ಆರ್ಸಿಬಿ ಅದೊಂದು ತಪ್ಪು ಮಾಡದೇ ಇದ್ದಿದ್ದರೆ ಖಂಡಿತ ಈ ಬಾರಿ ಟೂರ್ನಿಗೂ ಮೊದಲೇ ಜಯ ಫಿಕ್ಸ್ ಆಗುತ್ತಿತ್ತಾ? ಆರ್ಸಿಬಿ ಮಾಡಿದ ಮಹಾ ದೊಡ್ಡ ತಪ್ಪು ಯಾವುದು ಗೊತ್ತಾ?

ಆರ್ಸಿಬಿ ಅದೊಂದು ತಪ್ಪು ಮಾಡದೇ ಇದ್ದಿದ್ದರೆ ಖಂಡಿತ ಈ ಬಾರಿ ಟೂರ್ನಿಗೂ ಮೊದಲೇ ಜಯ ಫಿಕ್ಸ್ ಆಗುತ್ತಿತ್ತಾ? ಆರ್ಸಿಬಿ ಮಾಡಿದ ಮಹಾ ದೊಡ್ಡ ತಪ್ಪು ಯಾವುದು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಐಪಿಎಲ್ ಟೂರ್ನಿ ಆರಂಭವಾಗಿರುತ್ತದೆ, ಅಭಿಮಾನಿಗಳು ಪ್ರತಿ ಐಪಿಎಲ್ ನಂತೆ ಬಾರಿಯೂ ಕೂಡ ಐಪಿಎಲ್ ನ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ. ಅದರಲ್ಲಿಯೂ ಈ ಬಾರಿಯ ಐಪಿಎಲ್ ಬಹಳ ವಿಶೇಷವಾಗಿರುವ ಕಾರಣ ಅಭಿಮಾನಿಗಳಿಗೆ ಮನರಂಜನೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂಬ ಆಲೋಚನೆ ಎಲ್ಲರದ್ದು.

ಇದೇ ಮೊದಲ ಬಾರಿಗೆ ಒಟ್ಟಾರೆಯಾಗಿ 10 ತಂಡಗಳ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ವಿವಿಧ ಗುಂಪುಗಳಾಗಿ ತಂಡಗಳನ್ನು ವಿಂಗಡನೆ ಮಾಡಿ ಕೈ ಐಪಿಎಲ್ ನಡೆಸಲಾಗುತ್ತಿದೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ವಿಶೇಷತೆಗಳಿಗೆನು ಕೊರತೆಯಿಲ್ಲ, ಹೀಗಿರುವಾಗ ಯಾವುದೇ ಐಪಿಎಲ್ ಟೂರ್ನಿ ಆಗಿರಲಿ ಅದು ಎಷ್ಟೇ ವಿಶೇಷತೆಯನ್ನು ಹೊಂದಿರಲಿ ನಮ್ಮ ಆರ್ಸಿಬಿ ಅಭಿಮಾನಿಗಳಿಗೆ ನಿಜಕ್ಕೂ ಐಪಿಎಲ್ ಬಂತು ಎಂದರೆ ಅದು ಒಂದು ರೀತಿಯ ಹಬ್ಬವಿದ್ದಂತೆ. ಆರ್ಸಿಬಿ ತಂಡ ಗೆಲ್ಲದೇ ಇರಬಹುದು ಆದರೆ ಪ್ರತಿ ಬಾರಿಯೂ ಕೂಡ ಐಪಿಎಲ್ ಟೂರ್ನಿ ಬಂದಾಗ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಯ ಮಾತಲ್ಲಿ ಕೇಳಿ ಬರುವುದು ಈ ಸಲ ಕಪ್ ನಮ್ಮದೇ ಎಂಬ ಮಾತು.

ಪ್ರತಿ ಬಾರಿಯೂ ಯಾರು ಎಷ್ಟೇ ಟ್ರೋಲ್ ಮಾಡೋ ಪ್ರಯತ್ನ ಪಟ್ಟರೂ ನಾವು ಕಾಲರ್ ಎತ್ಕೊಂಡು ಈ ಸಲ ಕಪ್ ನಮ್ಮದೇ ಎನ್ನುವ ಡೈಲಾಗ್ ಮಾತ್ರ ಇಲ್ಲಿಯವರೆಗೂ ಬದಲಾಗಿಲ್ಲ ಹಾಗೂ ಐಪಿಎಲ್ ಟೂರ್ನಿ ಗೆಲ್ಲದಿದ್ದರೂ ಕೂಡ ಡೈಲಾಗ್ ಬದಲಾಗುವುದಿಲ್ಲ. ಹೇಳಿ ಕೇಳಿ ನಾವು ಆರ್ಸಿಬಿ ಅಭಿಮಾನಿಗಳು ಕಪ್ ಗೆಲ್ಲದೇ ಟೂರ್ನಿ ಅಂತ್ಯವಾದರೂ ಕೂಡ ಮತ್ತೆ ಅದೇ ಜೋಶ್ ಇಂದ ಮುಂದಿನ ಬಾರಿ ಕಪ್ ನಮ್ಮದೇ ಎನ್ನುವ ಜಾಯಮಾನ ನಮ್ಮದು.

ಇತರ ತಂಡ ಗಳಂತೆ ಒಂದೆರಡು ಬಾರಿ ಸೋತ ತಕ್ಷಣ ನಾವು ಮತ್ತೊಂದು ತಂಡಗಳನ್ನು ಕೈ ಹಿಡಿಯುವುದಿಲ್ಲ ಅಥವಾ ಮತ್ತೊಂದು ತಂಡಗಳಿಗೆ ಬೆಂಬಲ ನೀಡುವುದಿಲ್ಲ ಬದಲಾಗಿ ಗೆದ್ದರೂ ಸೋತರೂ ಕೂಡ ಪ್ರತಿ ಸಲ ನಾವು ಆರ್ಸಿಬಿಗೆ ಸಪೋರ್ಟ್ ಮಾಡೋದು ಅಲ್ಲವೇ. ಅದೇ ರೀತಿ ಈ ಬಾರಿಯೂ ಕೂಡ ಬಹಳ ಜೋಶ್ ನಲ್ಲಿ ಈ ಸಲ ಕಪ್ ನಮ್ದೇ ಎಂದು ಈಗಾಗಲೇ ಸಾಕಷ್ಟು ಟ್ರೆಂಡಿಂಗ್ ಸೃಷ್ಟಿ ಮಾಡಿಬಿಟ್ಟಿದ್ದೇವೆ.

ಇನ್ನು ಈ ಸಮಯದಲ್ಲಿ ಆರ್ಸಿಬಿ ತಂಡದಲ್ಲಿ ಕೂಡ ಈ ಬಾರಿ ಸಾಕಷ್ಟು ವಿಶೇಷತೆಗಳನ್ನು ನಾವು ಕಾಣಬಹುದಾಗಿದೆ. ಏಕೆಂದರೆ ಹಲವಾರು ವರ್ಷಗಳಿಂದ ನಾಯಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ನಮ್ಮ ನಿಮ್ಮೆಲ್ಲರ ನೆಚ್ಚಿನ ವಿರಾಟ್ ಕೊಹ್ಲಿ ಈ ಬಾರಿ ನಾಯಕನಾಗಿರುವುದಿಲ್ಲ ಅಷ್ಟೇ ಅಲ್ಲದೆ ಆರ್ಸಿಬಿ ತಂಡದ ಆಪತ್ಬಾಂಧವ ಎನಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್ ರವರು ಈ ಬಾರಿ ಮೈದಾನದಲ್ಲಿ ಕಣಕ್ಕೆ ಇಳಿಯುವುದಿಲ್ಲ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಉಂಟು ಮಾಡಿರುವುದು ಸುಳ್ಳಲ್ಲ.

ಆದರೂ ಕೂಡ ನಾವು ಮತ್ತೆ ಅದೇ ಜೋಶ್ ನಲ್ಲಿ ಈ ಬಾರಿ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇವೆ ಆದರೆ ಇಡೀ ಆರ್ಸಿಬಿ ಅಭಿಮಾನಿಗಳಲ್ಲಿ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಮಾಡಿದ ಅದೊಂದು ತಪ್ಪು ಎದ್ದು ಕಾಣುತ್ತಿದೆ. ಖಂಡಿತ ಆರ್ಸಿಬಿ ಮ್ಯಾನೇಜ್ಮೆಂಟ್ ಈ ಬಾರಿ ಈ ತಪ್ಪು ಮಾಡದೇ ಇದ್ದಿದ್ದಲ್ಲಿ ಆರ್ಸಿಬಿ ತಂಡ ಈ ಬಾರಿ ಗೆಲ್ಲಬಹುದಾಗಿತ್ತು ಎಂದು ಎಲ್ಲಾ ಕಡೆ ಮಾತುಗಳು ಕೇಳಿ ಬರುತ್ತಿವೆ, ಅಷ್ಟಕ್ಕೂ ಆ ತಪ್ಪು ಯಾವುದು ಎಂಬುದನ್ನು ನಾವು ನೋಡುವುದಾದರೆ ಅದುವೇ ನಾಯಕತ್ವದ ಆಯ್ಕೆ.

ಯಾಕೆಂದರೆ ವಿರಾಟ್ ಕೊಹ್ಲಿ ರವರು ಈಗಾಗಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ತಂಡಕ್ಕೆ ನೀಡಿರುವುದರಿಂದ ಈ ಬಾರಿ ಅವರನ್ನು ಮತ್ತೆ ನಾಯಕನನ್ನಾಗಿ ಆಯ್ಕೆ ಮಾಡಬೇಕಾಗಿತ್ತು, ಹೀಗೆ ಆಯ್ಕೆ ಮಾಡಿದ್ದಾರೇ ಯುವ ತಂಡವನ್ನು ತನ್ನ ಅಗ್ರೆಸ್ಸಿವ್ ಆಟದ ಮೂಲಕ ಮುನ್ನಡೆಸಿ ಕಪ್ ಗೆಲ್ಲುತ್ತಿದ್ದರು. ಆದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡುಪ್ಲೆಸಿಸ್ ರವರಿಗೆ ನಾಯಕತ್ವ ನೀಡಿರುವುದು ಹಲವಾರು ಜನರಿಗೆ ಇಷ್ಟವಾಗಿಲ್ಲ ಎಂಬುದು ಕಹಿಸತ್ಯ.

ಆತನನ್ನು ನಾಯಕನು ಎಂದು ಒಪ್ಪಿಕೊಳ್ಳುವುದಕ್ಕೆ ಯಾವುದೇ ತಕರಾರು ಇಲ್ಲವಾದರೂ ಕೂಡ ವಿರಾಟ್ ಕೊಹ್ಲಿ ಅವರನ್ನು ನಾಯಕ ಅಲ್ಲ ಎಂದು ಒಪ್ಪಿಕೊಳ್ಳುವುದಕ್ಕೆ ಅದೆಷ್ಟೋ ಜನರಿಗೆ ಸಾಧ್ಯವಾಗುತ್ತಿಲ್ಲ. ಕೊಹ್ಲಿಯ ಮೇಲೆ ಯಾವುದೇ ಒತ್ತಡ ಇಲ್ಲದ ಕಾರಣ ನಿಜಕ್ಕೂ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದರು ಎಂದು ಹಲವಾರು ಕ್ರಿಕೆಟ್ ವಿಶ್ಲೇಷಕರು ಕೂಡ ಹೇಳುತ್ತಿದ್ದಾರೆ, ಆದರೆ ಅದ್ಯಾಕೋ ತಿಳಿದಿಲ್ಲ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ವಿರಾಟ್ ಕೊಹ್ಲಿ ಅವರನ್ನು ಮತ್ತೆ ನಾಯಕನನ್ನಾಗಿ ಆಯ್ಕೆ ಮಾಡಿಲ್ಲ. ನಿಜಕ್ಕೂ ಇದೊಂದು ತಪ್ಪು ಮಾಡದೇ ಇದ್ದಿದ್ದರೆ ಖಂಡಿತ ಆರ್ಸಿಬಿ ತಂಡ ಈ ಬಾರಿ ಯುವ ತಂಡವನ್ನು ಇಟ್ಟುಕೊಂಡು ಕಪ್ ಗೆಲ್ಲಬಹುದು ಆಗಿತ್ತು ಎಂಬುದು ಎಲ್ಲರ ಮಾತಾಗಿದೆ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಬರಬೇಡಿ