ಇಡೀ ಸಿನಿಮಾ ನೋಡಿದಾಗ ಅಪ್ಪು ನಮ್ಮ ಜೊತೆ ಇರುವರು ಎಂದು ಅನಿಸುತ್ತದೆ, ಆದರೆ ಅದೊಂದು ದೃಶ್ಯದಲ್ಲಿ ಸತ್ಯ ತಿಳಿಯುತ್ತದೆ, ಅಂತದ್ದು ಆ ದೃಶ್ಯದಲ್ಲಿ ಏನಿದೆ ಗೊತ್ತೇ??

ಇಡೀ ಸಿನಿಮಾ ನೋಡಿದಾಗ ಅಪ್ಪು ನಮ್ಮ ಜೊತೆ ಇರುವರು ಎಂದು ಅನಿಸುತ್ತದೆ, ಆದರೆ ಅದೊಂದು ದೃಶ್ಯದಲ್ಲಿ ಸತ್ಯ ತಿಳಿಯುತ್ತದೆ, ಅಂತದ್ದು ಆ ದೃಶ್ಯದಲ್ಲಿ ಏನಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಖಂಡಿತವಾಗಿಯೂ ಮಾರ್ಚ್ 17 2022 ಸದಾಕಾಲ ನೆನಪಿಡುವಂತಹ ದಿನ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈ ದಿನ ಕೇವಲ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮದಿನಾಚರಣೆ ಮಾತ್ರವಲ್ಲದೆ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಕೂಡ ಬಿಡುಗಡೆಯಾಗಿತ್ತು. ಕೇವಲ ಬಿಡುಗಡೆ ಮಾತ್ರವಲ್ಲದೆ ಅದ್ದೂರಿ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಕೂಡ ಹೊಸ ದಾಖಲೆ ರಚಿಸಿತ್ತು ಎಂದು ಹೇಳಬಹುದು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಕನ್ನಡ ಚಿತ್ರರಂಗದ ಅಭಿಮಾನಿಗಳು ಅವರನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಲವಾದ ನಂತರವೇ ಅವರ ಸಮಾಜ ಸೇವೆಗಳು ಒಳ್ಳೆಯ ಕಾರ್ಯಗಳು ಎಲ್ಲವೂ ಕೂಡ ಎಲ್ಲರಿಗೂ ಬಹಿರಂಗವಾಗಿ ತಿಳಿದುಬಂದಿದ್ದು. ಇದಾದ ನಂತರ ನಿಜಕ್ಕೂ ಕೂಡ ಇಂತಹ ಒಳ್ಳೆಯ ಮನುಷ್ಯನನ್ನು ಯಾಕೆ ಕರೆದುಕೊಂಡೇ ದೇವರೇ ಎಂಬುದಾಗಿ ಪ್ರತಿದಿನ ಕನ್ನಡಿಗರು ಶಾಪ ಹಾಕುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ದಿನಕ್ಕೆ ಸಹಸ್ರಾರು ಜನರು ಅವರ ದರ್ಶನಕಾಗಿ ಬರುತ್ತಿದ್ದರು. ತಮ್ಮ ಸ್ವಂತ ಸಂಬಂಧಿಕರೇ ನಮ್ಮನ್ನು ಅಗಲಿ ಹೋದರೋ ಎನ್ನುವಷ್ಟರಮಟ್ಟಿಗೆ ದುಃಖಿತರಾಗಿದ್ದಾರೆ ಎಲ್ಲರೂ.

ಸದ್ಯಕ್ಕೆ ಹಲವಾರು ತಿಂಗಳುಗಳ ದುಃಖದ ಸಮಯದ ನಂತರ ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಅವರ ಕೊನೆಯ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡುವಂತಹ ಅವಕಾಶ ಒದಗಿಬಂದಿದೆ. ಸಿನಿಮಾ ನಿಜಕ್ಕೂ ಕೂಡ ಅದ್ಭುತವಾಗಿ ಮೂಡಿ ಬಂದಿದ್ದು ಎಲ್ಲಿಯೂ ಕೂಡ ರಾಜಿ ಮಾಡಿಕೊಂಡಿಲ್ಲ. ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಮಾಸ್ ಅಭಿಮಾನಿಗಳಿಗೆ ಹೇಳಿಮಾಡಿಸಿದಂತಹ ಸಿನಿಮಾ.

ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಖ್ಯಾತನಾಮ ನಟರೆಲ್ಲ ನಟಿಸಿದ್ದಾರೆ. ಶಿವಣ್ಣ ರಾಘಣ್ಣ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೆ ಆರಂಭದಿಂದ ಕೊನೆಯವರೆಗೂ ಕೂಡ ಶಿವಣ್ಣನವರೇ ತಮ್ಮ ಧ್ವನಿಯನ್ನು ನೀಡಿದ್ದಾರೆ. ಅಭಿಮಾನಿಗಳ ನಿರೀಕ್ಷೆಯಂತೆ ಸಿನಿಮಾ ಸಾಕಷ್ಟು ಸೊಗಸಾಗಿ ಮೂಡಿಬಂದಿದೆ ಇದಕ್ಕೆ ನಾವು ಚಿತ್ರದ ನಿರ್ದೇಶಕರಾಗಿರುವ ಚೇತನ್ ಕುಮಾರ್ ಅವರಿಗೆ ಸಲಾಂ ಹೇಳಲೇಬೇಕು. ಒಂದು ವಿಚಾರ ನಾವು ಇಂದಿನ ಲೇಖನಿಯಲ್ಲಿ ಹೇಳಲೇಬೇಕು. ಆರಂಭದಿಂದ ಕೊನೆಯವರೆಗೂ ಕೂಡ ಅಪ್ಪು ಅಭಿಮಾನಿಗಳಿಗೆ ಬೇಸರವಾಗಲಿಲ್ಲ. ಆದರೆ ಕೊನೆಗೆ ಬಂದಂತಹ ಆ ಒಂದು ದೃಶ್ಯದಲ್ಲಿ ಮಾತ್ರ ಎಲ್ಲರೂ ಕೂಡ ಬೇಸರವಾಗಿದ್ದರು ಹಾಗೂ ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು.

ಹೌದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಿಂಜಾ ಮಾದರಿಯ ವಸ್ತ್ರಧಾರಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುತ್ತಾರೆ. ಅಲ್ಲಿ ಪುನೀತ್ ರಾಜಕುಮಾರ್ ಅವರು ಇರಲಿಲ್ಲ ಬದಲಾಗಿ ಅವರ ಮುಖವನ್ನು ಆ ವ್ಯಕ್ತಿಯ ದೇಹಕ್ಕೆ ಎಡಿಟ್ ಮಾಡಲಾಗಿತ್ತು. ಯಾಕೆಂದರೆ ಇದು ಪುನೀತ್ ರಾಜಕುಮಾರ್ ಅವರ ಮರಣದ ನಂತರ ಚಿತ್ರೀಕರಿಸಿರುವ ದೃಶ್ಯವಾಗಿದೆ. ಈ ದೃಶ್ಯವನ್ನು ನೋಡಿದ ನಂತರ ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡುವಂತಾಗಿತ್ತು. ಅದೇನೇ ಇರಲಿ ಅಪೂರ್ವವಾದ ಗೌರವಾರ್ಥವಾಗಿ ಎಲ್ಲರೂ ಕೂಡ ತಪ್ಪದೇ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ. ಅಪ್ಪಟವಾದ ಸಿನಿಮಾ ರಸಿಕ ರಾಗಿ ಹಾಗೂ ಅಪ್ಪಟ ಅಭಿಮಾನಿಗಳಾಗಿ ಅಪ್ಪು ಅವರಿಗೆ ಭಾವಪೂರ್ಣ ಹಾಗೂ ಅರ್ಥಪೂರ್ಣ ವಾದಂತಹ ವಿದಾಯವನ್ನು ಕೋರೋಣ.

ಜೇಮ್ಸ್ ಚಿತ್ರವನ್ನು ನೋಡುವಾಗ ಖಂಡಿತವಾಗಿ ಅಪ್ಪು ಅಭಿಮಾನಿಗಳಾದವರಿಗೆ ಆಗುವ ಸಂಕಟ ಅಷ್ಟಿಷ್ಟಲ್ಲ ಎನ್ನುವುದನ್ನು ನಾವು ನೋಡಬಹುದಾಗಿದೆ. ಇದಾದ ನಂತರ ಅವರ ನೆಚ್ಚಿನ ನಟನ ಸಿನಿಮಾ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಬರುತ್ತದೆ ಎನ್ನುವುದು ಕನಸಿನ ಮಾತಾಗಿರುತ್ತದೆ. ಖಂಡಿತವಾಗಿ ಈ ವಿಚಾರದ ಕುರಿತಂತೆ ಯಾವುದೇ ಭಾವನೆಗಳನ್ನು ಕೂಡ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗುವುದು ಅಸಾಧ್ಯವಾದ ಮಾತು. ಅಪ್ಪು ಎಲ್ಲೇ ಇರಲಿ ನಮ್ಮ ಮನಸ್ಸಿನಲ್ಲಿ ಸದಾ ಅಮರ ರಾಗಿರುತ್ತಾರೆ.