ಅಂದಿನಿಂದ ಇಂದಿನವರೆಗೂ ಕನ್ನಡ ಚಿತ್ರರಂಗದ ಮರೆಯಲಾಗದ ಪಾತ್ರಗಳು ಯಾವ್ಯಾವು ಗೊತ್ತೇ??

ಅಂದಿನಿಂದ ಇಂದಿನವರೆಗೂ ಕನ್ನಡ ಚಿತ್ರರಂಗದ ಮರೆಯಲಾಗದ ಪಾತ್ರಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿಮಾಗಳು ನಮ್ಮ ಬೇಸರವನ್ನು ಕಳೆದು ಮನರಂಜನೆಯನ್ನು ನೀಡುವ ಮುಖ್ಯ ಮಾಧ್ಯಮಗಳು. ಹೀಗಾಗಿ ನಮ್ಮ ಭಾರತ ದೇಶದ ಅತ್ಯಂತ ಈ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲ ಹಾಗೂ ಪ್ರೇಕ್ಷಕರು ಇದ್ದಾರೆ. ಹೋಗಿದ್ದಾರೆ ಇನ್ನು ನಮಗಿಷ್ಟವಾದ ನಾಯಕನಟರು ಹಾಗೂ ನಾಯಕ ನಟಿಯರು ಹೇಗೆ ಇರುತ್ತಾರೋ ಅದೇ ರೀತಿ ಇಷ್ಟವಾದ ಪಾತ್ರಗಳು ಕೂಡ ಹಲವಾರು ಸಿನಿಮಾಗಳಲ್ಲಿ ಇರುತ್ತವೆ. ಹೌದು ಸ್ನೇಹಿತರ ಇಂದಿನ ವಿಷಯದಲ್ಲಿ ಕೂಡ ನಾವು ಇಂದು ಎಂದು ಮರೆಯಲಾರದಂತಹ ಪಾತ್ರಗಳ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ತಪ್ಪದೆ ಕೊನೆಯವರೆಗೂ ಓದಿ.

ಸತ್ಯಣ್ಣ ಹೌದು ಸ್ನೇಹಿತರೇ ದುನಿಯಾ ಚಿತ್ರದ ರಂಗಾಯಣರಘು ರವರ ಸತ್ಯಣ್ಣ ಎಂಬ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಇದಕ್ಕಿಂತ ಮುಂಚೆ ಅವರು ರಂಗ ಎಸೆಸೆಲ್ಸಿ ಇನ್ನು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಈ ಪಾತ್ರ ಅವರಿಗೆ ಸಾಕಷ್ಟು ಜನಮನ್ನಣೆ ತಂದುಕೊಟ್ಟಂತಹ ಪಾತ್ರವಾಗಿದೆ. ಇನ್ನು ಈ ಪಾತ್ರದಲ್ಲಿ ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಎಂಬ ಡೈಲಾಗ್ ಹೊಡೆದಿದ್ದು ಇಂದಿಗೂ ಕೂಡ ಜನರ ಬಾಯಲ್ಲಿ ಬಾಯಿಪಾಠವಾಗಿ ಬಿಟ್ಟಿದೆ.

ಡಾಲಿ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ವರ್ಷಗಳ ಹಿಂದೆ ಎಂಟ್ರಿ ಕೊಟ್ಟಿದ್ದರು ಕೂಡ ಧನಂಜಯ್ ರವರಿಗೆ ಹೇಳಿಕೊಳ್ಳುವ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಶಿವಣ್ಣ ನಟನೆಯ ಟಗರು ಚಿತ್ರದಲ್ಲಿ ಡಾಲಿ ಪಾತ್ರವನ್ನು ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡರು.

ಚಾಮಯ್ಯ ಮೇಷ್ಟ್ರು ಹೌದು ಸ್ನೇಹಿತರೆ ಅಶ್ವತ್ ರವರ ಸಾಹಸಸಿಂಹ ವಿಷ್ಣುವರ್ಧನ್ ಅವರ ಚೊಚ್ಚಲ ಚಿತ್ರವಾದ ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕ ಇಂದಿಗೂ ಕೂಡ ಅವರು ಇಲ್ಲದಿದ್ದರೂ ಅಜರಾಮರರಾಗಿ ಉಳಿದುಕೊಂಡಿದ್ದಾರೆ.

ಪುಟ್ಮಲ್ಲಿ ಹೌದು ಸ್ನೇಹಿತರೆ ಉಮಾಶ್ರೀಯವರು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸೂಪರ್ ಹಿಟ್ ಚಿತ್ರ ಪುಟ್ನಂಜ ಚಿತ್ರದಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರವಾದ ಪುಟ್ಮಲ್ಲಿ ಪಾತ್ರದ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಉಮಾಶ್ರೀ ಅವರು ಈ ಪಾತ್ರದಲ್ಲಿ ವಯಸ್ಸಿನೊಂದಿಗೆ ಧ್ವನಿಯಲ್ಲಿ ಕೂಡ ಬದಲಾವಣೆಯನ್ನು ಮಾಡಿಕೊಂಡು ನಟನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಗಣೇಶ ಅನಂತನಾಗ್ ನಾಯಕನಟನಾಗಿ ನಟಿಸಿದಂತಹ ಗೌರಿ-ಗಣೇಶ ಚಿತ್ರದಲ್ಲಿ ಮಾಸ್ಟರ್ ಆನಂದರವರು ಗಣೇಶ ಪಾತ್ರದ ಮೂಲಕ ಸಾಕಷ್ಟು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅದು ಕೂಡ ಚಿಕ್ಕವಯಸ್ಸಿನಲ್ಲಿ. ಚಿಕ್ಕವಯಸ್ಸಿನಲ್ಲೇ ಆ ಪಾತ್ರದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರನ್ನು ಮಿಮಿಕ್ರಿ ಮಾಡುತ್ತಿದ್ದರು ಮಾಸ್ಟರ್ ಆನಂದರವರು.

ಅಭಿಷೇಕ್ ಹೌದು ಸ್ನೇಹಿತರೆ ಅಮೃತವರ್ಷಿಣಿ ಚಿತ್ರದಲ್ಲಿ ರಮೇಶ್ ಅರವಿಂದ್ ರವರು ತಮ್ಮ ವಿಭಿನ್ನವಾದ ಪಾತ್ರದ ಮೂಲಕ ತಮ್ಮ ನಟನೆಯನ್ನು ಎಲ್ಲರಮುಂದೆ ಸಾಬೀತುಪಡಿಸಿದ್ದಾರೆ. ಹೌದು ಸ್ನೇಹಿತರೆ ಅಮೃತವರ್ಷಿಣಿ ಚಿತ್ರದ ಅಭಿಷೇಕ್ ಪಾತ್ರದ ಮೂಲಕ ಒಳ್ಳೆಯ ನಂತಿರುವ ಕೆಟ್ಟವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್ಮುಗ ರವಿಶಂಕರ್ ಅವರು ಕನ್ನಡ ಚಿತ್ರರಂಗಕ್ಕೆ ಕೆಂಪೇಗೌಡ ಚಿತ್ರದ ಆರುಮುಗ ಪಾತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಈ ಪಾತ್ರದ ಮೂಲಕ ರಾತ್ರೋರಾತ್ರಿ ರವಿಶಂಕರ್ ಅವರು ಕರ್ನಾಟಕ ರಾಜ್ಯದಾದ್ಯಂತ ಮನೆಮಾತಾಗು ತ್ತಾರೆ. ಇಂದಿಗೂ ಕೂಡ ರವಿಶಂಕರ್ ಅವರ ಬಗ್ಗೆ ಮಾತನಾಡಬೇಕಾದರೆ ಕೆಂಪೇಗೌಡ ಚಿತ್ರದ ಆರ್ಮುಗ ಪಾತ್ರ ಸದಾ ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತದೆ.