಪೂರ್ಣವಾಗಿ ಸಕರಾತ್ಮಕ ಚಿಂತನೆಗಳ ಆಲೋಚನೆಗಳಿಂದ ಮಲಗಿ ನಿಮ್ಮ ಮುಂಜಾನೆಯನ್ನು ಗೆದ್ದರೆ ನೀವು ಮುಂದಿನದೆಲ್ಲವನ್ನು ಗೆದ್ದೇ ಗೆಲ್ಲುತ್ತೀರಿ.