ದೇಶದ ರಾಜಕಾರಣದಲ್ಲಿ ಮತ್ತೊಂದು ಟ್ವಿಸ್ಟ್, ಹೊಸ ನಡೆ ಇಡಲು ಮುಂದಾದ ಕೇಜ್ರಿವಾಲ್, ಇದು ಅಸಾಧ್ಯನಾ ಅಥವಾ ಸಾಧ್ಯನಾ??

ದೇಶದ ರಾಜಕಾರಣದಲ್ಲಿ ಮತ್ತೊಂದು ಟ್ವಿಸ್ಟ್, ಹೊಸ ನಡೆ ಇಡಲು ಮುಂದಾದ ಕೇಜ್ರಿವಾಲ್, ಇದು ಅಸಾಧ್ಯನಾ ಅಥವಾ ಸಾಧ್ಯನಾ??

ನಮಸ್ಕಾರ ಸ್ನೇಹಿತರೇ ಆಮ್ ಆದ್ಮಿ ಪಕ್ಷ ಸದ್ಯ ದೇಶದ ಜನತೆಯ ಗಮನವನ್ನು ಸೆಳೆಯುತ್ತಿರುವ ಪಕ್ಷ. ದೆಹಲಿ ಮಾಡೆಲ್ ನಿಂದ ಶುರುವಾದ ಆ ಪಕ್ಷದ ಜೈತ್ರಯಾತ್ರೆ ಈಗ ಪಂಜಾಬ್ ನಲ್ಲಿಯೂ ಸಹ ಯಶಸ್ವಿಯಾಗಿದೆ. ಪಂಜಾಬ್ ನಲ್ಲಿ ಭರ್ಜರಿ ಬಹುಮತ ಪಡೆದಿರುವ ಆಮ್ ಆದ್ಮಿ ಪಕ್ಷ ಈಗ ದೇಶದ ಇತರ ರಾಜ್ಯಗಳತ್ತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ದಾಪುಗಾಲು ಇಟ್ಟಿದೆ.

ಹೌದು ಈ ಬಗ್ಗೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅಕ್ಷಯ್ ಮರಾಠೆ ಪಕ್ಷದ ಮುಂದಿನ ಟಾರ್ಗೆಟ್ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳನ್ನು ಆಮ್ ಆದ್ಮಿ ಪಕ್ಷ ತನ್ನ ಟಾರ್ಗೆಟ್ ಮಾಡಿಕೊಂಡಿದೆ. ಅದರಲ್ಲೂ ಗುಜರಾತ್ ವಿಧಾನಸಭೆಯಲ್ಲಿ ನಾವು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪ್ರಬಲವಾದ ಪೈಪೋಟಿ ನೀಡುತ್ತೇವೆ.

ಆದರೇ ಇಷ್ಟೇ ಸೀಟುಗಳಿಸುತ್ತೆವೆಂದು ಹೇಳುವುದಿಲ್ಲ ಎಂದು ಹೇಳಿದರು‌. ಆದರೇ ಈ ವರ್ಷ ಅಂತ್ಯದಲ್ಲಿ ನಡೆಯಲಿರುವ ಮತ್ತೊಂದು ರಾಜ್ಯ ಹಿಮಾಚಲ ಪ್ರದೇಶವನ್ನೂ ಸಹ ಆಮ್ ಆದ್ಮಿ ಪಕ್ಷ ತನ್ನ ಟಾರ್ಗೆಟ್ ಮಾಡಿಕೊಂಡಿದೆ. ಇಲ್ಲಿ ನಾವು ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಖಂಡಿತ ಅಧಿಕಾರಕ್ಕೇರಲಿದ್ದೇವೆ ಎಂದು ಹೇಳಿದರು. ದೇಶದಲ್ಲಿ ಜನತೆ ಹೊಸ ಬದಲಾವಣೆ ಬಯಸುತ್ತಿದ್ದು, ಜನರ ನೀರಿಕ್ಷೆಗಳಿಗೆ ಸ್ಪಂದಿಸುವ ಏಕೈಕ ಪಕ್ಷವೆಂದರೇ ಅದು ಆಮ್ ಆದ್ಮಿ ಪಕ್ಷ. ಮುಂದಿನ ದಿನಗಳಲ್ಲಿ ಭಾರತ ದೇಶದ ಚುಕ್ಕಾಣಿಯನ್ನು ಸಹ ಆಮ್ ಆದ್ಮಿ ಪಕ್ಷ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.