ಐಪಿಎಲ್ ಗೆ ಆರಂಭಕ್ಕೂ ಮುನ್ನವೇ ಡೆಲ್ಲಿ ತಂಡಕ್ಕೆ ಬಿಗ್ ಶಾಕ್, ಬಲಿಷ್ಠ ತಂಡ ಕಟ್ಟಿರುವ ಆಸೆಯಲ್ಲಿ ಇದ್ದ ಡೆಲ್ಲಿ ಗೆ ಮತ್ತೊಂದು ನಿರಾಸೆ. ಏನು ಗೊತ್ತೇ??

ಐಪಿಎಲ್ ಗೆ ಆರಂಭಕ್ಕೂ ಮುನ್ನವೇ ಡೆಲ್ಲಿ ತಂಡಕ್ಕೆ ಬಿಗ್ ಶಾಕ್, ಬಲಿಷ್ಠ ತಂಡ ಕಟ್ಟಿರುವ ಆಸೆಯಲ್ಲಿ ಇದ್ದ ಡೆಲ್ಲಿ ಗೆ ಮತ್ತೊಂದು ನಿರಾಸೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೆ ಮೇ 26ರಿಂದ ಆರಂಭವಾಗುವ ಈ ಮಹತ್ವದ ಸರಣಿ ಮೇ 29ರ ವರೆಗೆ ನಡೆಯಲಿದೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸಿಗಳು ಮಹತ್ವದ ಸರಣಿಗೆ ಸಿದ್ದತೆ ನಡೆಸುತ್ತಿವೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿದೆ. ಹರಾಜಿಗಿಂತ ಮುಂಚೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ವರು ಆಟಗಾರರನ್ನು ರಿಟೇನ್ ಮಾಡಿಕೊಂಡಿತ್ತು. ಭಾರತದ ಮೂವರು ಆಟಗಾರರು ಹಾಗೂ ಒಬ್ಬ ವಿದೇಶಿ ಆಟಗಾರನನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಭಾರತದ ಆಟಗಾರರಾದ ಪೃಥ್ವಿ ಶಾ, ರಿಷಭ್ ಪಂತ್, ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ಹಾಗೂ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಆನ್ರಿಕ್ ನೊಕಿಯೇ ಯವರನ್ನು ಉಳಿಸಿಕೊಂಡಿತ್ತು.

ಕಳೆದ ಭಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಶಕ್ತಿ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಹಾಗೂ ನೋಕಿಯೆ ಮತ್ತು ಭಾರತದ ಆವೇಶ್ ಖಾನ್ ರಿಂದ ಕೂಡಿತ್ತು. ಆದರೇ ಈ ಭಾರಿ ಕಗಿಸೋ ರಬಾಡ ಹಾಗೂ ಆವೇಶ್ ಖಾನ್ ರನ್ನು ಹರಾಜಿನಲ್ಲಿ ಬೇರೆ ಫ್ರಾಂಚೈಸಿಗಳು ಖರೀದಿಸಿವೆ. ಸದ್ಯ ತಂಡದಲ್ಲಿರುವುದು ಏಕೈಕ ವೇಗದ ಬೌಲರ್ ಎಂದರೇ ಅದು ಆನ್ರಿಕ್ ನೊಕಿಯೇ. ಈ ಭಾರಿ ಲುಂಗಿ ಎನ್ ಗಿಡಿ, ಶಾರ್ದೂಲ್ ಠಾಕೂರ್ ರವರನ್ನು ಖರೀದಿಸಿದರೂ, ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದ ನೋಕಿಯೆ ಈ ಭಾರಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯದ ಸಮಸ್ಯೆಯ ಕಾರಣ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು.

ಈಗ ದಕ್ಷಿಣ ಆಫ್ರಿಕಾ ತಂಡ ಪ್ರಕಟಿಸಿರುವ ಬಾಂಗ್ಲಾ ಸರಣಿಗೂ ಸಹ ನೋಕಿಯೆ ರನ್ನು ಕೈ ಬಿಟ್ಟಿದೆ. ನೋಕಿಯೇ ಇನ್ನು ಪೂರ್ಣ ಪ್ರಮಾಣದ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ನೋಕಿಯೇ ಪೂರ್ಣ ಪ್ರಮಾಣದ ಐಪಿಎಲ್ ಹೇಗೆ ಆಡುತ್ತಾರೆಂಬ ಯಕ್ಷ ಪ್ರಶ್ನೆ ಈಗ ಎಲ್ಲರ ಮುಂದಿದೆ. ಗಾಯದ ಕಾರಣ ಈ ಐಪಿಎಲ್ ನಿಂದ ನೋಕಿಯೇ ಹೊರಗುಳಿದರೂ ಅಚ್ಚರಿಯಿಲ್ಲ. ಬಿಸಿಸಿಐ ಸಹ ಫಿಟ್ ಆಟಗಾರರನ್ನು ಮಾತ್ರ ಆಡಿಸುವುದಾಗಿ ಈ ಹಿಂದೆ ಘೋಷಿಸಿತ್ತು‌. ನೋಕಿಯೆ ಆಡದಿದ್ದರೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಲಿದೆ. ನೋಕಿಯೇ ಅನುಪಸ್ಥಿತಿಯಲ್ಲಿ ತಂಡದ ವೇಗದ ಬೌಲಿಂಗ್ ಸಾರಥ್ಯವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ‌.