ಕರ್ನಾಟಕದಲ್ಲಿ ‘ಜೇಮ್ಸ್’ ಸೌಂಡ್ ಗೆ ಸೈಲೆಂಟ್ ಅದ ‘RRR’ ಸಿನಿಮಾ; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕರ್ನಾಟಕದಲ್ಲಿ ಗೆದ್ದವರು ಯಾರು ಗೊತ್ತೇ??

ಕರ್ನಾಟಕದಲ್ಲಿ ‘ಜೇಮ್ಸ್’ ಸೌಂಡ್ ಗೆ ಸೈಲೆಂಟ್ ಅದ ‘RRR’ ಸಿನಿಮಾ; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕರ್ನಾಟಕದಲ್ಲಿ ಗೆದ್ದವರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ‘ಜೇಮ್ಸ್’ ಸಿನಿಮಾದ ಕಥೆ ದೃಷ್ಟಿಯಿಂದ ನೋಡುವುದಾದರೆ ಇದೊಂದು ಆಕ್ಷನ್ ಸಿನಿಮಾ. ಆದರೆ ಇದು ನಮ್ಮ ಅಪ್ಪುವಿನ ಕೊನೆಯ ಸಿನಿಮಾವಾಗಿದ್ದು, ಕನ್ನಡಿಗರಿಗೆ ಭಾವನಾತ್ಮಕ ಸಿನಿಮಾ. ಹಾಗಾಗಿ ಅಪ್ಪು ಅಭಿಮಾನಿಗಳು ಹಾಗೂ ಸಿನಿಪ್ರಿಯರು ಜೇಮ್ಸ್ ಚಿತ್ರವನ್ನು ಗೆಲ್ಲಿಸಿದ್ದಾರೆ.
ಮೊನ್ನೆ 17 ನೇ ತಾರೀಖಿನಂದು ಜೇಮ್ಸ್ ಚಿತ್ರ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಉತ್ತಮ ಕಲೆಕ್ಷನ್ ನ್ನು ಕಂಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರರಾಜ್ಯಗಳಲ್ಲಿಯೂ ಜೇಮ್ಸ್ ಸೌಂಡ್ ಮಾಡಿತ್ತು. ಅಷ್ಟೇ ಅಲ್ಲ, ಜೇಮ್ಸ್ ಅಬ್ಬರವನ್ನ ವಿದೇಶಗಳಲ್ಲಿಯೂ ನೀವಿಗಾಗ್ಲೆ ವಿಡಿಯೋಗಳಲ್ಲಿ ನೋಡಿರಬಹುದು.

ಇನ್ನು ಜೇಮ್ಸ್ ಥಿಯೇಟರ್ ಲಿಸ್ಟ್ ನೋಡಿ ಎಷ್ಟು ಕಲೆಕ್ಷನ್ ಆಗಿರಬಹುದು ಅಂತ ಲೆಕ್ಕಾಚಾರ ಶುರುವಾಗಿದೆ. ಅಂದಹಾಗೆ ಕನ್ನಡಿಗರ ಮೆಚ್ಚಿನ ನಟ ಅಪ್ಪು ಜೇಮ್ಸ್ ಮೊದಲ ದಿನವೇ ಕರ್ನಾಟಕದಲ್ಲಿ ಕಲೆಕ್ಟ್ ಮಾಡಿದ್ದು ಬರೋಬ್ಬರಿ 20 ಕೋಟಿ ರೂಪಾಯಿಗಳು. ಈಗಲೂ ಮುಂದುವರೆದಿರುವ ಜೇಮ್ಸ್ ಪ್ರಸಾರ ಇನ್ನಷ್ಟು ಕಲೆಕ್ಟ್ ಮಾಡುತ್ತದೆ ಎನ್ನುವ ನಿರೀಕ್ಷೆ ಇದೆ. ಆದರೆ ಇಲ್ಲಿ ಆರ್ ಆರ್ ಆರ್ ಸಿನಿಮಾಕ್ಕೆ ಪೈಪೋಟಿ ಕೊಟ್ಟಿರುವುದು ವಿಶೇಷ.

ರಾಜಮೌಳಿ ನಿರ್ದೇಶನದ ಬಹು ನಿರೀಕ್ಷೆಯ ಸಿನಿಮಾ ಆರ್ ಆರ್ ಆರ್. ಈ ಚಿತ್ರವೂ ಈಗಾಗಲೇ ತೆರೆಕಂಡಿದ್ದು ಕರ್ನಾಟಕದಲ್ಲಿ ಮಾತ್ರ ಕಲೆಕ್ಷನ್ ವಿಷಯದಲ್ಲಿ ಜೇಮ್ಸ್ ದಾಖಲೆಯನ್ನು ಮುರಿಯೋದರಲ್ಲಿ ಸೋತಿದೆ. ಯಾಕಂದ್ರೆ ಆರ್ ಆರ್ ಆರ್ ಚಿತ್ರ ಕರ್ನಾಟಕದ ಮೊದಲ ದಿನದ ಕಲೆಕ್ಷನ್ 14ಕೋಟಿ ಮಾತ್ರ. ಹಾಗಾಗಿ ಜೇಮ್ಸ್ ಈ ಚಿತ್ರಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ. ಆರ್ ಆರ್ ಆರ್ ಬೇರೆ ರಾಜ್ಯಗಳ ವಿಷಯಕ್ಕೆ ಬಂದ್ರೆ ಉತ್ತಮ ಕಲೆಕ್ಷನ್ ಕಂಡಿದೆ. ಮೊದಲ ದಿನವೇ ದಕ್ಷಿಣ, ಉತ್ತರ ದಿಕ್ಕಿನಿಂದ ನೋಡಿದ್ರೆ ಬರೋಬ್ಬರಿ 260ಕೋಟಿ ಹಣ ಗಳಿಕೆ ಮಾಡಿದೆ. ಟಾಲಿವುಡ್ ಬಾಲಿವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿದ ಆರ್ ಆರ್ ಆರ್ ಕರ್ನಾಟಕದಲ್ಲಿ ಮಾತ್ರ ಜೇಮ್ಸ್ ಸೌಂಡ್ ಗೆ ಸೈಲೆಂಟ್ ಆಗಿದ್ದು ಸುಳ್ಳಲ್ಲ.