ಕೊನೆಗೂ ಮುಗಿಯಲಿದೆ ಶನಿಕಾಟ, ಈ 3 ರಾಶಿಯವರಿಗೆ ತಪ್ಪಲಿದೆ ಶನಿ ಕಾಟ, ಶುರುವಾಗಲಿಗೆ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ಕೊನೆಗೂ ಮುಗಿಯಲಿದೆ ಶನಿಕಾಟ, ಈ ನಾಲ್ಕು ರಾಶಿಯವರಿಗೆ ತಪ್ಪಲಿದೆ ಶನಿ ಕಾಟ, ಶುರುವಾಗಲಿಗೆ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಶನಿಯ ವಕ್ರದೃಷ್ಟಿ ನಮ್ಮ ಮೇಲೆ ಬಿದ್ದರೆ ಅದನ್ನ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಶನಿಯ ದೃಶ್ಟಿ ಬಿದ್ರೆ ಸಾಕಷ್ತು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಆದರೆ ಸಾಕಷ್ಟು ಸಮಯದಲ್ಲಿ ಶನಿ ನಮ್ಮನ್ನು ಕಾಯುತ್ತಾನೆ ಎನ್ನುವುದನ್ನೂ ಇಲ್ಲಿ ನೆನಪಿಡಬೇಕು. ಆದರೆ ಇನ್ನೊಂದು ತಿಂಗಳಿನಲ್ಲಿ ಶನಿಯಿಂದ ಈ ಮೂರು ರಾಶಿಯವರು ಮೋಕ್ಷ ಪಡೆಯಲಿದ್ದಾರೆ. ಅಂದರೆ ಶನಿಯ ಸ್ಥಾನ ಬದಲಾವಣೆಯಿಂದಾಗಿ ಈ ಮೂರು ರಾಶಿಯವರ ಸಮಸ್ಯೆಗಳು ಬಗೆಹರಿಯಲಿವೆ. ಬನ್ನಿಈ ರಾಶೀಯವರ ಅದೃಷ್ಟದ ಬಗ್ಗೆ ತಿಳಿದುಕೊಳ್ಳೋಣ.

ಮಿಥುನ ರಾಶಿ: ಏಪ್ರಿಲ್ 29, 2022 ರಂದು ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಹಾಗಾಗಿ ಈ ರಾಶಿಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಮಿಥುನ ರಾಶಿಯವರಿಗೆ ಶನಿಯ ಬಾಧೆಯಿಂದ ಮುಕ್ತಿ ಸಿಗಲಿದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಹಲವು ಕಷ್ಟಗಳಿಂದ ದೂರವಾಗಬಹುದು. ಆರ್ಥಿಕ ಏಳ್ಗೆಯಾಗುತ್ತದೆ. ಉದ್ಯೋಗದಲ್ಲಿ ಬಡ್ತಿ, ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಿದೆ. ಏಪ್ರಿಲ್ 29ರಿಂದ ಮಂಗಳಕರ ದಿನ ಶುರುವಾಗಲಿದೆ ಮಿಥುನ ರಾಶಿಯವರಿಗೆ.

ತುಲಾ: ರಾಶಿಚಕ್ರದ ಪ್ರಕಾರ ತುಲಾ ಏಳನೇ ರಾಶಿ. ತುಲಾ ರಾಶಿಯಲ್ಲೂಯೂ ಕೂಡ ಈಗ ಶನಿನಡೆಯನ್ನು ಕಾಣಬಹುದು. ಏಪ್ರಿಲ್ 29 ರ ನಂತರ ಇದು ಕೊನೆಗೊಳ್ಳಲಿದೆ. ಇದುವರೆಗಿದ್ದ, ಅಡೆತಡೆಗಳು ಮತ್ತು ಸವಾಲುಗಳು ಕೊನೆಗೊಂಡು, ಮುನ್ನಡೆ ಸಾಧಿಸುತ್ತಾರೆ ಈ ರಾಶಿಯವರು. ಶನಿಯ ಈ ಬದಲಾವಣೆಯು ಹಣದ ವಿಷಯದಲ್ಲಿ ವಿಶೇಷ ಲಾಭ ಸಿಗಲಿದೆ. ಎಲ್ಲ ರೀತಿಯ ವಿವಾದಗಳು ಕೊನೆಯಾಗಿ ಜೀವನದಲ್ಲಿ ಸುಖ-ಶಾಂತಿ,ನೆಮ್ಮದಿ ದೊರೆಯುತ್ತದೆ.

ಧನು ರಾಶಿ : ಧನು ರಾಶಿಯಲ್ಲಿಯೂ ಕೂಡ ಏಪ್ರಿಲ್ 29, 2022 ರಂದು ಶನಿಯು ರಾಶಿ ಬದಲಾವಣೆ ಉತ್ತಮ ಜೀವನಕ್ಕೆ ನಾಂದಿಯಾಗಲಿದೆ. ಮಾಡಿದ ಕೆಲಸಗಳಲ್ಲಿ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಧನಲಾಭ, ಗೌರವವೂ ಎರಡೂ ಹೆಚ್ಚಾಗಲಿದೆ. ಅರ್ಧದಲ್ಲೇ ನಿಂತ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ, ಹೊಸ ಜನರ ಭೇಟಿ, ಉದ್ಯೋಗದಲ್ಲಿ ಯಶಸ್ಸು ಧನುರಾಶಿಯವರನ್ನು ಅರಸಿಬರುತ್ತದೆ. ಇದರಲ್ಲಿ ನಿಮ್ಮ ರಾಶಿ ಯಾವುದು ನಮಗೆ ಕಮೆಂಟ್ ಮಾಡಿ ತಿಳಿಸಿ.