ಆಸ್ಟ್ರೇಲಿಯಾದ ಬಲಿಷ್ಠ ವೇಗಿ ಬದಲಿ ಆಟಗಾರನಾಗಿ ಐಪಿಎಲ್ ಗೆ ಎಂಟ್ರಿ, ಮತ್ತಷ್ಟು ಬಲಿಷ್ಠಗೊಂಡ ತಂಡ.

ಆಸ್ಟ್ರೇಲಿಯಾದ ಬಲಿಷ್ಠ ವೇಗಿ ಬದಲಿ ಆಟಗಾರನಾಗಿ ಐಪಿಎಲ್ ಗೆ ಎಂಟ್ರಿ, ಮತ್ತಷ್ಟು ಬಲಿಷ್ಠಗೊಂಡ ತಂಡ.

ನಮಸ್ಕಾರ ಸ್ನೇಹಿತರೇ ಭಾರತೀಯರ ನೆಚ್ಚಿನ ಕ್ರಿಕೆಟ್ ಹಬ್ಬ ಟಾಟಾ ಐಪಿಎಲ್ 2022 ಇನ್ನು ಕೇವಲ ಎರಡು ದಿನಗಳಲ್ಲಿ ಅಂದರೆ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಈ ಕ್ರಿಕೆಟ್ ಹಬ್ಬಕ್ಕೆ ಈಗಾಗಲೇ ತಂಡಗಳು ಕೂಡ ಸನ್ನದ್ಧವಾಗಿದೆ. ಸದ್ಯಕ್ಕೆ ನಾವು ಮಾತನಾಡಲು ಹೊರಟಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಕುರಿತಂತೆ. ಈ ತಂಡವನ್ನು ಈಗಾಗಲೇ ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಲಿದ್ದಾರೆ. ತಂಡದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ ಕೂಡ ಇದ್ದಾರೆ.

ಮನೀಶ್ ಪಾಂಡೆ ಮಾರ್ಕಸ್ ಸ್ಟೊಯಿನಿಸ್ ಕೃನಾಲ್ ಪಾಂಡ್ಯ ದೀಪಕ್ ಹೂಡ ರವಿ ಬಿಷ್ನೋಯ್ ಸೇರಿದಂತೆ ಪ್ರಮುಖ ಆಟಗಾರರು ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಈ ಬಾರಿ ಲಕ್ನೋ ತಂಡವು ಕೂಡ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ. ಕೇವಲ ಇಷ್ಟು ಮಾತ್ರವಲ್ಲದೆ ಈ ಬಾರಿ ಲಕ್ನೋ ತಂಡ ಮಾರ್ಕ್ ವುಡ್ ರವರನ್ನು ಕೂಡ ಬರೋಬ್ಬರಿ 7.50 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಮಾರ್ಕ್ ವುಡ್ ರವರು ಮೊಣಕೈ ಗಾ’ಯದಿಂದಾಗಿ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಇನ್ನು ಅವರ ಬದಲು ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಿದ್ದಾರೆ ಎನ್ನುವುದರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಲಕ್ನೋ ತಂಡದಲ್ಲಿ ಮಾರ್ಕ್ ವುಡ್ ರವರಿಂದ ತೆರವಾಗಿರುವ ಸ್ಥಾನವನ್ನು ಆಸ್ಟ್ರೇಲಿಯಾದ ಆಲ್-ರೌಂಡರ್ ಆಗಿರುವ ಆಂಡ್ರೂ ಟೈ ರವರು ತುಂಬಲಿದ್ದಾರೆ. ಹೌದು ಈ ಮೊದಲು ಈ ಸ್ಥಾನಕ್ಕಾಗಿ ಬಾಂಗ್ಲಾದೇಶದ ತಸ್ಕಿನ್ ಅಹಮದ್ ರವರನ್ನು ಕೂಡ ಅಪ್ರೋಚ್ ಮಾಡಲಾಗಿತ್ತು. ಆದರೆ ಇಲ್ಲಿ ತೋರಿ ಬಂದಂತಹ ಕೆಲವು ಸಮಸ್ಯೆಗಳ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಕೊನೆಗೂ ಈಗ ಐಪಿಎಲ್ ನಲ್ಲಿ ಹಲವಾರು ತಂಡಗಳ ಜೊತೆಗೆ ಆಡಿರುವ ಅನುಭವವನ್ನು ಹೊಂದಿರುವ ಆಂಡ್ರೂ ಟೈ ಅವರು ಲಕ್ನೋ ತಂಡದಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಾರಿ ನೀವು ಯಾವ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.