ಉಕ್ರೇನ್ ಹಾಗೂ ರಷ್ಯಾ ನಡುವಣ ಬಿಕ್ಕಟ್ಟಿನಿಂದಾಗಿ ಭಾರತ ಕಲಿತಿರುವ ಪಾಠವೇನು ಗೊತ್ತಾ; ಈ ಕುರಿತಂತೆ ಸೇನಾಮುಖ್ಯಸ್ಥರು ಹೇಳಿದ್ದೇನು ಗೊತ್ತೇ??

ಉಕ್ರೇನ್ ಹಾಗೂ ರಷ್ಯಾ ನಡುವಣ ಬಿಕ್ಕಟ್ಟಿನಿಂದಾಗಿ ಭಾರತ ಕಲಿತಿರುವ ಪಾಠವೇನು ಗೊತ್ತಾ; ಈ ಕುರಿತಂತೆ ಸೇನಾಮುಖ್ಯಸ್ಥರು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷವನ್ನು ನೋಡಿದರೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಅನಿಶ್ಚಿತತೆಯನ್ನು ಎತ್ತಿಹಿಡಿಯುತ್ತದೆ. ವಿಶ್ವಸಂಸ್ಥೆ ಇದ್ದರೂ ಕೂಡ ಈ ಸಂಘರ್ಷವನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಸಂಘರ್ಷ ಎನ್ನುವುದು ಮೂರನೇ ಮಹಾಯು’ದ್ಧದ ಪೂರ್ವ ಕ್ರಿಯೆಯನ್ನು ವುದಾಗಿ ಬಿಂಬಿಸಲಾಗುತ್ತಿದೆ. ಅಷ್ಟರಮಟ್ಟಿಗೆ ಈ ಬಿಕ್ಕಟ್ಟು ಎನ್ನುವುದು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

ಈಗಾಗಲೇ ಎರಡು ದೇಶಗಳ ನಡುವಿನ ಸಂಘರ್ಷ ಎನ್ನುವುದು 13ನೇ ದಿನಕ್ಕೆ ಕಾಲಿಟ್ಟಿದೆ ಅದೆಷ್ಟು ಸುತ್ತುಗಳ ಮಾತುಕತೆ ನಡೆದರೂ ಕೂಡ ಬಿಕ್ಕಟ್ಟು ಪರಿಹಾರವಾಗಿಲ್ಲ. ಕೇವಲ ಸೈನಿಕರು ಮಾತ್ರವಲ್ಲದೆ ನಾಗರಿಕರು ಕೂಡ ದೊಡ್ಡ ಸಂಖ್ಯೆಯಲ್ಲಿ ಮಾನವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತವು ಕೂಡ ಒಂದು ಪಾಠವನ್ನು ಕಲಿತಿದೆ ಎನ್ನುವುದಾಗಿ ಭಾರತೀಯ ಸೇನಾ ಮುಖ್ಯಸ್ಥರಾಗಿರುವ ಎಂಎಂ ನರವಣೆ ಹೇಳಿದ್ದಾರೆ. ಅಷ್ಟಕ್ಕೂ ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರದಿಂದಾಗಿ ಭಾರತವು ಕಲಿತಿರುವ ಪಾಠ ವಾದರೂ ಏನು ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ಹೌದು ಸೇನಾ ಮುಖ್ಯಸ್ಥರು ಹೇಳುವಂತೆ ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವಿನ ಸಮರದಿಂದಾಗಿ ಭಾರತದೇಶವು ಕೂಡ ಭವಿಷ್ಯದಲ್ಲಿ ಎದುರಿಸಬೇಕಾದ ಅಂತಹ ಸಮರ ಪರಿಸ್ಥಿತಿಯಲ್ಲಿ ಸ್ವಾವಲಂಬಿಯಾಗಿ ಇರಬೇಕು ಎನ್ನುವುದನ್ನು ಕಲಿತಿದೆ. ಅದರಲ್ಲೂ ಪ್ರಮುಖವಾಗಿ ನಮ್ಮದೇ ಆದಂತಹ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತರಾಗಿ ರಬೇಕು ಎನ್ನುವುದಾಗಿ ಕೂಡ ಕಲಿತಿದೆ ಎಂಬುದಾಗಿ ಸೇನಾ ಮುಖ್ಯಸ್ಥರು ವಿವರವಾಗಿ ಹೇಳಿದ್ದಾರೆ. ನಮ್ಮ ಅಕ್ಕ ಪಕ್ಕ ದೇಶಗಳ ನಡುವಿನ ಪರಿಸ್ಥಿತಿಯನ್ನು ಗಮನಿಸಿದರೆ ಇಂತಹ ದಿನಗಳು ಮುಂದಿನ ದಿನಗಳಲ್ಲಿ ನಮಗೂ ಕೂಡ ಒದಗಿ ಬರಬಹುದಾಗಿದೆ. ಯಾವುದೇ ಸಮಯದಲ್ಲಿ ಯುದ್ಧ ಸಂಭವಿಸಿದರೂ ಕೂಡ ದೇಶ ಸರ್ವ ಸನ್ನದ್ಧವಾಗಿ ಇರಬೇಕೆಂಬುದನ್ನು ಈ ಪರಿಸ್ಥಿತಿ ನಮಗೆ ಕಲಿಸಿಕೊಟ್ಟಿದೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.