ಬಿಗ್ ನ್ಯೂಸ್: ಐಪಿಎಲ್ ಪಂದ್ಯಗಳಿಗೆ ಹೊಸ ಎರಡು ನಿಯಮಗಳನ್ನು ಘೋಷಿಸಿದ ಬಿಸಿಸಿಐ, ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚು. ಏನೆಲ್ಲಾ ಬದಲಾವಣೆ ಗೊತ್ತೇ??
ಬಿಗ್ ನ್ಯೂಸ್: ಐಪಿಎಲ್ ಪಂದ್ಯಗಳಿಗೆ ಹೊಸ ಎರಡು ನಿಯಮಗಳನ್ನು ಘೋಷಿಸಿದ ಬಿಸಿಸಿಐ, ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚು. ಏನೆಲ್ಲಾ ಬದಲಾವಣೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಭಾರಿಯ ಐಪಿಎಲ್ ಹಲವಾರು ವಿಶೇಷತೆಗಳಿಂದ ಕೂಡಿರುವ ವಿಷಯ ನಿಮಗೆ ತಿಳಿದಿದೆ. ಈಗಾಗಲೇ ಎರಡು ಹೊಸ ಫ್ರಾಂಚೈಸಿಗಳು ಆಡಲು ಸಿದ್ದವಿದ್ದು, ತಂಡಗಳು ಭರ್ಜರಿ ತಾಲೀಮಿನಲ್ಲಿ ತೊಡಗಿವೆ. ಇದರ ಜೊತೆ ಇಷ್ಟು ವರ್ಷಗಳ ರೌಂಡ್ ರಾಬಿನ್ ಲೀಗ್ ಪದ್ದತಿ ಪ್ರಕಾರ ನಡೆಯುತ್ತಿದ್ದ ಐಪಿಎಲ್ ಈ ಭಾರಿ ಎರಡು ಗುಂಪುಗಳಾಗಿ ವಿಂಗಡಿಸಿ ಆಡಿಸಲಾಗುತ್ತಿದೆ. ಪಂದ್ಯಾವಳಿ ಆರಂಭವಾಗಲು ಹತ್ತು ದಿನ ಬಾಕಿ ಇರುವ ಈ ಸಂದರ್ಭದಲ್ಲಿ ಬಿಸಿಸಿಐ ಐಪಿಎಲ್ ಗಾಗಿ ಎರಡು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬನ್ನಿ ಆ ನಿಯಮಗಳು ಯಾವುವು ಎಂದು ತಿಳಿಯೋಣ.
ಮೊದಲನೆಯದಾಗಿ ಪ್ರತಿ ಇನ್ನಿಂಗ್ಸ್ ಗೆ ಎರಡು ರೆಫರಲ್ ಗಳು : ಪ್ರತಿ ತಂಡಕ್ಕೆ ಇಷ್ಟು ದಿನ ಪ್ರತಿ ಇನ್ನಿಂಗ್ಸ್ ನಲ್ಲಿ ಒಂದು ರೆಫರಲ್ ಇರುತ್ತಿತ್ತು. ಆದರೇ ಪ್ರಸಕ್ತ ಐಪಿಎಲ್ ನಿಂದ ಪ್ರತಿ ಪಂದ್ಯದಲ್ಲೂ, ಪ್ರತಿ ತಂಡಕ್ಕೆ ಪ್ರತಿ ಇನ್ನಿಂಗ್ಸ್ ಗೆ ಎರೆಡೆರೆಡು ರೆಫರಲ್ ಗಳು ದೊರೆಯಲಿವೆ. ಅಂಪೈರ್ ತೀರ್ಪಿಗೆ ಇನ್ನು ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶ ಆಟಗಾರರಿಗೆ ಹೆಚ್ಚಲಿದೆ.
ಎರಡನೇದಾಗಿ ಸ್ಟ್ರೈಕ್ ಬದಲಾವಣೆ – ಈ ಹಿಂದೆ ಸ್ಟ್ರೈಕ್ ನಲ್ಲಿರುವ ಆಟಗಾರ ದೊಡ್ಡ ಹೊಡೆತಕ್ಕೆ ಕೈ ಹಾಕಿ ಅದು ಕ್ಯಾಚ್ ಆಗಿ ಬದಲಾವಣೆ ಆಗಿ, ಔಟಾದ ಸಂದರ್ಭದಲ್ಲಿ, ನಾನ್ ಸ್ಟ್ರೈಕ್ ಆಟಗಾರ ರನ್ ಕ್ರಾಸ್ ಮಾಡಿದ್ದರೇ, ಆ ಆಟಗಾರನೇ ಮುಂದಿನ ಬಾಲ್ ಅನ್ನು ಎದುರಿಸಬೇಕಾಗಿತ್ತು. ಆದರೇ ಈಗ ಬದಲಾದ ನಿಯಮದ ಪ್ರಕಾರ ನಾನ್ ಸ್ಟ್ರೈಕ್ ಆಟಗಾರ ರನ್ ಕ್ರಾಸ್ ಮಾಡಿದರೂ, ಹೊಸದಾಗಿ ಬಂದ ಬ್ಯಾಟ್ಸ್ಮನ್ ಸ್ಟ್ರೈಕ್ ತೆಗೆದುಕೊಳ್ಳಬೇಕು ಎಂಬ ನಿಯಮ ಜಾರಿಗೆ ತಂದಿದೆ. ಈ ನಿಯಮ ಕ್ರಿಕೇಟ್ ನ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಇನ್ನು ಯಾವುದಾದರೂ ತಂಡ ಕೋವಿಡ್ ಗೆ ತುತ್ತಾಗಿ ಪಂದ್ಯ ರದ್ದಾದ ರೇ ಏನು ಮಾಡಬೇಕೆಂಬುದನ್ನು ತಾಂತ್ರಿಕ ಸಮಿತಿಗೆ ನೀಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.