ಆರ್ಸಿಬಿ ಪಂದ್ಯಕ್ಕೂ ಮುನ್ನವೇ ಪಂಜಾಬ್ ತಂಡಕ್ಕೆ ಬಹುದೊಡ್ಡ ಮತ್ತೊಂದು ಶಾಕ್. ಆರ್ಸಿಬಿ ತಂಡಕ್ಕೆ ಸಿಹಿ. ನಡೆದ್ದಡೇನು ಗೊತ್ತೇ??

ಆರ್ಸಿಬಿ ಪಂದ್ಯಕ್ಕೂ ಮುನ್ನವೇ ಪಂಜಾಬ್ ತಂಡಕ್ಕೆ ಬಹುದೊಡ್ಡ ಮತ್ತೊಂದು ಶಾಕ್. ಆರ್ಸಿಬಿ ತಂಡಕ್ಕೆ ಸಿಹಿ. ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇನ್ನೇನು ಇದೇ ಮಾರ್ಚ್ 26 ರಂದು ಎಲ್ಲರೂ ಬಹುದಿನಗಳಿಂದ ಕಾಯುತ್ತಿರುವ ಟಾಟಾ ಐಪಿಎಲ್ 2022 ಪ್ರಾರಂಭವಾಗಲಿದೆ. ಮೊದಲ ಪಂದ್ಯಾಟ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಡುವಣ ನಡೆಯಲಿದೆ. ಎರಡನೇ ಪಂದ್ಯಾಟ ಅಂದರೆ ಮಾರ್ಚ್ 27 ರಂದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ವಿರುದ್ಧ ಸೆಣಸಾಡಲಿದೆ. ಹೀಗಾಗಿ ನಿಮಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಅವರು ನಾಯಕನ ಸ್ಥಾನದಿಂದ ಕೆಳಗಿಳಿದು ಮುಕ್ತವಾಗಿ ಓಪನಿಂಗ್ ಅಥವಾ ವನ್ ಡೌನ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ತಂಡದ ನಾಯಕತ್ವವನ್ನು ಸೌತ್ ಆಫ್ರಿಕಾ ಮೂಲದ ಆಟಗಾರನಾಗಿರುವ ಡುಪ್ಲೆಸಿಸ್ ಅವರು ವಹಿಸಿಕೊಂಡಿದ್ದಾರೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾಚ್ ವಿನ್ನರ್ ಆಗಿ ಹಲವಾರು ಸೀಸನ್ ಗಳಲ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಿದ್ದಾರೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಕೂಡ ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಹಾರೈಕೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪಂಜಾಬ್ ತಂಡವನ್ನು ನಮ್ಮ ಕನ್ನಡಿಗ ಮಯಾಂಕ್ ಅಗರ್ವಾಲ್ ರವರು ಮುನ್ನಡೆಸುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಪಂಜಾಬ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಹಿನ್ನೆಲೆ ಅನುಭವಿಸಬಹುದಾದಂತಹ ಸಾಧ್ಯತೆ ಹೆಚ್ಚಾಗಿದೆ.

ಹೌದು ಈ ಸುದ್ದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರದಾನವಾಗಲಿದೆ ಎಂಬುದಾಗಿ ಕೂಡ ಮಾತುಗಳು ಕೇಳಿಬರುತ್ತಿವೆ. ಹೌದು ಮೊದಲ ಪಂದ್ಯಕ್ಕೆ ಪಂಜಾಬ್ ತಂಡ ಇಬ್ಬರು ಪ್ರಮುಖ ವಿದೇಶಿ ಆಟಗಾರರ ಅಲಭ್ಯತೆಯನ್ನು ಪಡೆಯಲಿದೆ. ಹೌದು ಇಂಗ್ಲೆಂಡಿನ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ಜಾನಿ ಬೇರ್ಸ್ಟೋ ಹಾಗೂ ಸೌತ್ ಆಫ್ರಿಕಾದ ಟಾಪ್ ಬೌಲರ್ ಆಗಿರುವ ಕಗಿಸೋ ರಬಾಡ ರವರನ್ನು ಅವರ ರಾಷ್ಟ್ರೀಯ ತಂಡದ ಸರಣಿ ಯಿಂದಾಗಿ ಮೊದಲ ಮೊದಲ ಪಂದ್ಯದಲ್ಲಿ ಪಡೆದುಕೊಳ್ಳುವುದು ಅಸಾಧ್ಯವಾಗಿದೆ. ಇದು ಪಂಜಾಬ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಹಿನ್ನಡೆಗೆ ಪಡೆಯಲು ಕಾರಣವಾಗಬಹುದು ಎಂಬುದಾಗಿ ಲೆಕ್ಕ ಹಾಕಲಾಗಿದೆ. ಹೀಗಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವನ್ನು ಗೆಲ್ಲುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.