ಸದನದಲ್ಲಿ ಮತ್ತೊಮ್ಮೆ ಗುಡುಗಿದ ರಾಜಾಹುಲಿ, ಅಂದು ಮಾಡಿದ ರೀತಿ ಮತ್ತೊಮ್ಮೆ ಸಿದ್ದುಗೆ ಬೆವರಿಳಿಸುತ್ತಾ ಹೇಳಿದ್ದೇನು ಗೊತ್ತೇ??

ಸದನದಲ್ಲಿ ಮತ್ತೊಮ್ಮೆ ಗುಡುಗಿದ ರಾಜಾಹುಲಿ, ಅಂದು ಮಾಡಿದ ರೀತಿ ಮತ್ತೊಮ್ಮೆ ಸಿದ್ದುಗೆ ಬೆವರಿಳಿಸುತ್ತಾ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಗಳಲ್ಲಿ ಹಲವಾರು ಬೆಳವಣಿಗೆಗಳು ಸಂಭವಿಸಿದ್ದು ರಾಜಕಾರಣದಲ್ಲಿ ಯಾವ ಪಕ್ಷದ ನಿಲುವು ಹೇಗಿದೆ ಜನರಲ್ಲಿ ಯಾವ ಪಕ್ಷದ ಕುರಿತಂತೆ ಒಲವಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ನಡೆದಿರುವಂತಹ ಪಂಚ ರಾಜ್ಯದ ಫಲಿತಾಂಶಗಳು ಕೂಡ ಬಿಜೆಪಿ ಪಕ್ಷದ ಪರವಾಗಿ ಬಂದಿರುವುದು ಮುಂದಿನ ದಿನಗಳಲ್ಲಿ ಕೂಡ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣಿಗಳಲ್ಲಿ ಬಲಾಢ್ಯವಾಗಿ ಕಾಣಿಸಿಕೊಳ್ಳಲಿದೆ ಎಂಬುದಾಗಿ ಮುನ್ಸೂಚನೆಯಾಗಿ ಭವಿಷ್ಯ ನುಡಿದಂತಿದೆ.

ಇನ್ನು ಇತ್ತೀಚಿಗಷ್ಟೇ ರಾಜ್ಯ ಸದನದಲ್ಲಿ ಕೂಡ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಬಜೆಟ್ ಮಂಡನೆ ಯನ್ನು ಮಾಡಿತ್ತು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿ ಇರುವಂತಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಪ್ರಶ್ನೆಗಳನ್ನು ಕೇಳಿ ಟೀಕಾಪ್ರಹಾರವನ್ನು ಕೂಡ ಮಾಡಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಪಕ್ಷದ ವರಿಷ್ಠ ರಾಗಿರುವ ಬಿಎಸ್ ಯಡಿಯೂರಪ್ಪ ರವರು ಸಿದ್ದರಾಮಯ್ಯನವರ ವಿರುದ್ಧ ವಾಕ್ ಪ್ರ’ಹಾರ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯನವರ ವಿರುದ್ಧ ಸವಾಲನ್ನು ಕೂಡ ಯಡಿಯೂರಪ್ಪನವರು ಎಸೆದಿದ್ದಾರೆ.

ಯಡಿಯೂರಪ್ಪನವರು ಈ ಬಾರಿಯ ಪಂಚರಾಜ್ಯ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ದೇಶದ ಜನತೆ ಮೋದಿಯವರ ಜೊತೆಗೆ ಇದ್ದಾರೆ ಎನ್ನುವುದು ಸಾಬೀತಾಗಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ಕೂಡ ನಾವು ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ. ಈಗಾಗಲೇ ನಾನು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಿರ್ವಹಿಸಿದ್ದೇನೆ ಇನ್ನು ಮುಂದಿನ ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಇಲ್ಲ. ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ 135 ಅಧಿಕಾರಿಗಳನ್ನು ಗೆಲ್ಲಲಿದ್ದೇವೆ ಎಂಬುದಾಗಿ ಸಿದ್ದರಾಮಯ್ಯರವರಿಗೆ ಸವಾಲೆಸೆದಿದ್ದಾರೆ. ಮುಂದಿನ ಬಾರಿಯೂ ಕೂಡ ನೀವು ವಿರೋಧ ಪಕ್ಷ ಸ್ಥಾನ ದಲ್ಲಿ ಕೂರಬೇಕು ಎಂಬುದಾಗಿ ಹೇಳಿದ್ದಾರೆ. ಪಕ್ಷದ ಎಲ್ಲಾ ನಾಯಕರ ಜೊತೆಗೆ ರಾಜ್ಯದ ಉದ್ದಗಲಕ್ಕೂ ಕೂಡ ಪ್ರವಾಸಮಾಡಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದಾಗಿ ಕೂಡ ಯಡಿಯೂರಪ್ಪ ರವರು ಈ ಸಂದರ್ಭದಲ್ಲಿ ಹೇಳಿದ್ದಾರೆ.