ಕನ್ನಡ ಚಿತ್ರರಂಗಕ್ಕೆ ಕನ್ನಡತಿಯರ ಅವಶ್ಯಕತೆ ಇಲ್ಲವೇ?? ಚಿತ್ರರಂಗದಲ್ಲಿ ಕನ್ನಡದವರಿಗೆ ಅವಕಾಶ ಸಿಗುತ್ತಿಲ್ಲವೇ?? ನಟಿಯರು ತಿಳಿಸಿದ ಷಾಕಿಂಗ್ ವಿಷಯಗಳೇನು ಗೊತ್ತೇ??

ಕನ್ನಡ ಚಿತ್ರರಂಗಕ್ಕೆ ಕನ್ನಡತಿಯರ ಅವಶ್ಯಕತೆ ಇಲ್ಲವೇ?? ಚಿತ್ರರಂಗದಲ್ಲಿ ಕನ್ನಡದವರಿಗೆ ಅವಕಾಶ ಸಿಗುತ್ತಿಲ್ಲವೇ?? ನಟಿಯರು ತಿಳಿಸಿದ ಷಾಕಿಂಗ್ ವಿಷಯಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಯಾವ ಪರಭಾಷಾ ಸಿನಿಮಾಗಳಿಗೂ ಕಮ್ಮಿಯಿಲ್ಲದಂತೆ ಬಜೆಟ್ ಗಳಲ್ಲಿ ನಿರ್ಮಾಣವಾಗುತ್ತಿವೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿಯೂ ಕನ್ನಡ ಚಿತ್ರಗಳು ಸಾಕಷ್ಟು ಫೇಮಸ್ ಆಗ್ತಾ ಇವೆ. ಕನ್ನಡಿಗರು ಯಾವುದಕ್ಕೂ ಕಮ್ಮಿಯಿಲ್ಲ ಎನ್ನುವುದನ್ನು ನಿರ್ದೇಶಕರು ತೋರಿಸಿಕೊಡುತ್ತಿದ್ದಾರೆ.

ಆದರೆ ಕನ್ನಡ ಸಿನಿಮಾಗಳಲ್ಲಿ ಪರಭಾಷಾ ನಟಿಯರನ್ನು ಕರೆದುಕೊಂಡು ಬರುವುದು ಮಾತ್ರ ತಪ್ಪಿಲ್ಲ. ಜೊತೆಗೆ ಕನ್ನಡತಿಯರಿಗೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎನ್ನುವುದು ಹಲವು ಕನ್ನಡ ನಟಿಯರ ನೋವು. ಈ ಬಗ್ಗೆ ಕನ್ನಡದ ಅಧಿತಿ ಪ್ರಭುದೇವ್, ದಿಯಾ ಖ್ಯಾತಿಯ ನಟಿ ಖುಷಿ ರವಿ ಹಾಗೂ ಅಮೃತ ಅಯ್ಯಂಗಾರ್ ತಮ್ಮ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ್ ಅಪ್ಪಟ ಕನ್ನಡತಿ ನೋಡುವುದಕ್ಕಷ್ಟೇ ಸುಂದರವಾಗಿರುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದವರು. ಕೆಲವು ಸಿನಿಮಾಗಳಲ್ಲಿ ನಟಿಸಿದರು ಅಷ್ಟಾಗಿ ಉತ್ತಮ ಸಿನಿಮಾಗಳು ಅವರ ಕೈ ಸೇರುತ್ತಿಲ್ಲವಂತೆ. ಅಲ್ಲದೆ ಕನ್ನಡ ಮಾತಾಡುವುದೇ ತಪ್ಪಾ ಅಂತ ಪ್ರಶ್ನೆಯನ್ನು ಕೇಳುವ ಅದಿತಿ ಕನ್ನಡಿಗರಿಗೆ ಸಂಬಳ ಕೂಡ ತುಂಬಾ ಕಡಿಮೆ ಎಂಬುದನ್ನು ಹೇಳಿದ್ದಾರೆ. ಆದರೆ ಅದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡಿಗರ ಬಗ್ಗೆ ಬಹಳ ಕೃತಜ್ಞತೆಯ ಮಾತುಗಳನ್ನಾಡುತ್ತಾರೆ.

ಇನ್ನು ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹೇಳುವಂತೆ ಮದುವೆಯಾಗಿದೆ ಅಥವಾ ರಿಲೇಶನ್ ಶಿಪ್ ನಲ್ಲಿ ನಿಮಗೆ ತೊಂದರೆ ಆಗಲ್ವಾ ಅನ್ನೋ ಪ್ರಶ್ನೆ ಕೇಳುತ್ತಾರೆ. ಇದರಿಂದ ಅವಕಾಶಗಳು ಕಡಿಮೆಯಾಗುತ್ತವೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮೂಲತಹ ರಂಗಭೂಮಿ ಕಲಾವಿದೆಯಾಗಿರುವ ಖುಷಿ ನೋಡಲು ಅಂದವಾಗಿದ್ದಾರೆ. ಆದರೆ ಈ ಚಂದದ ಹುಡುಗಿಗೆ ಚಂದನವನದಲ್ಲಿ ಹೆಚ್ಚಿನ ಆಫರ್ ಗಳು ಬರದೇ ಇರುವುದು ದುರದೃಷ್ಟಕರ.

ಹಾಗೆಯೇ ನಟಿ ಅಮೃತ ಅಯ್ಯಂಗಾರ್ ಇಲ್ಲಿವರೆಗೆ ಮಾಡಿರುವ ಎಲ್ಲಾ ಸಿನಿಮಾಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೂ ಅವರಿಗೆ ಸರಿಯಾದ ಕಥೆಯೊಂದು ಅವರನ್ನು ಹುಡುಕಿಕೊಂಡು ಬರುತ್ತಿಲ್ಲ ಎಂಬ ಅಳಲಿದೆ. ಏನೇ ಆದರೂ ಪರಭಾಷಾ ನಟಿಮಣಿಯರಿಗೆ ಸ್ಯಾಂಡಲ್ವುಡ್ ಮಣೆ ಹಾಕುವಷ್ಟು ಕನ್ನಡದ ನಟಿಯರಿಗೆ ಅವಕಾಶ ನೀಡುತ್ತಿಲ್ಲ ಎನ್ನುವ ವಾಸ್ತವ ಅಂದಿನಿಂದ ಇಂದಿನವರೆಗೂ ಸತ್ಯವಾಗಿಯೆ ಉಳಿದಿದೆ. ಇನ್ನಾದರೂ ಈ ತಾರತಮ್ಯ ಸರಿಹೋಗುತ್ತಾ ಎನ್ನುವುದು ಕನ್ನಡ ಸಿನಿಮಾ ನಿರ್ಮಿಸುವವರಿಗೆ ಬಿಟ್ಟದ್ದು!