ನಿಮ್ಮ ಊರಿನಲ್ಲೇ ಇದ್ದು ಹಣ ಮಾಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕಾ ಘಟಕ ಹೇಗೆ ಸ್ಥಾಪಿಸಬೇಕು, ಹೇಗೆ ಹಣ ಗಳಿಸಬೇಕು ಗೊತ್ತೇ??

ನಿಮ್ಮ ಊರಿನಲ್ಲೇ ಇದ್ದು ಹಣ ಮಾಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕಾ ಘಟಕ ಹೇಗೆ ಸ್ಥಾಪಿಸಬೇಕು, ಹೇಗೆ ಹಣ ಗಳಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಶುಂಠಿ ಬೆಳುಳ್ಳಿ ಪೇಸ್ಟ್ ನ್ನು ಎಲ್ಲಾ ಮಸಾಲ ಆಹಾರ ತಯಾರಿಕೆಗಳಲ್ಲಿ ಬಳಸುತ್ತಾರೆ. ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಪ್ರತ್ಯೇಕವಾಗಿ ಜಜ್ಜಿ ಅಡುಗೆಗಳಿಗೆ ಬಳಸುವುದಕ್ಕಿಂತ ರೆಡಿಯಾಗಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಬಳಸುವುದು ಸುಲಭ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ಗಳ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗಳು ಪ್ಯಾಕೆಟ್ ಗಳಲ್ಲಿ ಲಭಿಸುತ್ತದೆ. ಇದಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾಮಾನ್ಯವಾಗಿ ಈ ಉದ್ಯಮ ಚೆನ್ನಾಗಿಯೇ ನಡೆಯುತ್ತದೆ ಎನ್ನಬಹುದು. ಹಾಗಾದರೆ ಉತ್ತಮ ಆದಾಯವನ್ನು ನೀಡುವ ಈ ಉದ್ಯಮವವನ್ನು ನೀವು ಯಾಕೆ ಒಮ್ಮೆ ಟ್ರೈ ಮಾಡಬಾರದು?

ಇನ್ನು ಶುಂಠಿ ಬೆಳ್ಳುಳ್ಳಿ ತಯಾರಿಕಾ ಘಟಕವನ್ನು ಸ್ಥಾಪಿಸುವುದಕ್ಕೆ ನೀವು ಎಲ್ಲೆಲ್ಲೋ ಹೋಗಬೇಕಾಗಿಲ್ಲ, ನಮ್ಮ ಊರಿನಲ್ಲಿಯೇ ಸಣ್ನದಾಗಿ ಈ ಘಟಕವನ್ನು ಸ್ಥಾಪಿಸಬಹುದು. ಸುಮಾರು 10 ಲಕ್ಷ ಕುಟುಂಬಗಳು ಇಂತಹ ರೀತಿಯ ಮನೆ ಆಧಾರಿತ ಆಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ಈಗಾಗಲೇ ತೊಡಗಿಕೊಂಡಿದ್ದು ನೀವು ಇದನ್ನ ಸಣ್ಣ ಉದ್ಯಮವಾಗಿ ಆರಂಭಿಸಬಹುದು. ಶುಂಠಿ ಬೆಳ್ಳುಳ್ಳಿ ಪೇಸ್ಟ್ ರೀತಿಯಲ್ಲಿ, ಪುಡಿಯ ರೀತಿಯಲ್ಲಿ ತಯಾರಿಸಬಹುದು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಾಗಾಣಿಕೆಯೂ ಸುಲಭವಾದ್ದರಿಂದ ತೆರೆದ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟಮಾಡಬಹುದು.

ಇನ್ನು ಈ ಉದ್ಯಮ ಆರಂಭಿಸಲು ನಿಮಗೆ ಬೇಕಾಗಿರುಅವ ವಸ್ತುಗಳೆಂದರೆ ವಾಟರ್ ಜೆಟ್ ವಾಷರ್, ಪೇಸ್ಟ್ ಮಾಡಲು ಕುಟ್ಟುವ ಅಥವಾ ಜಜ್ಜುವ ಕಲ್ಲು, ಟ್ಯಾಂಕ್ಸ್, ತೂಕಮಾಡುವ ಯಂತ್ರ, ಒತ್ತಡದ ನೀರಿನ ಪಂಪ್, ಸ್ಟೇನ್ಲೆಸ್ ಸ್ಟೀಲ್ ಮಿಶ್ರಣ ಬೌಲ್, ಸಿಪ್ಪೆಸುಲಿಯುವ ಯಂತ್ರ, ಪ್ಯಾಕೇಜಿಂಗ್ ಯಂತ್ರ, ಸಂಗ್ರಹಣೆ ಮತ್ತು ಮಾರಾಟಕ್ಕಾಗಿ ಕಂಟೈನರ್ಗಳು, ಪಲ್ಪಿಂಗ್ ಯಂತ್ರ, ಪೇಸ್ಟ್ ತಯಾರಿಕೆಗಾಗಿ ಬಾಟಲಿಗಳು, ಜಾಡಿಗಳು ಇತ್ಯಾದಿ ಪ್ಯಾಕೇಜಿಂಗ್ ವಸ್ತುಗಳು, ಚೀಲವನ್ನು ಸೀಲಿಂಗ್ ಮಾಡುವ ಯಂತ್ರ. ಇವಿಷ್ಟು ಆರಂಭಿಕ ಸಾಧನಗಳಾಗಿವೆ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂಸ್ಕರಣೆಗಾಗಿ ಮಿಕ್ಸರ್ ಗ್ರೈಂಡರ್ / ಜ್ಯೂಸರ್ ಯಂತ್ರ, ಸ್ಲೈಸ್ ಯಂತ್ರ, ಜಾರ್ ಅಥವಾ ಬಾಕ್ಸ್ ಮತ್ತು ಚಾಕು ಮುಂತಾದ ಪ್ಯಾಕಿಂಗ್ ವಸ್ತುಗಳು ಬೇಕಾಗುತ್ತವೆ.

ಹಾಗೆಯೇ ಈ ಘಟಕ ಸ್ಥಾಪನೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಘಟಕ ಸ್ಥಾಪನೆಗೆ ಪ್ರತಿ ಯೂನಿಟ್‌ಗೆ ಅಂದಾಜು ರೂ 3 ಲಕ್ಷದಿಂದ ರೂ 4 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಉಪಕರಣಗಳು, ಯಂತ್ರೋಪಕರಣಗಳು, ಪ್ಯಾಕೇಜಿಂಗ್ ವಸ್ತು ಮತ್ತು ಪದಾರ್ಥಗಳ ವೆಚ್ಚವನ್ನು ಇವಿಷ್ಟು ಹೂಡಿಕೆಯಲ್ಲಿ ಭರಿಸಬಹುದು. ನೀವು ತಯಾರಿಸಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಮಾರುಕಟ್ಟೆಯ ಖರೀದಿದಾರರು,

ಚಿಲ್ಲರೆ ವ್ಯಾಪಾರಿಗಳು, ಏಜೆಂಟ್‌ಗಳು ಅಥವಾ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು. ಜೊತೆಗೆ ಸ್ಥಳೀಯ ಅಂಗದಿಗಳು ಹಾಗೂ ಸ್ವಂತವಾಗಿಯೂ ವಯಕ್ತಿಕ ಮಾರಾಟ ಮಾಡಬಹುದು. ಆದರೆ ಮಾರುಕಟ್ಟೆಗೆ ಪ್ರವೇಶಿಸಲು ಸಣ್ಣ ಮಟ್ಟದ ಪ್ರಚಾರದ ಅಗತ್ಯವಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬಹುದು. ಇನ್ನು 3-4 ಲಕ್ಷ ಬಂಡವಾಳ ಹಾಕುವುದು ಹೇಗೆ ಎಂಬ ಯೋಚನೆ ನಿಮ್ಮದಾಗಿದದ್ರೆ ಇದಕ್ಕೂ ಪರಿಹಾರವಿದೆ. ಸರ್ಕಾರದ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದು. ಮುದ್ರಾ ಯೋಜನೆಯ ಸಾಲಕ್ಕಾಗಿ ಈ https://www.mudra.org.in/ ವೆಬ್ ಸೈಟ್ ಗೆ ಭೇಟಿ ನೀಡಿ.