ಲಕ್ಷಣ ಮದುವೆ, ಹಿಟ್ಲರ್ ಜಾತ್ರೆ, ಧಾರಾವಾಹಿಯಲ್ಲಿ ಮಸ್ತ್ ಟ್ವಿಸ್ಟ್ ಗಳು, ಪ್ರೇಕ್ಷಕರಿಗೆ ಹಬ್ಬದಂತೆ ಇದ್ದ ವಾರದಲ್ಲಿ ಯಾವ್ಯಾವ ಧಾರವಾಹಿ ಟಾಪ್ ಗೊತ್ತೇ??

ಲಕ್ಷಣ ಮದುವೆ, ಹಿಟ್ಲರ್ ಜಾತ್ರೆ, ಧಾರಾವಾಹಿಯಲ್ಲಿ ಮಸ್ತ್ ಟ್ವಿಸ್ಟ್ ಗಳು, ಪ್ರೇಕ್ಷಕರಿಗೆ ಹಬ್ಬದಂತೆ ಇದ್ದ ವಾರದಲ್ಲಿ ಯಾವ್ಯಾವ ಧಾರವಾಹಿ ಟಾಪ್ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಪ್ರೇಕ್ಷಕರಿಗೆ ಇಷ್ಟವಾದರೆ ಧಾರಾವಾಹಿಗಳು ಗೆಲ್ಲುತ್ತವೆ ಇಲ್ಲದೆ ಹೋದರೆ ಟಿ ಆರ್ ಪಿಯಲ್ಲಿ ಒಂದು ರೇಟಿಂಗ್ ಕೂಡ ಧಾರವಾಹಿ ಬರುವುದಿಲ್ಲ. ಆದರೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ಕನ್ನಡ ಧಾರಾವಾಹಿಗಳು ಸಿನ್ಸಿಯರ್ ಆಗಿ ವೀಕ್ಷಕರಿಗಾಗಿಯೇ ಕಥೆಯನ್ನು ಸಿದ್ಧಪಡಿಸಿಕೊಂಡು ಪ್ರಸಾರವಾಗುತ್ತಿವೆ.

ಪ್ರತಿವಾರವೂ ಆರಂಭದಲ್ಲಿಯೇ ಯಾವ ಧಾರಾವಾಹಿ ಟಾಪ್ ನಲ್ಲಿ ಇರಬಹುದು ಎಂದು ಹೇಳುವುದೇ ಕಷ್ಟ. ಯಾಕೆಂದರೆ ಮೊದಲನೇ ದಿನ ಈ ಧಾರಾವಾಹಿ ಕಮ್ಮಿ ವಿವರ್ಷಿಪ್ ಪಡೆದಿರಬಹುದು ಎಂದುಕೊಳ್ಳುವಷ್ಟರಲ್ಲಿ ಮುಂದಿನ ಮೂರು ದಿನಗಳ ಕಾಲ ಜನರನ್ನು ಹಿಡಿದುಕೊಳ್ಳುವಂತೆ ಎಪಿಸೋಡ್ ಗಳು ಆ ಧಾರಾವಾಹಿಯಲ್ಲಿ ಪ್ರಸಾರವಾಗುತ್ತದೆ. ಹಾಗಾಗಿ ಸದ್ಯ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಒಂದಕ್ಕೆ ಒಂದು ಕಾಂಪಿಟೇಶನ್ ನೀಡುತ್ತೇವೆ.

ಈಗ ಟಿ ಆರ್ ಪಿ ರೇಟಿಂಗ್ ಬಗ್ಗೆ ಹೇಳುವುದಾದರೆ, ಈ ಬಾರಿ ಲಕ್ಷಣ ಸೀರಿಯಲ್ ಟಾಪ್ ಟೆನ್ ಗೆ ಸೇರ್ಪಡೆಯಾಗಿದೆ. ಬಹುಶಃ ಇದರ ಅದ್ದೂರಿ ಮದುವೆ ಸನ್ನಿವೇಶಗಳು ಕಾರಣವಾಗಿರಬಹುದು. ಇನ್ನು ಮಂಗಳಗೌರಿಯನ್ನಂತು ಜನ ಸದ್ಯಕ್ಕೆ ಬಿಡುವ ಹಾಗೆ ಕಾಣುತ್ತಿಲ್ಲ. ಹಾಗಾಗಿ 5.3 ರೇಟಿಂಗ್ ನಲ್ಲಿ 9ನೇ ಸ್ಥಾನದಲ್ಲಿ ಮಂಗಳಗೌರಿ ಮದುವೆ ಹಾಗೂ ಲಕ್ಷಣ ಎರಡು ಧಾರಾವಾಹಿಗಳು ನಿಂತಿವೆ.

ಇನ್ನು ಸತ್ಯಾ ಧಾರವಾಹಿ 5ನೇ ಸ್ಥಾನದಲ್ಲಿಯೇ ಈ ವಾರವೂ ಭದ್ರವಾಗಿ ನಿಂತಿದೆ. ಆದರೆ ರಾಮಾಚಾರಿ ಸ್ವಲ್ಪ ಎಡವಟ್ಟು ಮಾಡಿಕೊಂಡು ಆರನೇ ಸ್ಥಾನಕ್ಕೆ ತಲುಪಿದೆ. ಹಾಗೆಯೇ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಯಾವ ಬದಲಾವಣೆಗಳು ಆಗದೇ ಇದ್ದರೂ ರಾಜನಂದಿನಿ ಹಾಗೂ ಪಾಟೀಲರ ಲವ್ ಸ್ಟೋರಿ ಹೇಗಿರಬಹುದು ಎಂಬ ಕುತೂಹಲ ಜನರಲ್ಲಿದೆ. ಹಾಗಾಗಿ ವೀಕ್ಷಕರು ಈ ಧಾರಾವಾಹಿ ನ ನಾಲ್ಕನೇ ಸ್ಥಾನದಲ್ಲಿಯೆ ಕೂರಿಸಿದ್ದಾರೆ.

ಇನ್ನು ಟಾಪ್ ತ್ರೀ ಧಾರಾವಾಹಿಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ನಾವು ನಮ್ಮ ಸ್ಥಾನವನ್ನು ಯಾರಿಗೂ ಬಿಟ್ ಕೊಡಲ್ಲ ಎನ್ನುವಂತೆ ಪುಟ್ಟಕ್ಕನ ಮಕ್ಕಳು ಮೊದಲನೇ ಸ್ಥಾನದಲ್ಲಿ ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನದಲ್ಲಿ ಹಾಗೂ ಹಿಟ್ಲರ್ ಕಲ್ಯಾಣ ಮೂರನೇ ಸ್ಥಾನದಲ್ಲಿ ಭದ್ರವಾಗಿವೆ. ನಟಿ ಸಿರಿಜಾ ಬೇರೆಯದೇ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಮದುಮಗಳು ಧಾರಾವಾಹಿ ಆರಂಭದಲ್ಲೇ 2.3 ರೇಟಿಂಗ್ ಪಡೆದಿದ್ದು ಮುಂದಿನ ದಿನಗಳಲ್ಲಿ ಟಾಪ್ ಟೆನ್ ಗೆ ಬರುವ ಎಲ್ಲಾ ಸಾಧ್ಯತೆಗಳು ಇವೆ.

ಇನ್ನು ವೀಕೆಂಡ್ ಮಸ್ತಿಯ ಬಗ್ಗೆ ಮಾತಾಡೋ ಹಾಗಿದ್ರೆ ರಿಯಾಲಿಟಿ ಶೋಗಳು ಕೂಡ ತಾ ಮುಂದು ನಾ ಮುಂದು ಎಂದು ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿವೆ. ಸದ್ಯ ಹಿಟ್ಲರ್ ಕಲ್ಯಾಣ ಜಾತ್ರೆಯ ಭಯಂಕರ ಯಶಸ್ಸನ್ನು ಗಳಿಸಿದೆ. 6.0 ರೇಟಿಂಗ್ ಪಡೆದು ವೀಕೆಂಡ್ ಕಿಂಗ್ ಆಗಿದೆ. ರಿಯಾಲಿಟಿ ಶೋಗಳಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಮೊದಲ ಸ್ಥಾನದಲ್ಲಿದ್ದರೆ, ಗೋಲ್ಡನ್ ಗ್ಯಾಂಗ್ ಎರಡನೇ ಸ್ಥಾನದಲ್ಲಿದೆ. ಇನ್ನು ಡ್ಯಾನ್ಸಿಂಗ್ ಚಾಂಪಿಯನ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.