ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಐಪಿಎಲ್ ಆರಂಭದಲ್ಲಿಯೇ ಫುಲ್ ಕನ್ಫ್ಯೂಷನ್, ಆರ್ಸಿಬಿಗೆ ಟೆನ್ಶನ್ ಮೇಲೆ ಟೆನ್ಶನ್. ಬಾಸ್ ನ ಕತೆಯಂತೂ ಕೇಳಲೇಬೇಡಿ. ತಂಡದಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತೇ??

41

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇನ್ನೇನು ಐಪಿಎಲ್ ಆರಂಭವಾಗಿ ಬಿಡ್ತು. ಹಲವಾರು ದಿನಗಳಿಂದ ಕಾಯುತ್ತಿದ್ದ ಆ ಘಳಿಗೆ ಬಂದೇಬಿಡ್ತು. ಹೌದು ಐಪಿಎಲ್ 2022 ಇಂದಿನಿಂದ ಪ್ರಾರಂಭವಾಗಲಿದೆ. 10 ತಂಡಗಳು ಈ ಬಾರಿಯ ಐಪಿಎಲ್ ಚಾಂಪಿಯನ್ ಟ್ರೋಫಿಗಾಗಿ ಪರಸ್ಪರ ಸೆಣಸಾಡಲಿವೆ. ಇನ್ನು ಈ ಬಾರಿ ಸಾಕಷ್ಟು ಬದಲಾವಣೆಗಳು ಕೂಡ ನಡೆದಿವೆ. ಈ ಬಾರಿ ಐಪಿಎಲ್ ಎನ್ನುವುದು ಸಾಕಷ್ಟು ಸ್ಪರ್ಧೆಯಿಂದ ಕೂಡಿದೆ ಎಂದರೆ ತಪ್ಪಾಗಲಾರದು.

ಈ ಬಾರಿಯ ಐಪಿಎಲ್ ನಲ್ಲಿ ಹಲವಾರು ಬದಲಾವಣೆಗಳು ಕೂಡ ಕಂಡುಬಂದಿರುವುದು ಹಲವು ಅಭಿಮಾನಿಗಳಿಗೆ ದುಃಖವನ್ನು ಕೂಡ ನೀಡಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯವನ್ನು ಘೋಷಿಸಿರುವ ಮಹೇಂದ್ರ ಸಿಂಗ್ ಧೋನಿ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡಿದ್ದಾರೆ. ಹಲವು ಮೂಲಗಳ ಪ್ರಕಾರ ಇದು ಅವರ ಕೊನೆಯ ಐಪಿಎಲ್ ಸೀಸನ್ ಎನ್ನುವುದಾಗಿ ತಿಳಿದುಬರುತ್ತದೆ. ಇದು ಕೂಡ ಅಭಿಮಾನಿಗಳಿಗೆ ಸಾಕಷ್ಟು ದುಃಖವನ್ನು ತರುವಂತಹ ಸಂಗತಿಯಾಗಿದೆ. ಇನ್ನು ಮತ್ತೊಂದು ವಿಚಾರ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ದುಃಖ ತರಿಸುವಂತದ್ದು.

ಹಲವಾರು ಸೀಸನ್ ಗಳಿಂದ ವಿರಾಟ್ ಕೊಹ್ಲಿ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದರು. ಆದರೆ ಈ ಬಾರಿ ಅವರು ಕೂಡ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇನ್ನು ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನವನ್ನು ಸೌತ್ ಆಫ್ರಿಕಾ ಮೂಲದ ಆಟಗಾರನಾಗಿರುವ ಡುಪ್ಲೆಸಿಸ್ ರವರು ಅಲಂಕರಿಸಿದ್ದಾರೆ. ಈ ಬಾರಿ ಹಲವಾರು ಬದಲಾವಣೆಗಳು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಡೆದಿದೆ.

ತಂಡದ ಭರವಸೆಯ ಸ್ಪಿನ್ ಬೌಲರ್ ಆಗಿದ್ದಂತಹ ಚಹಾಲ್ ರವರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಹೋಗಿ ಈಗ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಎಬಿಡಿ ಇಲ್ಲದೆ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಣಕ್ಕಿಳಿಯುತ್ತಿದೆ. ನಿಜಕ್ಕೂ ಈ ವಿಚಾರ ಕೂಡ ಸಾಕಷ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ದುಃಖ ನೀಡುವಂತದ್ದು. ಕನ್ನಡದ ಭರವಸೆಯ ಬ್ಯಾಟ್ಸ್ಮನ್ ಆಗಿದ್ದ ದೇವದತ್ ಪಡಿಕಲ್ ಕೂಡ ರಾಜಸ್ಥಾನದ ಪಾಲಾಗಿದ್ದಾರೆ.

ಆದರೆ ಇವುಗಳೆಲ್ಲದರ ನಡುವೆ ಖುಷಿಪಡುವ ಇನ್ನೊಂದು ವಿಚಾರವೆಂದರೆ ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುತ್ತಿದ್ದರು ಕೂಡ ತಂಡದಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಹಲವಾರು ಮ್ಯಾಚ್ ವಿನ್ನರ್ ಆಟಗಾರರು ಕೂಡ ಇದ್ದಾರೆ. ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಗ್ಲೆನ್ ಮ್ಯಾಕ್ಸ್ವೆಲ್ ಮೊಹಮ್ಮದ್ ಸಿರಾಜ್ ಹೆಝಲ್ ವುಡ್ ಹರ್ಷಲ್ ಪಟೇಲ್ ಡ್ಯೂಪ್ಲೆ ಸಿಸ್ ಹೀಗೆ ಹಲವಾರು ಆಟಗಾರರು ಕಾಣಿಸಿಕೊಳ್ಳುತ್ತಾರೆ.

ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈನಲ್ಲಿ ಪ್ರ್ಯಾಕ್ಟೀಸ್ ಆರಂಭಿಸಿದ್ದು ನ್ಯೂಜಿಲೆಂಡ್ ಮೂಲದ ಫಿನ್ ಅಲೆನ್ ಈಗಾಗಲೇ ಟೂರ್ನಿ ಆರಂಭಕ್ಕೂ ಮುನ್ನ ಸಮಸ್ಯೆ ಒಂದನ್ನು ಎದುರಿಸುತ್ತಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ನ್ಯೂಜಿಲೆಂಡ್ ದೇಶ ಎನ್ನುವುದು ಸಾಕಷ್ಟು ಹಿಮದ ಹವಾಗುಣವನ್ನು ಹೊಂದಿರುವಂತ ದೇಶವಾಗಿದೆ. ಇನ್ನು ಈಗಾಗಲೇ ನಮ್ಮ ದೇಶದಲ್ಲಿ ಬೇಸಿಗೆಕಾಲ ಎನ್ನುವುದು ಉಚ್ಚ ಮಟ್ಟದಲ್ಲಿದೆ ಎನ್ನುವುದು ನಿಮಗೆಲ್ಲಾ ಗೊತ್ತಿದೆ.

ಇತ್ತೀಚಿಗಷ್ಟೇ ಅಲೆನ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾರತ ದೇಶದ ಬಿಸಿಲಿನ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಾ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದಕ್ಕಾಗಿ ಈಗ ತಂಡ ರಾತ್ರಿಯಲ್ಲಿ ಪ್ರಾಕ್ಟಿಸ್ ಮಾಡುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಏನೇ ಮಾಡಿದ್ರು ಕಪ್ಪು ಮಾತ್ರ ಈ ಸಲ ನಮಗೆ ಬೇಕೇ ಬೇಕು ಎನ್ನುವುದಾಗಿ ಅಭಿಮಾನಿಗಳು ಪಟ್ಟುಹಿಡಿದು ಕೊಡುತ್ತಿದ್ದಾರೆ. ಹೀಗಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಂಡರೂ ಕೂಡ ಈ ಕುರಿತಂತೆ ಸೀರಿಯಸ್ ಆಗಿದೆ. ಈ ಬಾರಿ ಕಪ್ ನಮಗೆ ಸಿಗುತ್ತಾ ಇಲ್ವಾ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.

Get real time updates directly on you device, subscribe now.