ಎಲ್ಲರ ಆಸೆಗಳನ್ನು ಈಡೇರಿಸುವ ಈ ದೇವಿಯ ಹಣೆ ಮಾತ್ರ ಮಾನವ ಚರ್ಮದಂತಿದೆ, ಆ ದೇವಿ ಯಾರು ಗೊತ್ತಾ? ದೇವಾಲಯದ ವಿಶೇಷತೆಯೇನು ಗೊತ್ತೇ??

ಎಲ್ಲರ ಆಸೆಗಳನ್ನು ಈಡೇರಿಸುವ ಈ ದೇವಿಯ ಹಣೆ ಮಾತ್ರ ಮಾನವ ಚರ್ಮದಂತಿದೆ, ಆ ದೇವಿ ಯಾರು ಗೊತ್ತಾ? ದೇವಾಲಯದ ವಿಶೇಷತೆಯೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಕಷ್ಟು ಜನರು ತಮ್ಮ ಜೀವನದಲ್ಲಿ ಸಾಕಷ್ಟು ಆಸೆ-ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಇಂತಹ ಜನರಲ್ಲಿ ಕೆಲವರ ಆಸೆಗಳು ಈಡೇರಿದರೆ ಮತ್ತೆ ಕೆಲವರ ಆಸೆಗಳು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಈಡೇರುವುದಿಲ್ಲ. ಇಂತಹ ಜನರು ದೇವಸ್ಥಾನಗಳಿಗೆ ಹೋಗಿ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಇಂತಹ ದೇವಾಲಯಗಳನ್ನು ನಾವು ಭಾರತದ ಅನೇಕ ಪ್ರದೇಶಗಳಲ್ಲಿ ಕಾಣಬಹುದು. ಇನ್ನು ಅದೇ ರೀತಿ ನಾವು ಹೇಳಲು ಹೊರಟಿರುವ ದೇವಿಯ ಚರಿತ್ರೆಯು ಕೂಡ ಪವಾಡ ಎನಿಸುತ್ತದೆ.

ಹೌದು ಸಾಕಷ್ಟು ಜನರು ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ತಾಯಿಯೆಂದು ಈ ದೇವಾಲಯಕ್ಕೆ ಹಣಿಹಚ್ಚಿ ಬರುವುದುಂಟು. ಇನ್ನು ಈ ದೇವಿಯ ವಿಗ್ರಹ ಸಂಪೂರ್ಣವಾಗಿ ಕಲ್ಲಿನಿಂದ ಕೂಡಿದೆ. ಆದರೆ ಹಣೆಯ ಭಾಗ ಮಾತ್ರ ಮಾನವನ ಚರ್ಮದಂತೆ ಮೃದುವಾಗಿದೆ. ಇನ್ನು ಆ ದೇವಿ ಯಾರು..? ಆ ದೇವಿಯ ಮಹಿಮೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಸ್ನೇಹಿತರೆ, ಶ್ರೀಶೈಲಂ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಶ್ರೀಶೈಲಂ ಇದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬರುವಂತಹ ಪವಿತ್ರ ಸ್ಥಳವಾಗಿದೆ. ಪ್ರತಿವರ್ಷ ಹಲವಾರು ಜನರು ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಇಂತಹ ಪಾದಯಾತ್ರಿಕರಲ್ಲಿ ನಮ್ಮ ಕನ್ನಡದವರೇ ಹೆಚ್ಚು. ಅಲ್ಲಿನ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ದರ್ಶನ ಪಡೆದು ತಮ್ಮ ಜೀವನ ಸುಖಕರವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಇನ್ನು ಶ್ರೀಶೈಲಂ ನಿಂದ 20 ಕಿಲೋಮೀಟರ್ ನಲ್ಲಿ ದಟ್ಟವಾದ ನಲ್ಲಮಲ್ಲ ಎಂಬ ಅರಣ್ಯದಲ್ಲಿ ಸುಪ್ರಸಿದ್ಧವಾದ ಇಷ್ಟಕಾಮೇಶ್ವರಿ ದೇವಿಯ ದೇವಸ್ಥಾನವಿದೆ. ಭಕ್ತಾದಿಗಳ ಆಶಯಗಳನ್ನು ಈಡೇರಿಸುವ ದೇವಿಯೇ ಇಷ್ಟಕಮೇಶ್ವರಿ ದೇವಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ದೇವಿಯು ಪಾರ್ವತಿ ದೇವಿಯ ಮತ್ತೊಂದು ರೂಪ ಎಂದು ಕೂಡ ಹೇಳಲಾಗುತ್ತದೆ. ಇನ್ನು ಈ ದೇವಿಯು ಒಂದು ಗುಹೆಯಲ್ಲಿ ನೆಲೆಸಿದ್ದು, ಒಂದು ಬಾರಿ ನಾಲ್ಕರಿಂದ ಐದು ಜನ ದೇವಿಯ ದರ್ಶನ ಪಡೆಯಲು ಅನುಕೂಲವಾಗಿದೆ.

ಇನ್ನು ಈ ದೇವಿಯ ಮೂರ್ತಿಯು ನೋಡಲು ಸುಂದರವಾಗಿದ್ದು, ಕೈಯಲ್ಲಿ ಇಷ್ಟಲಿಂಗವನ್ನು ಹಿಡಿದು ದೇವಿ ಮಂದಹಾಸದಿಂದ ಭಕ್ತಾದಿಗಳ ಬಯಕೆಗಳನ್ನು ಈಡೇರಿಸುತ್ತಾಳೆ. ಇನ್ನು ಈ ದೇವಿಯ ಕೈಗಳಲ್ಲಿ ಅಕ್ಷಮಾಲೆ, ಶಿವಲಿಂಗ, 2 ಕಮಲದ ಮೊಗ್ಗುಗಳು ಕಂಡುಬರುತ್ತವೆ. ಇನ್ನು ಈ ದೇವಿಯ ಆಲಯವು ಸುಮಾರು ಎಂಟರಿಂದ 10 ನೇ ಶತಮಾನದಲ್ಲಿ ಸ್ಥಾಪಿತವಾಗಿದೆ ಎಂದು ಹೇಳಲಾಗುತ್ತದೆ. ಈ ದೇವಿ ನೆಲೆಸಿರುವ ಪ್ರದೇಶವನ್ನು ಇಷ್ಟಕಾಮೇಶ್ವರಂ ಎಂದು ಕರೆಯಲಾಗುತ್ತದೆ. ಈ ಹಿಂದೆ ಜನರು ಇದೇ ಪ್ರದೇಶದ ಮೂಲಕ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿದ್ದರಂತೆ.

ದೇವಾಲಯಕ್ಕೆ ಬರುವ ಭಕ್ತಾದಿಗಳು ದೇವಿಯ ಹಣೆಗೆ ಕುಂಕುಮವನ್ನು ಹಚ್ಚಿ ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಇನ್ನು ಭಕ್ತಾದಿಗಳಿಗೆ ದೇವಿಯ ಹಣೆಗೆ ಕುಂಕುಮ ಹಚ್ಚುವುದು ಒಂದು ರೋಮಾಂಚನವನ್ನು ನೀಡುತ್ತದೆ. ಏಕೆಂದರೆ ದೇವಿಯ ಹಣೆಯ ಭಾಗವು ಮನುಷ್ಯರ ಚರ್ಮದಂತೆ ಮೃದುವಾಗಿದೆ. ಇದರಿಂದ ನಿಜವಾದ ದೇವಿಯ ಹಣೆಗೆ ಕುಂಕುಮ ಇಡುತ್ತಿದ್ದೇವೆ ಎಂಬ ದೈವತಾ ಭಾವ ಭಕ್ತಾದಿಗಳಲ್ಲಿ ಮೂಡುತ್ತದೆ.

ಹೀಗೆ ದೇವಿಯ ಬಳಿ ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದ ಅದೆಷ್ಟೋ ಭಕ್ತಾದಿಗಳಿಗೆ ಇದರಿಂದ ಒಳ್ಳೆಯದಾಗಿದೆ ಎಂಬ ಪ್ರತೀತಿ ಇದೆ. ಹಾಗಾಗಿ ಈ ದೇವಿಯ ದರ್ಶನ ಪಡೆಯಲು ಬರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ದೇಗುಲದ ಮುಂಭಾಗದಲ್ಲಿ ನಂದಿ, ಗಣಪತಿ, ಮಹಿಷಾಸುರ ಮರ್ದಿನಿ ಹಾಗೂ ಭೈರವರ ಮೂರ್ತಿಗಳಿವೆ. ಇನ್ನು ಈ ಪ್ರದೇಶಕ್ಕೆ ತೆರಳಲು ಶ್ರೀಶೈಲಂ ನಿಂದ ಖಾಸಗಿ ವಾಹನಗಳ ಸೌಲಭ್ಯವಿದೆ. ಇನ್ನು ನೀವು ಶ್ರೀಶೈಲ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಈ ದೇವಿಯ ದರ್ಶನ ಪಡೆಯುವುದು ಉತ್ತಮ ಎಂದು ಹೇಳಬಹುದು.