ವಿಶ್ವದ ಅಪರೂಪದ ದೇಶಗಳಲ್ಲಿ ಒಂದಾಗಿರುವ ಉಕ್ರೇನ್ ಕುರಿತಂತೆ ನಿಮಗೆ ತಿಳಿಯದ ಸ್ವಾರಸ್ಯಕರ ಸಂಗತಿಗಳು ಯಾವ್ಯಾವು ಗೊತ್ತೇ??

ವಿಶ್ವದ ಅಪರೂಪದ ದೇಶಗಳಲ್ಲಿ ಒಂದಾಗಿರುವ ಉಕ್ರೇನ್ ಕುರಿತಂತೆ ನಿಮಗೆ ತಿಳಿಯದ ಸ್ವಾರಸ್ಯಕರ ಸಂಗತಿಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತಿರುವ ಎರಡು ದೇಶಗಳೆಂದರೆ ರಷ್ಯಾ ಹಾಗೂ ಉಕ್ರೇನ್. ಯಾವ ವಿಚಾರಕ್ಕಾಗಿ ಎಂಬುದು ನಿಮಗೆಲ್ಲಾ ಗೊತ್ತಿದೆ ಆದರೆ ನಾವು ಮಾತನಾಡಲು ಹೊರಟಿರುವುದು ಉಕ್ರೇನ್ ದೇಶದ ಕುರಿತಂತೆ. ಅದು ಕೂಡ ನಿಮಗೆ ಉಕ್ರೇನ್ ದೇಶದ ಕುರಿತಂತೆ ಗೊತ್ತಿರುವಂತಹ ಕೆಲವೊಂದು ಸಂಗತಿಗಳನ್ನು ವಿವರವಾಗಿ ಹೇಳಲು. ಹಾಗಿದ್ದರೆ ಅವುಗಳು ಏನು ಎಂಬುದನ್ನು ಸವಿಸ್ತಾರವಾಗಿ ಅರಿತುಕೊಳ್ಳಲು ಪ್ರಯತ್ನಿಸೋಣ ಬನ್ನಿ.

ಉಕ್ರೇನ್ ದೇಶದ ವಿಶೇಷ ವಿಚಾರಗಳಲ್ಲಿ ಮೊದಲನೆಯದಾಗಿ ನಾವು ಮಾತನಾಡಲು ಹೊರಟಿರುವುದು ಮೆಕ್ ಡೊನಾಲ್ಡ್ಸ್ ಕುರಿತಂತೆ. ಪ್ರಪಂಚದಲ್ಲಿ 32 ಸಾವಿರಕ್ಕೂ ಅಧಿಕ ಮೆಕ್ಡೊನಾಲ್ಡ್ಸ್ ಬ್ರಾಂಚ್ ಗಳಿಗೆ. ಆದರೆ ಉಕ್ರೇನ್ ದೇಶದ ರಾಜಧಾನಿಯಾಗಿರುವ ಕೀವ್ ನಲ್ಲಿ ಇರುವಂತಹ ಬ್ರಾಂಚ್ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನ ಭೇಟಿ ನೀಡುವಂತಹ ಮೂರನೇ ಸ್ಥಾನದಲ್ಲಿದೆ. ಇಷ್ಟು ಮಾತ್ರವಲ್ಲದೆ ಯುರೋಪ್ನಲ್ಲಿ ಅತ್ಯಂತ ಹೆಚ್ಚು ಹರಡಿಕೊಂಡಿರುವ ದೊಡ್ಡ ದೇಶವಾಗಿದೆ ಉಕ್ರೇನ್. ರಷ್ಯಾ ಕಜಕಿಸ್ತಾನ ಹಾಗೂ ಟರ್ಕಿ ದೇಶಗಳು ಹೆಚ್ಚಾಗಿ ಏಷ್ಯಾ ಖಂಡಗಳಲ್ಲಿ ಹರಡಿಕೊಂಡಿದೆ. ಹೀಗಾಗಿ ಉಕ್ರೇನ್ ದೇಶ ಈ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನೊಂದು ಉಕ್ರೇನ್ ದೇಶದ ಕುರಿತಂತೆ ಇರುವಂತಹ ಮಾಹಿತಿಯನ್ನು ಕೇಳಿದರೆ ನೀವು ಕೂಡ ಬೆಚ್ಚಿಬೀಳ್ತಿರಾ. ಹೌದು ನಿಮಗೆ ಗೊತ್ತಿರುವಂತೆ ಅತ್ಯಂತ ಹೆಚ್ಚು ಮರಣದ ಅನುಪಾತವನ್ನು ಹೊಂದಿರುವ ದೇಶ ಆಫ್ರಿಕಾ. ಅದನ್ನು ಹೊರತುಪಡಿಸಿದರೆ ಎರಡನೇ ಸ್ಥಾನವನ್ನು ಹೊಂದಿರುವುದು ಉಕ್ರೇನ್ ದೇಶ. ಹೌದು ಇಲ್ಲಿ ಪ್ರತಿ ಸಾವಿರ ನಾಗರಿಕರಿಗೆ 15.75 ಜನ ಮರಣವನ್ನು ಹೊಂದುತ್ತಾರೆ. ಇದಕ್ಕೆ ಕಾರಣವಾಗಿರುವ ಅಂಶಗಳು ಕೂಡ ಅತ್ಯಂತ ಧೂಮಪಾನ ಹಾಗೂ ಮಧ್ಯಪಾನದ ಸೇವನೆ ಎನ್ನುವುದು ಕೂಡ ರಿಸರ್ಚ್ ಗಳಿಂದ ತಿಳಿದುಬಂದಿದೆ.

ಉಕ್ರೇನ್ ದೇಶದ ಕುರಿತಂತೆ ಇರುವ ಇನ್ನೊಂದು ಸ್ವಾರಸ್ಯಕರ ವಿಚಾರವೇನೆಂದರೆ ಇಲ್ಲಿನ 77% ಜನರು ನಮ್ಮ ದೇಶವನ್ನು ಬಿಟ್ಟು ಹೊರಗೆ ಹೋಗಿಲ್ಲ. ಅದರಲ್ಲೂ ಮೂರನೇ ಒಂದು ಭಾಗದಷ್ಟು ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟು ಹೊರಗೆ ಕೂಡ ಹೋಗಿಲ್ಲ. ಇವರನ್ನು ನಮ್ಮ ಗಾದೆ ಭಾಷೆಯಲ್ಲಿ ಬಾವಿಯೊಳಗಿನ ಕಪ್ಪೆ ಗಳು ಎಂದು ಪರೋಕ್ಷವಾಗಿ ಕರೆಯಬಹುದಾಗಿದೆ. ಉಕ್ರೇನ್ ನಲ್ಲಿ ಇಡೀ ವಿಶ್ವದಲ್ಲಿ ಅತ್ಯಂತ ಆಳದ ಮೆಟ್ರೋ ವ್ಯವಸ್ಥೆ ಇದೆ. ಆರ್ಸೆನಲ್ನಾಯಾ ಮೆಟ್ರೋ ನಿಲ್ದಾಣಕ್ಕೆ ಹೋಗಬೇಕೆಂದರೆ ನೀವು 105 ಮೀಟರ್ಗಳಷ್ಟು ಕೆಳಗೆ ಎಸ್ಕಲೇಟರ್ ನಲ್ಲಿ ಕೆಲವು ನಿಮಿಷಗಳ ಕಾಲ ಪ್ರಯಾಣವನ್ನು ಮಾಡಲೇಬೇಕು. ಹೀಗಾಗಿ ಉಕ್ರೇನ್ ಗೆ ಬಂದರೆ ನೀವು ಈ ಮೆಟ್ರೋ ಸವಾರಿಯನ್ನು ಮಾಡಲೇಬೇಕು. ಇದು ಖಂಡಿತವಾಗಿ ನಿಮಗೆ ಉತ್ತಮ ಎಕ್ಸ್ಪೀರಿಯನ್ಸ್ ನೀಡುತ್ತದೆ.

ಇನ್ನು ಎರಡನೇ ವಿಶ್ವ ಮಹಾಯು’ದ್ಧದ ವಿಚಾರವನ್ನು ತೆಗೆದುಕೊಂಡರೆ ಯಹೂದಿಗಳನ್ನು ಸಾಮೂಹಿಕವಾಗಿ ಮುಗಿಸಿರುವ ವಿಚಾರ ನಮಗೆಲ್ಲ ಗೊತ್ತಿದೆ. ಇದರಲ್ಲಿ ಉಕ್ರೇನಿನ ಯಹೂದಿಯರೇ ಹೆಚ್ಚಾಗಿದ್ದರು. ಆ ಸಂದರ್ಭದಲ್ಲಿ ಒಟ್ಟಾರೆಯಾಗಿ 6 ಮಿಲಿಯನ್ ಯಹೂದಿಗಳನ್ನು ಮುಗಿಸಲಾಗಿತ್ತು. ಅದರಲ್ಲಿ 1.5 ಮಿಲಿಯನ್ ಗೂ ಹೆಚ್ಚಿನ ಯಹೂದಿಗಳು ಉಕ್ರೇನಿಗರಾಗಿದ್ದರು. ಉಕ್ರೇನಿನ ರಾಜಧಾನಿಯಾಗಿರುವ ಕೀವ್ ನಲ್ಲಿಯೇ 1941 ರ ಸೆಪ್ಟೆಂಬರ್ 29 ಹಾಗೂ 30ರಂದು ಒಂದು ಲಕ್ಷಕ್ಕೂ ಅಧಿಕ ಉಕ್ರೇನಿಗರನ್ನು ಸಮಾಧಿ ಮಾಡಲಾಗಿತ್ತು.

ಉಕ್ರೇನ್ ದೇಶದ ಅಧ್ಯಕ್ಷರಾಗಿದ್ದಂತಹ ಪೆಟ್ರೋ ಪೊರೆಶೊಂಕೋ ತಮ್ಮ ಚಾಕ್ಲೇಟ್ ಕಾರ್ಖಾನೆಗೆ ಹೆಸರುವಾಸಿಯಾಗಿದ್ದಂತಹ ವ್ಯಕ್ತಿಯಾಗಿದ್ದರು. ಅವರ ಕಾರ್ಖಾನೆಯಲ್ಲಿ ನಿರ್ಮಾಣವಾಗುವ ರೋಷೆನ್ ಚಾಕಲೇಟ್ ಇಡೀ ಉಕ್ರೇನ್ ದೇಶದ ಅತ್ಯಂತ ಪ್ರಸಿದ್ಧವಾಗಿರುವ ಹಾಗೂ ಎಲ್ಲರೂ ಮೆಚ್ಚುವಂತಹ ಚಾಕ್ಲೆಟ್ ಬ್ರಾಂಡ್ ಆಗಿದೆ. ನೀವೇ ನಿಮಗೆ ಉಕ್ರೇನ್ ದೇಶದ ಕುರಿತಂತೆ ತಿಳಿದುಕೊಳ್ಳಬೇಕಾದ ಅಂತಹ ಸ್ವಾರಸ್ಯಕರ ಸಂಗತಿಗಳು. ಈ ವಿಚಾರದ ಕುರಿತಂತೆ ಹಾಗೂ ಉಕ್ರೇನ್ ದೇಶದ ಕುರಿತಂತೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.