ಕೊಹ್ಲಿ ಆರ್ಸಿಬಿ ಯನ್ನು ಗೆಲ್ಲಿಸಬೇಕು ಎಂದರೆ ಈ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡಬೇಕು ಎಂದ ರವಿಶಾಸ್ತ್ರಿ ಯಾವಾಗ ಅಂತೇ ಗೊತ್ತೇ??

ಕೊಹ್ಲಿ ಆರ್ಸಿಬಿ ಯನ್ನು ಗೆಲ್ಲಿಸಬೇಕು ಎಂದರೆ ಈ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡಬೇಕು ಎಂದ ರವಿಶಾಸ್ತ್ರಿ ಯಾವಾಗ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರ್ಚ್ 26ರಿಂದ ಇಡೀ ಭಾರತ ದೇಶದ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿ ಕಾಯುತ್ತಿರುವ ಟಾಟಾ ಐಪಿಎಲ್ 2022 ಪ್ರಾರಂಭವಾಗಲಿದೆ. ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಮೆಂಟ್ ಆಗಿರುವ ಐಪಿಎಲ್ ಈ ಬಾರಿ ಸಾಕಷ್ಟು ತಂಡಗಳ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತಿವೆ. ಇನ್ನು ಇದೇ ಮಾರ್ಚ್ 27ರಂದು ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಕನ್ನಡಿಗನಾಗಿರುವ ಮಯಾಂಕ್ ಅಗರ್ವಾಲ್ ರವರ ನಾಯಕತ್ವದಲ್ಲಿ ಸಿದ್ಧಗೊಂಡಿರುವ ಪಂಜಾಬ್ ತಂಡದ ವಿರುದ್ಧ ಆಡಲಿದೆ.

ಇನ್ನು ಈ ಬಾರಿ ತಂಡದಲ್ಲಿ ನಾಯಕನ ಬದಲಾವಣೆ ಕೂಡ ಆಗಿದ್ದು ವಿರಾಟ್ ಕೊಹ್ಲಿ ರವರು ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಡುಪ್ಲೆಸಿಸ್ ರವರು ರವರು ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಹೊಸ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡಿದ್ದಾರೆ. ಇನ್ನು ಈ ಬಾರಿ ಖ್ಯಾತ ಕ್ರಿಕೆಟಿಗ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯನಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಎಲ್ಲರೂ ಹೇಳುವಂತೆ ವಿರಾಟ್ ಕೊಹ್ಲಿ ರವರು ಈ ಬಾರಿ ತಮ್ಮ ನಿಜವಾದ ಬ್ಯಾಟಿಂಗ್ ಪ್ರದರ್ಶನವನ್ನು ಮಾಡಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ನಾಯಕನ ಜವಾಬ್ದಾರಿಯಿಂದ ಮುಕ್ತರಾಗಿರುವ ವಿರಾಟ್ ಕೊಹ್ಲಿ ಯಾವುದೇ ಒತ್ತಡ ಇಲ್ಲದೆ ತಮ್ಮ ಸಹಜ ಆಟವನ್ನು ಪ್ರದರ್ಶಿಸಲಿದ್ದಾರೆ ಎನ್ನುವುದಾಗಿ ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಈ ಬಾರಿ ವಿರಾಟ್ ಕೊಹ್ಲಿ ಅವರು ಯಾವ ಬ್ಯಾಟಿಂಗ್ ಸ್ಥಾನದಲ್ಲಿ ಆಡಲಿದ್ದಾರೆ ಎಂಬ ಕುರಿತಂತೆ ಎಲ್ಲಾ ಕುತೂಹಲಗಳು ಹೆಚ್ಚಾಗಿವೆ. ಸಾಮಾನ್ಯವಾಗಿ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ರವರು ಉತ್ತಮ ಪ್ರದರ್ಶನ ನೀಡಬಲ್ಲಂತಹ ಆಟವನ್ನು ಹೊಂದಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಆಗಿರುವ ರವಿಶಾಸ್ತ್ರಿ ಅವರು ಹೇಳುವಂತೆ ವಿರಾಟ್ ಕೊಹ್ಲಿ ರವರು t20 ಫಾರ್ಮಟ್ ನಲ್ಲಿ ಓಪನಿಂಗ್ ಪೋಸಿಶನ್ ನಲ್ಲಿ ಆಡಿದರೆ ಖಂಡಿತವಾಗಿ ತಂಡಕ್ಕೆ ಬೇಕಾಗುವಂತಹ ಆರಂಭಿಕ ಸ್ಕೋರ್ಗಳನ್ನು ಆದಷ್ಟು ಬೇಗ ನೀಡಬಲ್ಲರು ಎನ್ನುವುದಾಗಿ ಹೇಳುತ್ತಾರೆ. ಆರಂಭಿಕ ಓವರ್ಗಳಲ್ಲಿ ವಿರಾಟ್ ಕೊಹ್ಲಿ ರವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಒತ್ತಡ ಎನ್ನುವುದು ಕಡಿಮೆಯಾಗುತ್ತದೆ ಎನ್ನುವುದು ರವಿಶಾಸ್ತ್ರಿ ಅವರ ಅಭಿಪ್ರಾಯವಾಗಿದೆ. ಇದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮದೇ ತಪ್ಪದೆ ಹಂಚಿಕೊಳ್ಳಿ.