ಆರ್ಸಿಬಿ ತಂಡಕ್ಕೆ ಆರಂಭದಲ್ಲಿಯೇ ವಿಗ್ನ, ಮೊದಲ ಶಾಕ್ ಮರೆಮಾಚುವ ಮುನ್ನವೇ ಇದೀಗ ಮತ್ತೊಂದು ಶಾಕ್. ಏನು ಗೊತ್ತೇ??

ಆರ್ಸಿಬಿ ತಂಡಕ್ಕೆ ಆರಂಭದಲ್ಲಿಯೇ ವಿಗ್ನ, ಮೊದಲ ಶಾಕ್ ಮರೆಮಾಚುವ ಮುನ್ನವೇ ಇದೀಗ ಮತ್ತೊಂದು ಶಾಕ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯವನ್ನು ಪಂಜಾಬ್ ತಂಡದೆದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನ ಪ್ರಾರಂಭದಲ್ಲಿ ಆಡಲಿದೆ. ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ನವನವೀನತೆಯಿಂದ ಕಣಕ್ಕಿಳಿಯುತ್ತಿದೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ವಿರಾಟ್ ಕೊಹ್ಲಿ ಇರುವವರು ಕ್ಯಾಪ್ಟನ್ಸಿ ಯಿಂದ ಕೆಳಗಿಳಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪದ್ಬಾಂಧವ ಎಂದು ಕರೆಯಲ್ಪಡುತ್ತಿದ್ದ ಎಬಿ ಡಿವಿಲಿಯರ್ಸ್ ರವರು ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಎಬಿ ಡಿವಿಲಿಯರ್ಸ್ ರವರನ್ನು ಕೂಡ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಈ ಬಾರಿ ಕಾಣುವುದಕ್ಕೆ ಸಾಧ್ಯವಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಸಿರಾಜ್ ರವರನ್ನು ರಿಟೈನ್ ಮಾಡಿಕೊಂಡಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಹಲವಾರು ಸ್ಟಾರ್ ಆಟಗಾರರನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಕಳೆದ ಬಾರಿ ಯಾಕ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿರುವ ಹರ್ಷಲ್ ಪಟೇಲ್ ಅವರನ್ನು ಕೂಡ ಮತ್ತೊಮ್ಮೆ ಖರೀದಿಸಿದೆ. ಇದರ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾಗಿರುವ ಡುಪ್ಲೆಸಿಸ್ ಹಾಗೂ ಜೋಷ್ ಹೆಜಲ್ವುಡ್ ರವರನ್ನು ಕೂಡ ಕೋಟಿ ಕೋಟಿ ನೀಡಿ ಖರೀದಿಸಿದೆ. ಈ ಬಾರಿ ಡುಪ್ಲೆಸಿಸ್ ರವರನ್ನು ತಂಡದ ನಾಯಕನನ್ನಾಗಿ ಕೂಡ ನೇಮಿಸಲಾಗಿದೆ. ಆದರೆ ಸಮಸ್ಯೆಗಳು ಇನ್ನೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಟ್ಟಿಲ್ಲ ಎಂದು ಹೇಳಲಾಗುತ್ತದೆ.

ನಿಮಗೆಲ್ಲರಿಗೂ ಗೊತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಾಟಗಳು ಪ್ರಾರಂಭವಾದ ನಂತರ ಒಂದಲ್ಲ ಒಂದು ಸಮಸ್ಯೆಗಳು ಖಂಡಿತವಾಗಿ ಬಂದೇ ಬರುತ್ತದೆ. ಒಮ್ಮೆ ಬ್ಯಾಟಿಂಗ್ ಆರ್ಡರ್ ಕೈಕೊಟ್ಟರೆ ಇನ್ನೊಮ್ಮೆ ಬೌಲರ್ಗಳು ದುಬಾರಿ ಆಗುತ್ತಾರೆ. ಹೀಗೆ ಟೂರ್ನಮೆಂಟ್ ಆರಂಭವಾದ ಮೇಲೆ ಒಂದಲ್ಲ ಒಂದು ಕಾರಣದಿಂದಾಗಿ ಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಬಾರಿಯ ಸಮಸ್ಯೆಯನ್ನು ವುದು ಅದಕ್ಕಿಂತಲೂ ವಿಭಿನ್ನವಾಗಿದ್ದು ಟೂರ್ನಮೆಂಟ್ ಗೂ ಮೊದಲೇ ಆರಂಭವಾಗಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಗ್ಲೆನ್ ಮ್ಯಾಕ್ಸ್ವೆಲ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಕಾಣಸಿಗುತ್ತಾರೆ. ಕಳೆದ ಬಾರಿ ಗ್ಲೆನ್ ಮ್ಯಾಕ್ಸ್ವೆಲ್ ರವರು ಯಾವ ರೀತಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು ಎನ್ನುವುದು ನಮಗೆಲ್ಲಾ ಗೊತ್ತಿದೆ. ಈ ಬಾರಿ ಕೂಡ ಅವರ ತಂಡದ ಆಧಾರ ಸ್ತಂಭವಾಗಿ ನೀಡಲು ಆರ್ಡರ್ ನಲ್ಲಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಮಧ್ಯಮ ಕ್ರಮಾಂಕವನ್ನು ಮುನ್ನಡೆಸಲಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ಟೂರ್ನಮೆಂಟಿಗೆ ಆರಂಭದಲ್ಲೇ ಎರಡೆರಡು ಶಾಕ್ ಗಳು ತಂಡವನ್ನು ಕಾಡಲಾರಂಭಿಸಿದೆ.

ಹೌದು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಆಸ್ಟ್ರೇಲಿಯಾದ ಹಾಗೂ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಆಗಿರುವ ಜೋಷ್ ಹೆಝಲ್ ವುಡ್ ಇಬ್ಬರೂ ಕೂಡ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡುವಂತಹ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ ಎಂಬ ಸುದ್ದಿ ಈಗ ತಂಡಕ್ಕೆ ದೊಡ್ಡ ತಲೆನೋ’ವಾಗಿ ಪರಿಣಮಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಇಂತಹ ದೊಡ್ಡ ಸಮಸ್ಯೆ ಜೊತೆಗೆ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ನಲ್ಲಿ ಹೇಗೆ ಶುಭಾರಂಭ ಮಾಡಲಿದೆ ಎನುವುದೆ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಮೀರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೇಬಲ್ ಟಾಪ್ ಮಾಡಲಿ ಎನ್ನುವುದೇ ಎಲ್ಲರ ಹಾರೈಕೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.