ದಿ ಕಾಶ್ಮೀರಿ ಫೈಲ್ಸ್ ಚಿತ್ರೀಕರಣದ ಮಾಡುವಾಗ ಎದುರಾದ ಸವಾಲೇನು ಗೊತ್ತೇ?? ಯಾರಿಗೂ ತಿಳಿಯದ ತೆರೆ ಹಿಂದಿನ ಕಥೆ ವಿವರಿಸಿ ನಿರ್ಮಾಪಕಿ.

ದಿ ಕಾಶ್ಮೀರಿ ಫೈಲ್ಸ್ ಚಿತ್ರೀಕರಣದ ಮಾಡುವಾಗ ಎದುರಾದ ಸವಾಲೇನು ಗೊತ್ತೇ?? ಯಾರಿಗೂ ತಿಳಿಯದ ತೆರೆ ಹಿಂದಿನ ಕಥೆ ವಿವರಿಸಿ ನಿರ್ಮಾಪಕಿ.

ನಮಸ್ಕಾರ ಸ್ನೇಹಿತರೇ ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರವನ್ನ ನೀವು ಈಗಾಗಲೇ ನೋಡಿರಬಹುದು. ನಿಮ್ಮಲ್ಲಿ ಹಲವರಿಗೆ ಇಷ್ಟವಾಗಿರಬಹುದು. ಇನ್ನೂ ಕಂಡರಿಯದ ಘಟನೆಯೊಂದರ ಬಗ್ಗೆ ಬೆಳಕು ಚೆಲ್ಲುವ ನಿರ್ದೇಶಕ ಅಗ್ನಿಹೋತ್ರಿ ಅವರ ಪ್ರಯತ್ನವನ್ನು ಮೆಚ್ಚಲೇಬೇಕು. ನಮ್ಮದು ಸ್ವತಂತ್ರ ಭಾರತ. ಸ್ವಾತಂತ್ರ ಪಡೆದುಕೊಳ್ಳುವ ಸಂದರ್ಭದಲ್ಲಿನ ಕಷ್ಟಗಳು ಹೋರಾಟಗಳು ಮಾತ್ರ ಹಲವರಿಗೆ ಗೊತ್ತು.

ಆದರೆ ಈ ಹಿಂದೆ ಕಾಶ್ಮೀರದಲ್ಲಿ ನಡೆದಿರುವಂತಹ ಹಲವಾರು ಘಟನೆಗಳು ಯಾರ ಗಮನಕ್ಕೂ ಬಂದಿಲ್ಲ. ಹಲವು ಅಮಾನವೀಯ ಘಟನೆಗಳ ಬಗ್ಗೆ ತಿಳಿದಿದ್ದವರಲ್ಲಿ ಕಿವಿ ಮುಚ್ಚಿಕೊಂಡಿದ್ದವರೆ ಹೆಚ್ಚು. ‘ದಿ ಕಾಶ್ಮೀರಿ ಫೈಲ್ಸ್’ ಇಂಥದ್ದೊಂದು ಘಟನೆಯ ಅನಾವರಣ ಮಾಡಿದೆ. ಹೌದು ಈ ಚಿತ್ರದಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಕಾಶ್ಮೀರಿ ಪಂಡಿತರ ನೋವು ಸಂಕಷ್ಟಗಳ ಬಗ್ಗೆ ಯಥಾವತ್ತಾದ ಚಿತ್ರೀಕರಣ ಈ ಚಿತ್ರದಲ್ಲಿದೆ.

ಕಾಶ್ಮೀರಿ ಕಣಿವೆಗಳಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮನೆಗಳನ್ನು ಸುಟ್ಟಿರುವುದು ಜೊತೆಗೆ ರಾತ್ರೋರಾತ್ರಿ ನಾಲ್ಕು ಲಕ್ಷಕ್ಕೂ ಅಧಿಕ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಹೊರಹಾಕಿರುವ ದೇಶದ ಅತಿದೊಡ್ಡ ಮತ್ತು ನರಮೇಧ ಎಂದು ಪರಿಗಣಿಸಲಾಗಿದೆ. ಅನುಪಮ್ ಖೇರ್ ಕೂಡ ಈ ಮಾತನ್ನು ಹೇಳಿದ್ದಾರೆ.

ಈ ಚಿತ್ರದಲ್ಲಿ ಅತಿಯಾಗಿ ನಮ್ಮನ್ನು ಕಾಡುವುದು ಪುಷ್ಕರ ಪಂಡಿತ್ ಅವರ ಪಾತ್ರ. ಈ ಪಾತ್ರಕ್ಕೆ ಜೀವ ತುಂಬಿದ ನಟ ಅನುಪಮ್ ಖೇರ್. ಇನ್ನು ಪಲ್ಲವಿ ಜೋಷಿ, ಪ್ರಕಾಶ್ ಬೆಳವಾಡಿ, ದರ್ಶನ್ ಕುಮಾರ್, ಭಾಷಾ ಸುಂಬ್ಲಿ ಮೊದಲಾದ ಕಲಾವಿದರು ಕಾಶ್ಮೀರಿ ಪಂಡಿತರ ಕಥೆಗೆ ಜೀವ ತುಂಬಿದ್ದಾರೆ.

ಇನ್ನು ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು ಬಗ್ಗೆ ಮಾತನಾಡಿದ ಪಲ್ಲವಿ ಜೋಷಿ, ಈ ಚಿತ್ರದ ಚಿತ್ರೀಕರಣಕ್ಕೆ ನಮಗೆ ತಗುಲಿದ ಸಮಯ ಕೇವಲ ಒಂದು ತಿಂಗಳು, ಆದರೆ ಅದರ ಹಿಂದೆ ನಾಲ್ಕು ವರ್ಷಗಳ ಸಂಶೋಧನೆಯ ಪರಿಶ್ರಮವಿದೆ. ಇನ್ನು ಈ ಕಥೆಗಾಗಿ ಹೊಂದಿಸುವುದು, ಕಲಾವಿದರನ್ನು ಒಪ್ಪಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಇದಕ್ಕಿಂತ ದೊಡ್ಡ ಸವಾಲು ಎಂದರೆ ನಮ್ಮ ಕೊನೆಯ ದಿನದ ಚಿತ್ರೀಕರಣದ ದಿನ, ನಾವು ಚಿತ್ರೀಕರಣವನ್ನು ಮಾಡದಂತೆ ಫತ್ವಾ ಹೊರಡಿಸಲಾಗಿತ್ತು.

ಆದರೆ ನಾನು ನಿರ್ದೇಶಕ ಅಗ್ನಿಹೋತ್ರಿ ಅವರ ಬಳಿ ಹೇಗೂ ಕೊನೆಯ ಸೀನ್ ನಲ್ಲಿದ್ದೇವೆ. ಹೇಗಾದರೂ ಮಾಡಿ ಮುಗಿಸಿಬಿಡೋಣ ಎಂದು ಹೇಳಿ, ಆ ದಿನದ ಚಿತ್ರೀಕರಣವನ್ನು ಮುಗಿಸಿದೇವು. ಹೇಗೂ ನಾವು ಅದೇ ದಿನ ಹೊರಡುವವರಿದ್ದರು ಹಾಗೆಯೇ ನಮ್ಮ ತಂಡದವರಿಗೆ ಪ್ಯಾಕಿಂಗ್ ಮಾಡಿಕೊಳ್ಳಲು ಹೇಳಿ ಕೊನೆಯ ಸಿನ್ ಮುಗಿಸಿ ಹೊರಟೆವು. ಇದು ನಾವು ಈ ಚಿತ್ರೀಕರಣದ ಸಂದರ್ಭದಲ್ಲಿ ಎದುರಿಸಿದ ದೊಡ್ಡ ಸವಾಲಾಗಿತ್ತು ಎಂದು ನಿರ್ಮಾಪಕಿ ಪಲ್ಲವಿ ಜೋಷಿ ಸವಿಸ್ತಾರವಾಗಿ ಹೇಳಿದ್ದಾರೆ. ಈ ಚಿತ್ರಕ್ಕಾಗಿ ಚಿತ್ರತಂಡ ಪಟ್ಟ ಶ್ರಮ ಇಂದು ಉತ್ತಮ ಫಲವನ್ನು ನೀಡಿದೆ. ದೇಶದ ಅತ್ಯಂತ ಜನ ಚಿತ್ರವನ್ನು ನೋಡಿ ಕಂಬನಿ ಮಿಡಿದಿದ್ದಾರೆ. ಒಟ್ಟಾರೆಯಾಗಿ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಗೆದ್ದಿದೆ.