ವಿವಿಧ ರೀತಿಯಲ್ಲಿ ಗ್ರಾಹಲರಿಗೆ ಸಿಗಲಿದೆ 2 ಲಕ್ಷದವರೆಗಿನ ಲಾಭ, SBI ನಲ್ಲಿ ಮಾತ್ರ, ಹಳೆಯ ಹಾಗೂ ಹೊಸ ಗ್ರಾಹಕರಿಗೂ ಸುವರ್ಣಾವಕಾಶ.

ವಿವಿಧ ರೀತಿಯಲ್ಲಿ ಗ್ರಾಹಲರಿಗೆ ಸಿಗಲಿದೆ 2 ಲಕ್ಷದವರೆಗಿನ ಲಾಭ, SBI ನಲ್ಲಿ ಮಾತ್ರ, ಹಳೆಯ ಹಾಗೂ ಹೊಸ ಗ್ರಾಹಕರಿಗೂ ಸುವರ್ಣಾವಕಾಶ.

ನಮಸ್ಕಾರ ಸ್ನೇಹಿತರೇ, ನೀವು ಎಸ್ ಬಿ ಐ ಬ್ಯಾಂಕ್ ಬಳಕೆದಾರರಾಗಿದ್ದರೆ, ಈ ಸುದ್ದಿಯನ್ನು ಓದಲೇಬೇಕು. ಎಸ್ ಬಿ ಐ ತನ್ನ ಗ್ರಾಹಕರಾಗಿ ಉತ್ತಮ ಯೋಜನೆಯೊಂದನ್ನು ರೂಪಿಸಿದೆ. ರೂಪೇ ಕಾರ್ಡ್ ಇರುವ ಗ್ರಾಹಕರು ಮುಖ್ಯವಾಗಿ ಇದರ ಪ್ರಯೋಜನವನ್ನು ಪಡೆಯಬಹುದು. ಅದುವೇ 2 ಲಕ್ಷದವರೆಗಿನ ವಿಮಾ ಸೌಲಭ್ಯ. ಆಗಸ್ಟ್ 28, 2018 ರವರೆಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆಯನ್ನು ತೆರೆದಿರುವ ಗ್ರಾಹಕರು ಅವರಿಗೆ ನೀಡಲಾದ ರೂಪೇ, ಜನ್ ಧನ್ ಕಾರ್ಡ್‌ನಲ್ಲಿ ರೂ. 1 ಲಕ್ಷದವರೆಗೆ ವಿಮಾ ಸೌಲಭ್ಯವನ್ನು ಪಡೆಯುತ್ತಾರೆ.

ಆಗಸ್ಟ್ 28, 2018 ರ ನಂತರ ನೀಡಲಾದ ರುಪೇ ಕಾರ್ಡ್‌ಗಳಲ್ಲಿ, ರೂ 2 ಲಕ್ಷದವರೆಗಿನ ಆಕ್ಸಿಡೆಂಟಲ್ ಕವರ್ ಪ್ರಯೋಜನವನ್ನೂ ಕೂಡ ಈಗ ಸೇರಿಸಲಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ದೇಶದ ಬಡ ಜನರೂ ಕೂಡ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆಯನ್ನು ತೆರೆಯಲು ಅನುಕೂಲ ಮಾಡಿಕೊಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಅಥವಾ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಬ್ಯಾಂಕ್ ಗೆ ಭೇಟಿ ನೀಡಿ ಜನ್ ಧನ್ ಖಾತೆಯನ್ನು ತೆರೆಯಬಹುದು. ಜೊತೆಗೆ ಉಳಿತಾಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಖಾತೆಯಾಗಿ ಪರಿವರ್ತಿಸಬಹುದು. ಇದರಲ್ಲಿ, ರೂಪೇ ಡೆಬಿಟ್ ಕಾರ್ಡ್ ಸೌಲಭ್ಯವನ್ನೂ ನೀಡುವುದು ವಿಶೇಷ.

ಇದರಲ್ಲಿ ಅಪಘಾತ ವಿಮಾ ಕ್ಲೈಮ್ ಪಡೆಯಲು, ನೀವು ಮೊದಲು ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರೊಂದಿಗೆ ಮೂಲ ಮರಣ ಪ್ರಮಾಣ ಪತ್ರ ಅಥವಾ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕಗುತ್ತದೆ. ಎಫ್‌ಐಆರ್‌ನ ಮೂಲ ಅಥವಾ ಪ್ರಮಾಣೀಕೃತ ಪ್ರತಿ ಜೊತೆಗಿರಬೇಕು. ಹಾಗೆಯೇ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್‌ಎಸ್‌ಎಲ್ ವರದಿಯೂ ಇರಬೇಕು. ಆಧಾರ್ ಕಾರ್ಡ್ ನಕಲು, ಕಾರ್ಡುದಾರರ ಬಳಿ ರುಪೇ ಕಾರ್ಡ್ ಹೊಂದಿರುವ ಅಫಿಡವಿಟ್ ಅನ್ನು ಬ್ಯಾಂಕ್ ಸ್ಟಾಂಪ್ ಪೇಪರ್‌ನಲ್ಲಿ ನೀಡಬೇಕು.೦ ಈ ಎಲ್ಲಾ ದಾಖಲೆಗಳನ್ನು 90 ದಿನಗಳ ಒಳಗಾಗಿ ಬ್ಯಾಂಕ್ ಗೆ ಒದಗಿಸಬೇಕು. ಇದರ ಜೊತೆಗೆ ಪಾಸ್‌ಬುಕ್‌ನ ಪ್ರತಿಯೊಂದಿಗೆ ನಾಮಿನಿಯ ಹೆಸರು ಮತ್ತು ಬ್ಯಾಂಕ್ ವಿವರಗಳನ್ನು ಸಹ ಸಲ್ಲಿಸಬೇಕು.