ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತೆರೆಯ ಮುಂದೆ ಚೆನ್ನಾಗಿಯೇ ಇರುತ್ತದೆ, ಆದರೆ ತೆರೆಯ ಹಿಂದಿನ ಜೀವನ ನಗ್ನ ಸತ್ಯದ ಬಗ್ಗೆ ಮಾತನಾಡಿದ ಗಾಳಿಪಟ ನಟಿ ಪಲ್ಲವಿ ಗೌಡ, ಹೇಳಿದ್ದೇನು ಗೊತ್ತೇ??

ತೆರೆಯ ಮುಂದೆ ಚೆನ್ನಾಗಿಯೇ ಇರುತ್ತದೆ, ಆದರೆ ತೆರೆಯ ಹಿಂದಿನ ಜೀವನ ನಗ್ನ ಸತ್ಯದ ಬಗ್ಗೆ ಮಾತನಾಡಿದ ಗಾಳಿಪಟ ನಟಿ ಪಲ್ಲವಿ ಗೌಡ, ಹೇಳಿದ್ದೇನು ಗೊತ್ತೇ??

1,451

ನಮಸ್ಕಾರ ಸ್ನೇಹಿತರೇ, ಕನ್ನಡದಲ್ಲಿ ಹಲವು ನಟಿಯರು ಇಂದು ವಿದ್ಯಾಭ್ಯಾಸವನ್ನೂ ಮುಂದುವರೆಸುತ್ತಾ, ನಟನೆಯನ್ನೂ ಮಾಡುವಲ್ಲಿ ನಿರತರಾಗಿದ್ದಾರೆ. ಹೀಗೆ ನಟನೆಯಲ್ಲಿ ಸೈ ಎನಿಸಿಕೊಂಡು, ಕಾಲೇಜಿನ ಆಕ್ಟಿವಿಟಿಗಳಲ್ಲೂ ಬ್ಯುಸಿಯಾಗಿರುವ ನಟಿ ಪಲ್ಲವಿ ಗೌಡ ಸಂದರ್ಶನ ಒಂದರಲ್ಲಿ ತಮ್ಮ ಮನದಾಳದ ಮಾತುಗಳನ್ನ ಬಿಚ್ಚಿಟ್ಟಿದ್ದಾರೆ. ಅವರು ಹೇಳಿದ್ದಾದರೂ ಏನು ಗೊತ್ತಾ?

Follow us on Google News

ಹೌದು ಮುದ್ದು ಮೊಗದ ಚಲುವೆ ನಟಿ ಪಲ್ಲವಿ ಗೌಡ, ಪಾಸಿಟಿವ್ ಹಾಗೂ ನೆಗೆಟಿ ಎರಡೂ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಬಲ್ಲವರು ನಟಿ ಪಲ್ಲವಿ. ಇವರು ಸದ್ಯ ಆನಿಮೇಶನ್ ಡಿಪ್ಲೊಮಾ ಮಾಡುತ್ತಿದ್ದು ಎರಡೆರಡು ಧಾರಾವಾಹಿಗಳ ನಟಯಲ್ಲಿ ಬ್ಯುಸಿಯಾಗಿದ್ದಾರೆ. ಪಲ್ಲವಿಯವರು ಕ್ರೀಡೆಯಲ್ಲಿ ಹೆಚ್ಚು ತೊಡಗಿಕೊಂಡವರು. ರನ್ನಿಂಗ್, ಶಾಟ್ ಪುಟ್, ವಾಲಿಬಾಲ್ ಮೊದಲಾದ ಆಟಗಳಲ್ಲಿ ಆಡಿ ರಾಷ್ಟ್ರವನ್ನು ಪ್ರತಿನಿಧಿಸಿದ್ದು ಬೆಸ್ಟ್ ಫೀಲಿಂಗ್ ಎನ್ನುತ್ತಾರೆ ನಟಿ ಪಲ್ಲವಿ. ಕ್ರೀಡೆಯೊಂದರಲ್ಲಿ ಶ್ರೀಲಂಕಾಕ್ಕೆ ಹೋಗಿದ್ದಾಗ, ಶ್ರೀಲಂಕನ್ ಒಬ್ಬರು ಬಂದು ಕೆನೆ ಸವರಿ ಏನೋ ಹೇಳಿಹೋದರು, ಅವರು ಹೇಳಿದ್ದು ಅರ್ಥವಾಗದೇ ಟೀಚರ್ ಬಳಿ ಕೇಳಿದಾಗ, ಅವರು ನೀನು ತುಂಬಾ ಕ್ಯೂಟ್ ಐ ಲವ್ ಯು ಅಂತ ಹೇಳಿದರು ಎಂಬುದನ್ನು ಕೇಳಿ ತುಂಬಾ ಖುಷಿಪಟ್ಟರಂತೆ ಪಲ್ಲವಿ.

ಇನ್ನು ಸಿನಿಮಾ ರಂಗದ ಬಗ್ಗೆ ಮಾತನಾಡಿರುವ ಪಲ್ಲವಿ ಸೆಲಿಬ್ರೆಟಿಗಳು ಎಂದರೆ ಏನು ತಿಳಿದುಕೊಳ್ಳುತ್ತಾರೋ ಅದಕ್ಕಿಂತ ವಿಭಿನ್ನವಾಗಿರುತ್ತಾರೆ ಎಂದು ಹೇಳುತ್ತಾರೆ. ಕಲಾದೇವಿ ಎಲ್ಲರನ್ನೂ ಕೈಬೀಸಿಕರೆಯುತ್ತಾಳೆ. ಇಲ್ಲಿ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎನ್ನುತ್ತಾರೆ ಪಲ್ಲವಿ. ಇನ್ನು ತೆರೆಯ ಮೇಲೆ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಬರುವ ನಟ ನಟಿಯರೆಲ್ಲರೂ ನಿಜಜೀವನದಲ್ಲಿ ಬೇರೆಯದೇ ಪರಿಸ್ಥಿತಿಯನ್ನು ಎದುರಿಸುತ್ತಾರೆ. ನಮಗೂ ನೋವು ನಲಿವು ದುಃಖಗಳಿರುತ್ತದೆ. ಹಗಲು ರಾತ್ರಿ ಎನ್ನದೇ ನಟಿಸಿಯೂ ಕೆಲವೊಮ್ಮೆ ಅತೀ ಕಡಿಮೆ ಹಣ ಸಂಪಾದಿಸುತ್ತೇವೆ. ಇದರಿಂದಾಗಿ ಎಷ್ಟೋ ಸಲ, ಸ್ನೇಹಿತರು ಸಂಬಂಧಿಕರಿಂದ ಕೂಡ ದೂರವುಳಿಯಬೇಕಾಗುತ್ತದೆ ಎಂದು ಪಲ್ಲವಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.