ಬಿಗ್ ನ್ಯೂಸ್: ಕೊಹ್ಲಿ ನಾಯಕತ್ವದ ರಾಜೀನಾಮೆಯ ಕುರಿತು ಸಿಕ್ತು ಮಹತ್ವದ ಮಾಹಿತಿ, ಆರ್ಸಿಬಿ ತಂಡ ಮಾಡಿರುವುದು ಏನು ಗೊತ್ತೇ??

ಬಿಗ್ ನ್ಯೂಸ್: ಕೊಹ್ಲಿ ನಾಯಕತ್ವದ ರಾಜೀನಾಮೆಯ ಕುರಿತು ಸಿಕ್ತು ಮಹತ್ವದ ಮಾಹಿತಿ, ಆರ್ಸಿಬಿ ತಂಡ ಮಾಡಿರುವುದು ಏನು ಗೊತ್ತೇ??

ನಮಸ್ಕಾರ ಸ್ನೇಹತರೇ ಐಪಿಎಲ್ ನಲ್ಲಿ ಕಪ್ ಗೆಲ್ಲದಿದ್ದರೂ, ಅಭಿಮಾನಿಗಳ ಕ್ರೇಜ್ ಆರ್ಸಿಬಿ ತಂಡಕ್ಕೆ ಹೆಚ್ಚು ಇದೆ. ಈ ಕಾರಣಕ್ಕಾಗಿ ಅಭಿಮಾನಿಗಳನ್ನು ಖುಷಿ ಪಡಿಸಲೆಂದೇ ಈಗ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಈಗ ಇವೆಂಟ್ ಒಂದನ್ನು ಹಮ್ಮಿಕೊಂಡಿದೆ. ಹೌದು ಇದೇ ಶನಿವಾರ ಆರ್ಸಿಬಿ ಮ್ಯಾನೇಜ್ ಮೆಂಟ್ ಅನಬಾಕ್ಸ್ ಇವೆಂಟ್ ಒಂದನ್ನು ಹಮ್ಮಿಕೊಂಡಿದೆ. ಈ ಇವೆಂಟ್ ನಲ್ಲಿ ಆರ್ಸಿಬಿ ತಂಡದ ನೂತನ ನಾಯಕನ ಹೆಸರು ಘೋಷಣೆ ಹಾಗೂ ಹೊಸ ಜೆರ್ಸಿ ಹಾಗೂ ಇನ್ನಿತರ ಹೊಸತನ್ನು ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿದೆ.

ಆರ್ಸಿಬಿ ತಂಡದ ನೂತನ ನಾಯಕನ ರೇಸ್ ನಲ್ಲಿ ದಕ್ಷಿಣ ಆಫ್ರಿಕಾದ ಫಾಪ್ ಡು ಪ್ಲೇಸಿಸ್ , ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಭಾರತದ ದಿನೇಶ್ ಕಾರ್ತಿಕ್ ಇದ್ದಾರೆ. ಈ ಮೂವರಲ್ಲಿ ಒಬ್ಬರು ಆರ್ಸಿಬಿ ತಂಡದ ನೂತನ ನಾಯಕನಾಗಬಹುದು ಎಂದು ಹೇಳಲಾಗಿತ್ತು. ಆದರೇ ಈಗ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಒಂದು ದೊಡ್ಡ ಟ್ವಿಸ್ಟ್ ನೀಡಿದೆ.

ಹೌದು ಹಲವಾರು ಸೀಸನ್ ಗಳಿಂದ ಆರ್ಸಿಬಿ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಕಳೆದ ತಮ್ಮ ಕ್ರಿಕೇಟ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಟಿ 20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೇ ಈಗ ಬದಲಾದ ಸಮಯದಲ್ಲಿ ವಿರಾಟ್ ಕೊಹ್ಲಿ ಗೆ ಸದ್ಯ ಭಾರತ ತಂಡದಲ್ಲಿ ಯಾವುದೇ ನಾಯಕತ್ವದ ಜವಾಬ್ದಾರಿಯಿಲ್ಲ. ಈಗ ಮತ್ತೊಂದು ವಿಷಯ ಬಹಿರಂಗಗೊಂಡಿದ್ದು ವಿರಾಟ್ ಕೊಹ್ಲಿ ಕಳೆದ ವರ್ಷ ಆರ್ಸಿಬಿ ತಂಡಕ್ಕೆ ರಾಜೀನಾಮೆ ನೀಡಿದ್ದರು. ಆದರೇ ಈವರೆಗೆ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಆ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂಬ ಸತ್ಯ ಹೊರಬಂದಿದೆ. ಹಾಗಾಗಿ ಪುನಃ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿಯವರೇ ನಾಯಕರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ಈ ಸುದ್ದಿ ಖಚಿತಪಡಿಸಿಕೊಳ್ಳಲು ಮಾರ್ಚ್ ೧೨ ರ ವರೆಗೆ ಕಾಯಬೇಕಾಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.