ಜೊತೆ ಜೊತೆಯಲಿ ನೋಡಲ್ಲ ಎಂದವರು ಮತ್ತೆ ನೋಡಲು ಆರಂಭಿಸಿದ್ದಾರೆ, ಮತ್ತೊಂದು ಟ್ವಿಸ್ಟ್, ಸಿನಿಮಾ ಕಥೆಯನ್ನು ಮೀರಿಸಿದ ಧಾರವಾಹಿ, ಮುಂದೇನು ಗೊತ್ತೇ??

ಜೊತೆ ಜೊತೆಯಲಿ ನೋಡಲ್ಲ ಎಂದವರು ಮತ್ತೆ ನೋಡಲು ಆರಂಭಿಸಿದ್ದಾರೆ, ಮತ್ತೊಂದು ಟ್ವಿಸ್ಟ್, ಸಿನಿಮಾ ಕಥೆಯನ್ನು ಮೀರಿಸಿದ ಧಾರವಾಹಿ, ಮುಂದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಸಾಕಷ್ಟು ಏರು ಪೇರುಗಳನ್ನು ಕಂಡಿದೆ. ಕೆಲವೊಮ್ಮೆ ಉತ್ತಮ ಎಪಿಸೋಡ್ ನಿಂದಾಗಿ ಸಾಕಷ್ಟು ಹೆಚ್ಚಿನ ಟಿಆರ್ ಪಿ ಪಡೆದಿದ್ದರೆ ಇನ್ನೂ ಹಲವು ಸಮಯದಲ್ಲಿ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟವೇ ಆಗುತ್ತಿರಲಿಲ್ಲ. ಹಾಗಾಗಿ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಕೂಡ ಹಿಂದೆ ಉಳಿದಿತ್ತು. ಆದರೆ ಇದೀಗ ಬಹುನಿರೀಕ್ಷಿತ ರಾಜನಂದಿನಿ ಪಾತ್ರ ರಿವೀಲ್ ಮಾಡಿದ್ದು, ಜನರು ತಪ್ಪದೇ ಜೊತೆಜೊತೆಯಲಿ ಧಾರಾವಾಹಿಯನ್ನು ಮತ್ತೆ ನೋಡುವಂತಾಗಿದೆ.

ಹೌದು, ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಗೆ ಜೊತೆಯಾಗಿದ್ದ ರಾಜನಂದಿನಿ ಯಾರು? ಅಂದಿನ ಕಥೆ ಏನು ಎನ್ನುವುದು ಬಹಳ ಕುತೂಹಲವನ್ನು ಮೂಡಿಸಿದ್ದ ವಿಷಯ. ಇದೀಗ ಧಾರಾವಾಹಿತಂಡ ರಾಜನಂದಿನಿ ಪಾತ್ರವನ್ನು ರಿವೀಲ್ ಮಾಡುವುದರ ಜೊತೆಗೆ ಸುಭಾಶ್ ಪಾಟೀಲ್ ಎನ್ನುವ ಪಾತ್ರವನ್ನೂ ಸೃಷ್ಟಿಸಿದೆ.

ಸುಭಾಷ್ ಪಾಟೀಲ್ ಪಾತ್ರದಲ್ಲಿ ನಟ ಅನಿರುದ್ಧ ಬಹಳ ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಈ ಹಿಂದೆ ರಾಜನಂದಿನಿ ಪಾತ್ರವನ್ನು ಹಿಂದಿ ಕಿರುತೆರೆಯ ನಟಿಯೊಬ್ಬರು ನಿರ್ವಹಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಇದು ಕೇವಲ ಊಹಾಪೋಹವಷ್ಟೇ ಆಗಿದ್ದು, ಇದೀಗ ರಾಜನಂದಿನಿ ಯಾರು ಎಂಬುದು ಗೊತ್ತಾಗಿದೆ. ನಟಿ ಸೋನು ಗೌಡ ರಾಜನಂದಿನಿಯಾಗಿ ಗತ್ತು ಗಾಂಭಿರ್ಯದಿಂದ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸುಭಾಷ್ ಪಾಟೀಲ್ ಗೂ ರಾಜನಂದಿನಿಗೂ ಏನು ಸಂಬಂಧ? ಇಲ್ಲಿ ಆರ್ಯವರ್ಧನ್ ಪಾತ್ರ ಹುಟ್ಟಿಕೊಂಡಿದ್ದು ಹೇಗೆ ಮೊದಲಾದವುಗಳಿಗೆ ಆರ್ಯವರ್ಧನ್ ಸಿಕ್ರೇಟ್ ರೂಮ್ ಉತ್ತರಕೊಡಲಿದೆ. ಹಾಗಾಗಿ ಈಗಾಗಲೇ ಪ್ರಸಾರವಾಗುತ್ತಿರುವ ಪ್ರೋಮೋ ನೋಡಿ ಜನ ಥ್ರೀಲ್ ಆಗಿದ್ದು, ಜೊತೆಜೊತೆಯಲಿ ಧಾರಾವಾಹಿಯ ಮುಂದಿನ ಎಲ್ಲಾ ಎಪಿಸೋಡ್ ಗಳನ್ನೂ ವೀಕ್ಷಿಸುವುದು ಪಕ್ಕಾ!