ಜೇಮ್ಸ್ ಜಾತ್ರೆಗೆ ಕೋಟಿ ಕೋಟಿ ಹಣ, 2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್ ಗಳಿಗೆ ಖರ್ಚು ಮಾಡುತ್ತಿರುವುದು ಯಾರು ಗೊತ್ತೇ?? ಎಷ್ಟು ಖರ್ಚಾಗಿದೆ ಗೊತ್ತೇ??

ಜೇಮ್ಸ್ ಜಾತ್ರೆಗೆ ಕೋಟಿ ಕೋಟಿ ಹಣ, 2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್ ಗಳಿಗೆ ಖರ್ಚು ಮಾಡುತ್ತಿರುವುದು ಯಾರು ಗೊತ್ತೇ?? ಎಷ್ಟು ಖರ್ಚಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ವಾಗಿರುವ ಜೇಮ್ಸ್ ಇದೇ ಮಾರ್ಚ್ 17ರಂದು ಅವರ ಜನ್ಮದಿನದ ವಿಶೇಷವಾಗಿ ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾವನ್ನು ಅದ್ದೂರಿಯಾಗಿ ಹಬ್ಬದಂತೆ ಆಚರಿಸಲು ಹಲವಾರು ತಯಾರಿಗಳನ್ನು ಕೂಡ ಮಾಡಿಕೊಂಡಿದ್ದಾರೆ. ಇದೇ ಮಾರ್ಚ್ 13ರಂದು ಚಿತ್ರದ ಪ್ರಿ ರಿಲೀಸ್ ಇವೆಂಟ್ ಹೊಸಪೇಟೆಯಲ್ಲಿ ನಡೆಯುವ ಸಾಧ್ಯತೆಗಳಿದ್ದು ಕನ್ನಡ ಚಿತ್ರರಂಗದ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಘಟಾನುಘಟಿಗಳು ಅಲ್ಲಿ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ.

ಒಟ್ಟಾರೆಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಅದ್ದೂರಿಯಾದ ಸ್ವಾಗತವನ್ನು ವಿಶ್ವದಾದ್ಯಂತ ಪಡೆದುಕೊಳ್ಳುತ್ತಿರುವುದು ನಿಜ. ಇಷ್ಟು ಮಾತ್ರವಲ್ಲದೆ ಅಪ್ಪು ಅವರ ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಅಪ್ಪು ಅವರ ಕೊನೆಯ ಚಿತ್ರವಾಗಿರುವ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸುವ ನಿರ್ಧಾರವನ್ನು ಮಾಡಿದ್ದಾರೆ. ಅಷ್ಟಕ್ಕೂ ಎಷ್ಟೆಲ್ಲ ಖರ್ಚು ಮಾಡಿ ಅಪ್ಪು ಅಭಿಮಾನಿಗಳು ಬಿಡುಗಡೆಯ ಸಂದರ್ಭದಲ್ಲಿ ಏನನ್ನು ಮಾಡಲು ಹೊರಟಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಒಟ್ಟಾರೆಯಾಗಿ ಅಭಿಮಾನಿಗಳು ಜೇಮ್ಸ್ ಜಾತ್ರೆಗೆ ಬರೋಬ್ಬರಿ 30 ರಿಂದ 35 ಲಕ್ಷ ರೂಪಾಯಿ ಖರ್ಚು ಮಾಡಲು ಹೊರಟಿದ್ದಾರೆ. ಮಾರ್ಚ್ 16ರ ರಾತ್ರಿಯಿಂದ ಪ್ರಾರಂಭವಾಗಿ ಮಾರ್ಚ್ 20ರವರೆಗೆ ಹಲವಾರು ಕಾರ್ಯಕ್ರಮಗಳನ್ನು ಅಪ್ಪು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಎರಡು ಹೆಲಿಕಾಪ್ಟರ್ ಮೂಲಕ ಕಂಠೀರವ ಸ್ಟೇಡಿಯಂ ನಲ್ಲಿರುವ ಅಪ್ಪು ಸಮಾಧಿಗೆ ಹಾಗೂ ವೀರೇಶ್ ಹಾಗೂ ಪ್ರಸನ್ನ ಚಿತ್ರಮಂದಿರಗಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಇದಕ್ಕೆ ಏಳರಿಂದ ಎಂಟು ಲಕ್ಷ ರೂಪಾಯಿ ಖರ್ಚಾಗುತ್ತದೆ. ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಹಾಕುವುದಕ್ಕೆ ಫ್ಲೆಕ್ಸ್ ಹಾಗೂ ಪೋಸ್ಟರ್ಗಳನ್ನು ಕೂಡ ಎಂಟು ಲಕ್ಷ ರೂಪಾಯಿ ಖರ್ಚು ಮಾಡಿ ರೆಡಿ ಮಾಡಿದ್ದಾರೆ.

ಅದರಲ್ಲಿ 3000 ಹ್ಯಾಪಿ ಬರ್ತಡೆ ಅಪ್ಪು ಎನ್ನುವ ಪೋಸ್ಟರ್ಗಳು ಕೂಡ ಇವೆ. ವೀರೇಶ್ ಪ್ರಸನ್ನ ಹಾಗೂ ಇತರೆ ಪ್ರಮುಖ ಚಿತ್ರಮಂದಿರಗಳಲ್ಲಿ ನಾಲ್ಕು ದಿನವೂ ಪಟಾಕಿ ಸಿಡಿಸುವುದಕ್ಕೆ 2 ಲಕ್ಷ ಖರ್ಚು ಮಾಡಲಿದ್ದಾರೆ. ನಾಲ್ಕು ದಿನವೂ ಸಿಹಿತಿಂಡಿ ಹಾಗೂ ಊಟದ ವ್ಯವಸ್ಥೆ ವೀರೇಶ್ ಚಿತ್ರಮಂದಿರದಲ್ಲಿ ಇರಲಿದೆ. ಮಾರ್ಚ್ 20ರಂದು ರಾಜಾಜಿನಗರದಿಂದ ವೀರೇಶ್ ಚಿತ್ರ ಮಂದಿರದವರೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಇರಲಿದೆ. 30 ಕಟೌಟ್ ಗಳಿಗೆ 10 ಜೆಸಿಬಿ ಯಲ್ಲಿ ಪುಷ್ಪಾರ್ಚನೆಯನ್ನೂ ಕೂಡ ಮಾಡಲಾಗುವುದು. ಈ ಎಲ್ಲಾ ಕೆಲಸಗಳನ್ನು ಕೂಡ ಸ್ವತಹ ಅಪ್ಪು ಅಭಿಮಾನಿಗಳೇ ತಮ್ಮ ಸ್ವಂತ ಖರ್ಚಿನಿಂದ ನೋಡಿಕೊಳ್ಳಲಿದ್ದಾರೆ.