ಪ್ರೀತಿಯ ಅಥವಾ ಸಂಗಾತಿಯ ಕುರಿತು ಕನಸ್ಸು ಬರುತ್ತಿದೆಯೇ?? ಕನಸು ಕಾಣುವ ನಿಜವಾದ ರಹಸ್ಯವೇನು ಗೊತ್ತೇ??

ಪ್ರೀತಿಯ ಅಥವಾ ಸಂಗಾತಿಯ ಕುರಿತು ಕನಸ್ಸು ಬರುತ್ತಿದೆಯೇ?? ಕನಸು ಕಾಣುವ ನಿಜವಾದ ರಹಸ್ಯವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಹಲವರಿಗೆ ಹಲವಾರು ರೀತಿಯ ಕನಸುಗಳನ್ನು ಕಾಣುವ ಅಭ್ಯಾಸ ಇರುತ್ತದೆ. ಕೆಲವರ ಪ್ರಕಾರ ದಿನವೆಲ್ಲ ನಾವು ಏನನ್ನು ನೋಡಿರುತ್ತೇವೆ ಅದೇ ರಾತ್ರಿಗೆ ಕನಸಲ್ಲಿ ಬರುತ್ತದೆ ಎಂಬ ನಂಬಿಕೆ ಇದೆ. ಇನ್ನು ಕೆಲವರ ಪ್ರಕಾರ ಕನಸಿನಲ್ಲಿ ಕಾಣುವುದು ಜೀವನದಲ್ಲಿ ಏನೋ ಪ್ರಭಾವ ಬೀರುವ ಅಂಶಗಳು ಆಗಿರುತ್ತವೆ ಎಂಬುದಾಗಿ ಕೂಡ ನಂಬಿಕೆ ಇದೆ. ಕನಸಿನಲ್ಲಿ ಕಾಣುವ ವಿಷಯಗಳು ಜೀವನಕ್ಕೆ ಹತ್ತಿರ ವಾಗುವಂತಹ ಹಾಗೂ ಪರಿಣಾಮ ಬೀರುವಂತಹ ವಿಷಯದ ಮುನ್ಸೂಚನೆ ಆಗಿರುತ್ತದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತದೆ.

ಹಾಗಿದ್ದರೆ ಅದರಲ್ಲೂ ಕೂಡ ಕೆಲವೊಂದು ಕನಸುಗಳು ಪ್ರೀತಿಗೆ ಸಂಬಂಧಿಸಿದ ಕನಸುಗಳು ಆಗಿರುತ್ತವೆ. ಈ ಕನಸುಗಳು ಯಾವ ಅರ್ಥವನ್ನು ಬೀರುತ್ತವೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿ. ಹುಡುಗಿಯನ್ನು ಪ್ರೇಯಸಿಯ ರೂಪದಲ್ಲಿ ನೋಡುವಾಗ ಒಂದು ವೇಳೆ ಹುಡುಗನ ಕನಸಿನಲ್ಲಿ ಒಬ್ಬ ಹುಡುಗಿ ಆತನ ಪ್ರೇಯಸಿಯಂತೆ ಕಂಡುಬಂದರೆ ಅದು ಶುಭ ಸಂಕೇತವಾಗಿರುತ್ತದೆ. ಇದರ ಅರ್ಥ ಮುಂದಿನ ದಿನಗಳಲ್ಲಿ ಆತನ ಜೀವನದಲ್ಲಿ ಹೊಸ ಸಂಬಂಧದ ಶುರುವಾಗಲಿದೆ ಎಂದರ್ಥ.

ಇನ್ನು ಹುಡುಗಿಯ ಕನಸಿನಲ್ಲಿ ಕೂಡ ಹುಡುಗನ ರೂಪ ಕಂಡುಬಂದರೆ ಅದೇ ಅರ್ಥ ಎಂದು ಹೇಳಬಹುದು. ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡುವಂತಹ ಕನಸು ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೀವೇ ನೋಡಿಕೊಳ್ಳುತ್ತಿದ್ದರೆ ನಿಮಗೆ ನಿಮ್ಮ ಪ್ರೇಯಸಿಯಿಂದ ಸಂತೋಷದ ಸಮಯಗಳು ಸಿಗಲಿದೆ ಎಂದರ್ಥ. ನಿಮ್ಮ ಪ್ರೇಮ ಸಂಬಂಧದಲ್ಲಿ ಇನ್ನಷ್ಟು ಸಂತೋಷ ಸಿಗಲಿದೆ ಎಂದರ್ಥ.

ಇನ್ನು ಹುಡುಗಿಗೂ ಕೂಡ ಇದೇ ರೀತಿಯ ಕನಸುಬಿದ್ದರೆ ಹುಡುಗನಿಂದ ಇನ್ನಷ್ಟು ಸುಖ ಸಿಗಲಿದೆ ಎಂದು ಅರ್ಥವಾಗಿದೆ. ಪ್ರೇಯಸಿಯನ್ನು ಕೆಂಪು ವಸ್ತ್ರದಲ್ಲಿ ನೋಡುವ ಕನಸು ಈ ತರಹದ ಕನಸುಗಳೆಂದರೆ ಕೂಡ ಶುಭವಾರ್ತೆಯನ್ನು ಕೇಳಬಹುದಾಗಿದೆ. ನಿಮ್ಮ ಪ್ರೇಮ ಸಂಬಂಧದಲ್ಲಿ ಇನ್ನಷ್ಟು ಆಳ ವಾದಂತಹ ಸಂತೋಷ ಸಿಗಲಿದೆ. ಇನ್ನು ನಿಮ್ಮ ಸಂಬಂಧವು ಕೂಡ ಗಟ್ಟಿ ಗೊಳ್ಳಲಿದೆ. ಇನ್ನು ನಿಮ್ಮ ಪ್ರಯಸಿ ಯನ್ನು ನೋಡಲು ಕೂಡ ನಿಮಗೆ ಯಾವುದೇ ಅಡ್ಡಿ-ಆತಂಕಗಳು ಇರುವುದಿಲ್ಲ.

ಸುಂದರ ಪಕ್ಷಿಗಳನ್ನು ನೋಡುವ ಕನಸು ಹುಡುಗಿಯರು ತಮ್ಮ ಕನಸಿನಲ್ಲಿ ರಂಗುರಂಗಾದ ಹಕ್ಕಿಗಳನ್ನು ನೋಡುವುದು ಕೂಡ ಶುಭ ಸಂಕೇತವಾಗಿದೆ. ಇದರಿಂದಾಗಿ ಆ ಹುಡುಗಿಯ ಮದುವೆ ಕಾರ್ಯಕ್ರಮ ಸದ್ಯದಲ್ಲಿ ನಡೆಯಲಿದೆ ಅಥವಾ ಆಕೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರೊಂದಿಗೆ ಆಕೆಯ ವಿವಾಹ ಶೀಘ್ರದಲ್ಲಿ ನಡೆಯಲಿದೆ.

ಇನ್ನು ಅವರ ಲವ್ ಲೈಫ್ ಎನ್ನುವುದು ಇನ್ನಷ್ಟು ಹಿತಕರವಾಗಿರುತ್ತದೆ. ತನ್ನ ಗೆಳತಿ ನೀಡುವ ಬಳೆಯನ್ನು ತೊಟ್ಟುಕೊಳ್ಳುವ ಕನಸು ಕನಸಿನಲ್ಲಿ ಯಾವುದಾದರೂ ಹುಡುಗಿ ತನ್ನ ಗೆಳತಿ ನೀಡುವ ಬಳೆಯನ್ನು ತೊಟ್ಟುಕೊಳ್ಳುವ ಕನಸು ಕಂಡರೆ ಅದು ಕೂಡಾ ಶುಭ ಸಂಕೇತದ ಕನಸಾಗಿದೆ. ಇದರಿಂದಾಗಿ ಆಕೆಯ ಮದುವೆ ಅತಿಶೀಘ್ರದಲ್ಲಿ ನಿಶ್ಚಯ ವಾಗಲಿದೆ ಎಂಬರ್ಥ. ಹಬ್ಬದಲ್ಲಿ ಇರುವಂತೆ ಕಾಣುವ ಕನಸು ಅದರಲ್ಲೂ ಕೂಡ ಮಹಿಳೆಯರು ಈ ಕನಸು ಕಂಡರೆ ಶುಭ ಸಂಕೇತ. ಹುಡುಗಿಯರಿಗೆ ಅತಿಶೀಘ್ರದಲ್ಲಿ ಅವರಿಗೆ ಅವರ ನೆಚ್ಚಿನ ರಾಜಕುಮಾರ ಸಿಗಲಿದ್ದಾನೆ. ಇನ್ನು ವಿವಾಹಿತ ಮಹಿಳೆಯರಿಗೆ ಅವರ ಗಂಡನಿಂದ ಇನ್ನಷ್ಟು ಸಂತೋಷದ ಜೀವನ ಸಿಗಲಿದೆ. ಇವಿಷ್ಟು ಪ್ರೇಮಕ್ಕೆ ಸಂಬಂಧಿಸಿದ ಕನಸುಗಳ ನಿಜವಾದ ವಿವರ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.