ಅಂದು ಶಂಕರ್ ನಾಗ್ ಸಲುವಾಗಿ ಅನಂತನಾಗ್ ಮಾಡಿದ್ದನ್ನೇ, ಇಂದು ಅಪ್ಪು ಸಲುವಾಗಿ ಶಿವಣ್ಣ ಮಾಡಿದ್ದಾರೆ. ಕರುನಾಡಿದ ಎರಡು ರತ್ನಗಳ ನಡುವೆ ಒಂದೇ ಕಥೆ.

ಅಂದು ಶಂಕರ್ ನಾಗ್ ಸಲುವಾಗಿ ಅನಂತನಾಗ್ ಮಾಡಿದ್ದನ್ನೇ, ಇಂದು ಅಪ್ಪು ಸಲುವಾಗಿ ಶಿವಣ್ಣ ಮಾಡಿದ್ದಾರೆ. ಕರುನಾಡಿದ ಎರಡು ರತ್ನಗಳ ನಡುವೆ ಒಂದೇ ಕಥೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ದೇಶವಿದೇಶಗಳಲ್ಲಿ ದಾಖಲೆಯನ್ನು ಹೊಸದಾಗಿ ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಒಂದು ಕಡೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರ ಈ ರೇಂಜ್ ನಲ್ಲಿ ಸೆಲೆಬ್ರೇಶನ್ ಆಗುತ್ತಿದೆ ಎಂಬ ಖುಷಿ ಒಂದು ಕಡೆ ಇದ್ದರೆ, ಇನ್ನೊಂದುಕಡೆ ಪುನೀತ್ ರಾಜಕುಮಾರ್ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಸಾಧ್ಯವಾಗುವುದಿಲ್ಲ ಎಂಬ ದುಃಖ ಕೂಡ ಕಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ನೋಡಿದವರಲ್ಲಿ ಕಣ್ಣೀರು ಹೊಳೆಯಾಗಿ ಹರಿದಿತ್ತು.

ಕನ್ನಡ ಚಿತ್ರರಂಗದ ಸವ್ಯಸಾಚಿಯಾಗಿದ್ದ ಅಪ್ಪು ರವರನ್ನು ಕೊನೆಯ ಬಾರಿಗೆ ನೋಡುತ್ತಿದ್ದೇವೆ ಎಂಬ ದುಃಖ ಅವರ ಕಣ್ಣಂಚಿನಲ್ಲಿ ಕಾಣುತ್ತಿತ್ತು. ಜೇಮ್ಸ್ ಚಿತ್ರ ನೋಡಿದವರಿಗೆಲ್ಲ ಅಲ್ಲಿ ಹಲವಾರು ಸರ್ಪ್ರೈಸ್ ಗಳು ಕೂಡ ಕಾದಿದ್ದವು. ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರ ಸಿನಿಮಾದಲ್ಲಿ ರಾಘಣ್ಣ ಶಿವಣ್ಣ ಸೇರಿದಂತೆ ಮೂವರು ಕೂಡ ಕಾಣಿಸಿಕೊಂಡಿದ್ದರು. ಆದರೆ ಮೂವರ ಜೊತೆಯಾಗಿ ಕಾಣಿಸಿಕೊಂಡಿಲ್ಲ ಎಂಬ ದುಃಖ ಕೂಡ ಅದರಲ್ಲಿ ಇದೆ. ಇನ್ನು 90ರ ದಶಕದಲ್ಲಿ ಶಂಕರ್ ನಾಗ್ ರವರು ಕೂಡ ಆ ಕಾಲವಾಗಿ ಮರಣಹೊಂದಿದಾಗ ಅವರ ಸಹೋದರ ನಾಗಿರುವ ಅನಂತನಾಗ್ ರವರು ತಮ್ಮ ತಮ್ಮನಿಗಾಗಿ ಒಂದು ಕೆಲಸವನ್ನು ಮಾಡಿದ್ದರು.

ಅದೇ ರೀತಿ ಈಗ ಅಪ್ಪು ರವರಿಗಾಗಿ ಕೂಡ ಅವರ ಅಣ್ಣ ಆಗಿರುವ ಶಿವಣ್ಣ ಒಂದು ಕೆಲಸವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗಿದ್ದರೆ ಅದೇನೆಂದು ತಿಳಿಯೋಣ ಬನ್ನಿ. ಹೌದು ಗೆಳೆಯರೇ 90ರ ದಶಕದ ಆರಂಭದಲ್ಲಿ ಶಂಕರ್ ನಾಗ್ ರವರು ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಸಂದರ್ಭದಲ್ಲಿ ಕೂಡ ಅವರ ಕೊನೆಯ ಸಿನಿಮಾಗಾಗಿ ಸ್ವತಃ ಅನಂತನಾಗ್ ರವರೇ ಡಬ್ಬಿಂಗ್ ಮಾಡಿದ್ದರು. ಅದೇ ರೀತಿ ಈಗ ಅಪ್ಪು ರವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರಕ್ಕಾಗಿ ಕೂಡ ಸಂಪೂರ್ಣವಾಗಿ ಶಿವಣ್ಣನವರೇ ಡಬ್ಬಿಂಗ್ ಮಾಡಿದ್ದಾರೆ. ಎರಡು ಕನ್ನಡಚಿತ್ರರಂಗದ ಮಾಣಿಕ್ಯಗಳು ನಮ್ಮನ್ನೆಲ್ಲ ಅತಿ ಚಿಕ್ಕ ವಯಸ್ಸಿನಲ್ಲಿ ಆಗಲಿ ಹೋಗಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಕಣ್ಣೀರು ತರಿಸುವಂತಹ ಸಂಗತಿ.