ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇತ್ತೀಚಿಗೆ ಕಳಪೆ ಪ್ರದರ್ಶನ ನೀಡಿ, ಫಾರ್ಮ ಕಳೆದುಕೊಂಡಿದ್ದರೂ ಕೂಡ ಹರಾಜಿನಲ್ಲಿ ಕೋಟಿ ಕೋಟಿ ಬಾಚಿದ ಟಾಪ್-5 ಆಟಗಾರರು ಯಾರ್ಯಾರು ಗೊತ್ತೇ??

38

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಹರಾಜು ಎಂಬುದು ಮಾಯಾಂಗನೆ ಇದ್ದಂತೆ. ಉತ್ತಮ ಪ್ರದರ್ಶನ ನೀಡಿದರೂ ಕೆಲವೊಮ್ಮೆ ಸ್ಟಾರ್ ಆಟಗಾರರು ಕಡಿಮೆ ಮೊತ್ತಕ್ಕೆ ಹರಾಜಾಗುತ್ತಾರೆ. ಆದರೇ ಕೆಲವೊಮ್ಮೆ ಪ್ರದರ್ಶನ ನೀಡದಿದ್ದರೂ, ಕೆಲವು ಆಟಗಾರರು ಭಾರಿ ಮೊತ್ತಕ್ಕೆ ಬಿಕರಿಯಾಗುತ್ತಾರೆ. ಪ್ರತಿ ಐಪಿಎಲ್ ನಲ್ಲಿಯೂ ಈ ಟ್ರೆಂಡ್ ಕಾಣಸಿಗುತ್ತದೆ. ಬನ್ನಿ ಈ ಭಾರಿಯ ಹರಾಜಿನಲ್ಲಿ ಕಳಪೆ ಫಾರ್ಮ್ ನಲ್ಲಿದ್ದರೂ ಉತ್ತಮ ಮೊತ್ತಕ್ಕೆ ಹರಾಜಾದ ಟಾಪ್-5 ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಟಾಪ್ 5 : ಟಿಮ್ ಡೇವಿಡ್ : ಸಿಂಗಪುರ್ ಮೂಲದ ಈ ಆಟಗಾರ ಕಳೆದ ಭಾರಿ ಆರ್ಸಿಬಿ ತಂಡದಲ್ಲಿದ್ದರು, ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದರು. ವಿಶ್ವದೆಲ್ಲೆಡೆ ಲೀಗ್ ಕ್ರಿಕೇಟ್ ಆಡುವ ಈತ ಸದ್ಯ ಹೇಳಿಕೊಳ್ಳುವಂತಹ ಲಯದಲ್ಲಿ ಇರಲಿಲ್ಲ.ಆದರೇ ಮುಂಬೈ ತಂಡ ಇವರಿಗೆ ಬರೋಬ್ಬರಿ 8.25 ಕೋಟಿ ರೂ ನೀಡಿ ಖರೀದಿಸಿದೆ. ಈತನ ಸಾಮರ್ಥ್ಯಕ್ಕೆ ಇಷ್ಟೊಂದು ದೊಡ್ಡ ಮೊತ್ತ ಅವಶ್ಯಕತೆ ಇರಲಿಲ್ಲ ಎಂಬುದು ಕ್ರಿಕೇಟ್ ಪಂಡಿತರ ಮಾತು.

ಟಾಪ್ 4 : ಶಿವಂ ಮಾವಿ : ಕಳೆದ ಭಾರಿ ಕೆಕೆಆರ್ ತಂಡದಲ್ಲಿದ್ದ ಶಿವಂ ಮಾವಿ ಅಂಡರ್ 19 ತಂಡದ ಆಟಗಾರ. ಈ ಭಾರಿ ಸಹ ಇವರು ದೇಶಿ ಟೂರ್ನಿಗಳಲ್ಲಿ ಅಂತಹ ಪ್ರದರ್ಶನ ನೀಡಿರಲಿಲ್ಲ. ಆದರೂ ಈ ಭಾರಿ ಸಹ ಕೆಕೆಆರ್ ಇವರಿಗೆ ಬರೋಬ್ಬರಿ 7.25 ಕೋಟಿ ರೂ ನೀಡಿ ಖರೀದಿಸಿದೆ. ಶಿವಂ ಮಾವಿಯ ಪ್ರದರ್ಶನಕ್ಕೆ ಹೋಲಿಸಿದರೇ, ಅವರಿಗೆ ಸಿಕ್ಕ ಸಂಭಾವನೆ ತುಸು ಜಾಸ್ತಿಯೇ ಎಂದು ಹೇಳಬಹುದು.

ಟಾಪ್ 3 : ಖಲೀಲ್ ಅಹಮದ್ : ರಾಜಸ್ಥಾನದ ಎಡಗೈ ಬೌಲರ್ ಖಲೀಲ್ ಅಹಮದ್ ಕಳೆದ ಬಾರಿ ಹೈದರಾಬಾದ್ ತಂಡದಲ್ಲಿದ್ದರು. ಏಳು ಪಂದ್ಯಗಳಿಂದ ಕೇವಲ ಐದು ವಿಕೇಟ್ ಪಡೆದಿದ್ದರು. ಆದರೇ ಈ ಭಾರಿ ಅವರನ್ನು ಡೆಲ್ಲಿ ತಂಡ ಖರೀದಿಸಿದೆ. ಆದರೇ ಬರೋಬ್ಬರಿ 5.25 ಕೋಟಿ ರೂಪಾಯಿಗೆ. ಇದು ಅತ್ಯಂತ ಜಾಸ್ತಿಯಾಗಿದೆ.

ಟಾಪ್ 2 : ಲಿಯಾಮ್ ಲಿವಿಂಗ್ ಸ್ಟೋನ್ – ಇಂಗ್ಲೆಂಡ್ ನ ಈ ಆಲ್ ರೌಂಡರ್ ಕಳೆದ ಬಾರಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದರು. ಕೆಲವು ಪಂದ್ಯಗಳಲ್ಲಿ ಆಡಿದರೇ, ಇನ್ನು ಕೆಲವು ಪಂದ್ಯಗಳಲ್ಲಿ ಆಡುತ್ತಿರಲಿಲ್ಲ. ಆದರೇ ಈ ಭಾರಿ ಇವರನ್ನು ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 11.5 ಕೋಟಿ ರೂಪಾಯಿಗೆ ಖರೀದಿಸಿದೆ. ಅಸ್ಥಿರ ಪ್ರದರ್ಶನ ನೀಡುವ ಇವರು ಅಷ್ಟೊಂದು ದೊಡ್ಡ ಮೌಲ್ಯ ಪಡೆದಿರುವುದು ಆಶ್ಚರ್ಯವಾಗಿದೆ.

ಟಾಪ್ 1 : ನಿಕೋಲಸ್ ಪೂರನ್ – ಬಿಗ್ ಹಿಟ್ಟರ್ ಆಗಿರುವ ವಿಂಡಿಸ್ ನ ನಿಕೋಲಸ್ ಪೂರನ್ ಕಳೆದ ಭಾರಿ ಪಂಜಾಬ್ ತಂಡದ ಪರ ಆಡುತ್ತಿರುವಾಗ ನಾಲ್ಕು ಬಾರಿ ಸೊನ್ನೆಗೆ ವಿಕೇಟ್ ಒಪ್ಪಿಸಿದ್ದರು. ಈ ಭಾರಿ ಅವರನ್ನು ಹೈದರಾಬಾದ್ ತಂಡ ಬರೋಬ್ಬರಿ 10.75 ಕೋಟಿಗೆ ಖರೀದಿಸಿದೆ. ಅಸ್ಥಿರ ಪ್ರದರ್ಶನ ನೀಡುವ ಇವರಿಗೆ ಈ ಮೊತ್ತ ಸ್ವಲ್ಪ ಜಾಸ್ತಿಯೇ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ

Get real time updates directly on you device, subscribe now.