ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ರವರ ಕುರಿತು ಮಾತನಾಡಿದಾದ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಹೇಳಿದ್ದೇನು ಗೊತ್ತೇ??

ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ರವರ ಕುರಿತು ಮಾತನಾಡಿದಾದ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗ ಹಲವು ಹೊಸ ಹೊಸ ನಟರನ್ನು ಸ್ವಾಗತಿಸುತ್ತಿದೆ. ಕಿರುತೆರೆಯ ನಟರು ಬೆಳ್ಳಿತೆರೆಗೆ ಬರುವುದು ಒಂದೆಡೆಯಾದರೆ ನೇರವಾಗಿ ಹಿರಿತೆರೆಗೆ ಬರುವವರು ಕೆಲವರು. ಅದರಲ್ಲೂ ಇತ್ತೀಚಿಗೆ ಯಾವುದೇ ಕಲಾ ಕುಟುಂಬದ ಹಿನ್ನೆಲೆಯಿಲ್ಲದಿದ್ದವರೂ ಕೂಡ ಚಂದನವನಕ್ಕೆ ಬರುತ್ತಿರುವುದು ಸ್ವಾಗತಾರ್ಹ. ಇದೀಗ ಕಿರೀಟಿ ರೆಡ್ಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು. ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಮಗ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ನಿರ್ಮಾಣದ ಸಿನಿಮಾವೊಂದರಲ್ಲಿ ಕಿರೀಟಿ ನಟಿಸುತ್ತಿದ್ದಾರೆ. ರಾಧಾ ಕೃಷ್ಣ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಏಕಕಾಲಕ್ಕೆ ತೆಲುಗು-ಕನ್ನಡ ಎರಡೂ ಭಾಷೆಯಲ್ಲಿಯೂ ನಿರ್ಮಾಣ ಆಗುತ್ತಿರುವುದು ವಿಶೇಷ. ಯಾಕೆಂದರೆ ಈ ಚಿತ್ರದ ಮೂಲಕ ಕಿರೀಟಿ ಅವರು ನಾಯಕನಾಗಿ ಪರಿಚಯಗೊಳ್ಳುತ್ತಿರುವುದರ ಜೊತೆಗೆ ಕಿರೀಟಿಯವರ ಮೊದಲನೆಯ ಚಿತ್ರವೇ ಎರಡೆರರು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.

ಕಿರೀಟಿ ರೆಡ್ಡಿ ಗೆ ಪುನೀತ್ ತುಂಬಾ ಇಷ್ಟವಂತೆ. ಹಾಗಂತ ಹಲವು ಬಾರಿ ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ಲಾಂಚ್ ಮಾಡುವ ಕಾರ್ಯಕ್ರಮದಲ್ಲೂ ನಟ ಪುನೀತ್ ರಾಜಕುಮಾರ್ ಅವರ ಬಗ್ಗೆ ಹೇಳಿಕೊಂಡಿದ್ದಾರೆ. ‘ಅಪ್ಪು ಸರ್ ನೋಡಿಯೇ ನಾನು ಹೀರೋ ಆದೆ’ ಎಂದು ಕೇಳಿಕೊಳ್ಳುವ ಕಿರೀಟಿಗೆ ಪುನೀತ್ ಅವರೇ ಇನ್ಪರೇಶನ್ ಎಂಬುದು ಗೊತ್ತಾಗುತ್ತದೆ. ಕಿರ್‍ಇಟಿ ರೆಡ್ಡಿ ಸಿನಿಮಾ ಹಿನ್ನೆಲೆ ಹೊಂದಿಲ್ಲದಿದ್ದರೂ ರಾಜಕೀಯ ಹಿನ್ನೆಲೆ ಹೊಂದಿರುವವರು. ಹಾಗಾಗಿ ಕಿರೀಟಿ ಇನ್ನು ರಾಜಕೀಯಕ್ಕೂ ಬರಬಹುದು ಎನ್ನುವುದು ಹಲವರ ಊಹೆ. ಆದರೆ ತಾನು ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ ಕಿರೀಟಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿರುವ ಕಿರೀಟಿ ಹಾಗೂ ಚಿತ್ರತಂಡ ಯಾವ ರೀತಿಯ ಚಿತ್ರವನ್ನು ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.