ಹಬ್ಬಕ್ಕೆ ಬರಲಾಗಲಿಲ್ಲ ಎಂದು ಸ್ವಂತ ಉದ್ಯಮ ಪ್ರಾರಂಭಿಸಿ ಇಂದು ಪ್ರತಿದಿನ ಹಬ್ಬ ಆಚರಿಸುತ್ತ ಉತ್ತಮ ಜೀವನ ಸಾಗಿಸುತ್ತಿದ್ದಾರೆ ಇವರು. ಇವರ ಬಿಸಿನೆಸ್ ಪ್ಲಾನ್ ಏನು ಗೊತ್ತೇ??
ಹಬ್ಬಕ್ಕೆ ಬರಲಾಗಲಿಲ್ಲ ಎಂದು ಸ್ವಂತ ಉದ್ಯಮ ಪ್ರಾರಂಭಿಸಿ ಇಂದು ಪ್ರತಿದಿನ ಹಬ್ಬ ಆಚರಿಸುತ್ತ ಉತ್ತಮ ಜೀವನ ಸಾಗಿಸುತ್ತಿದ್ದಾರೆ ಇವರು. ಇವರ ಬಿಸಿನೆಸ್ ಪ್ಲಾನ್ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಿಮ್ಮಲ್ಲಿ ಛಲ ಇದ್ರೆ, ಏನನ್ನಾದರೂ ಮಾಡಿಯೇ ತೀರುತ್ತೇನೆ ಎನ್ನುವ ಹಠ ಇದ್ರೆ, ಯಾವುದೇ ಸಾಧನೆಗಳನ್ನು ಮಾಡುವುದು ಸುಲಭ. ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ. ಹೀಗೊಬ್ಬ ಛಲಗಾರ ತನಗಾದ ಸಮಸ್ಯೆ ಬೇರೆಯವರಿಗೆ ಆಗಬಾರದು ಎಂದು ಒಂದು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುತ್ತಾನೆ. ಯಾರು ಆ ವ್ಯಕ್ತಿ? ನಿರ್ಧಾರವೇನು? ಮುಂದೆ ಓದಿ.
ಆತನ ಹೆಸರು ಫಣೀಂದ್ರ ಸಮ. ತಾನು ಉದ್ಯೋಗಕ್ಕಾಗಿ ಬೇರೆ ಊರಿನಲ್ಲಿ ವಾಸವಾಗಿರುತ್ತಾನೆ. ಆದ್ರೆ ಹಬ್ಬದ ಸಮಯದಲ್ಲಿ ಊರಿಗೆ ಬರಬೇಕು ಅಂದ್ರೆ ಆತನಿಗೆ ಬರೋದಕ್ಕೆ ಬಸ್ ಸಿಗೋದೇ ಇಲ್ಲ. ಆಗ ಹಬ್ಬಕ್ಕೆ ಊರಿಗೆ ಹೋಗೋಕ್ಕಾಗದೇ ಬೇಸರಗೊಳ್ಳುತ್ತಾನೆ. ಆಗ ಆತನಿಗೊಂದು ಐಡಿಯಾ ಬರತ್ತೆ. ಈ ಬಾರಿ ನನ್ನಂತೆ ಊರಿಗೆ ಬಸ್ ಸಿಗದೇ ಹೋಗದೇ ಇರುವವರು ಸಾಕಷ್ಟು ಜನರಿದ್ದಾರೆ. ಇನ್ನುಮುಂದೆ ಹೀಗಾಗಬಾರದು ಎಂದು ಮುಂಗಡ ಟಿಕೇಟಿ ಕಾಯ್ದಿರಿಸುವ ಇನ್ಸ್ಟೆಂಟ್ಟ್ ಟಿಕೇಟ್ ಬುಕ್ಕಿಂಗ್ ಮಾರ್ಗವನ್ನು ಕಂಡುಹಿಡಿಯುತ್ತಾನೆ. ಹೀಗೆ ಹುಟ್ಟಿದ್ದೇ ರೆಡ್ ಬಸ್ ಆ್ಯಪ್.
ಹೌದು, ಫಣೀಂದ್ರ ನ ಆ ಒಂದು ಯೋಚನೆ ಇಂದು ಅವನ್ನನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ. ರೆಡ್ ಬಸ್ ಆ್ಯಪ್ ಇಂದು ತುಂಬಾನೇ ಫೇಮಸ್ ಆಗಿದೆ. ಇಂದು ರೆಡ್ ಬಸ್ ನಲ್ಲಿ ದಿನಕ್ಕೆ ಕನಿಷ್ಠ 5000 ಟಿಕೆಟ್ ಬುಕ್ ಆಗತ್ತೆ. 2005ರಲ್ಲೀ ಆರಂಭವಾಗಿದ್ದು ರೆಡ್ ಬಸ್ ಇದೀಗ ಸಾಕಷ್ಟು ಬೆಳವಣಿಗೆಯನ್ನು ಕಂಡು, ಇದು ಮಾರುಕಟ್ಟೆಯಲ್ಲಿ 6,54,16,42,500 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಇದೀಗ ಈ ಕಂಪನಿಯನ್ನು ಐಬಿಬೋ ಗ್ರೂಪ್ ಖರೀದಿಸಿದೆ. ರೆಡ್ ಬಸ್ ಹುಟ್ಟುಹಾಕಿದ ಫಣಿಂದ್ರ ಸಮ ಅವರು ತೆಲಂಗಾಣ ಸರ್ಕಾರದ ರಾಯಭಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಇಂದು ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.