ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭರ್ಜರಿ ಯಶಸ್ಸು ಕಂಡಿದ್ದ ಎದ್ದೇಳು ಮಂಜುನಾಥ ಚಿತ್ರದ 2ನೇ ಭಾಗಕ್ಕೆ ಜಗ್ಗೇಶ್ ಹೀರೋ ಅಲ್ವಂತೆ, ಮತ್ಯಾರು ಗೊತ್ತೇ??

185

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೆಲವೊಂದು ಸಿನಿಮಾಗಳು ಎಷ್ಟೇ ವರ್ಷಗಳಾದರೂ ಕೂಡಾ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಹಚ್ಚಹಸಿರಾಗಿ ಉಳಿದಿರುತ್ತದೆ. ಅಂತಹುದೆ ಸಿನಿಮಾಗಳಲ್ಲಿ ಇಂದು ನಾವು ಹೇಳ ಹೊರಟಿರುವ ಸಿನಿಮಾ ಕೂಡ ಹೌದು. ಹೌದು ನಾವು ಮಾತನಾಡುತ್ತಿರುವುದು ಎವರ್ಗ್ರೀನ್ ಕಾಮಿಡಿ ಎಂಟರ್ಟೈನರ್ ಚಿತ್ರ ಎದ್ದೇಳು ಮಂಜುನಾಥ ಚಿತ್ರದ ಕುರಿತಂತೆ. ಈ ಚಿತ್ರ ಇಂದಿಗೂ ಕೂಡ ಕನ್ನಡ ಪ್ರೇಕ್ಷಕರಲ್ಲಿ ನವನವೀನವಾಗಿ ಉಳಿದುಕೊಂಡಿದೆ. ಕಾಮಿಡಿ ವಿಭಾಗದಲ್ಲಿ ಸೂಪರ್ ಹಿಟ್ ಆಗಿರುವ ಸಿನಿಮಾಗಳಲ್ಲಿ ಎದ್ದೇಳು ಮಂಜುನಾಥ ಚಿತ್ರ ಕೂಡ ಪ್ರಥಮ ಸ್ಥಾನದಲ್ಲಿ ಕಂಡುಬರುತ್ತದೆ.

ನವರಸ ನಾಯಕ ಜಗ್ಗೇಶ್ ರವರ ನಟನೆ ಕೂಡ ಚಿತ್ರದ ಪ್ರಮುಖ ಆಕರ್ಷಣೆ ಕೇಂದ್ರ ಬಿಂದುವಿನಲ್ಲಿ ಒಂದು ಆಗಿದೆ. ಇನ್ನು ಚಿತ್ರದ ನಿರ್ದೇಶಕ ನಾಗಿರುವ ಗುರುಪ್ರಸಾದ್ ರವರು ಎದ್ದೇಳು ಮಂಜುನಾಥ 2 ಕೂಡ ಬರುತ್ತಿದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಒಂದು ಯಶಸ್ವಿ ಚಿತ್ರದ ಎರಡನೇ ಭಾಗ ಬರುತ್ತದೆ ಎಂದರೆ ಎಲ್ಲರೂ ಕೂಡ ಕಾತರರಾಗಿ ಕಾಯುತ್ತಿರುತ್ತಾರೆ. ಎದ್ದೇಳು ಮಂಜುನಾಥ 2 ಈಗಾಗಲೇ ಚಿತ್ರೀಕರಣವನ್ನು ಮುಗಿಸಿದ್ದು ಚಿತ್ರದ ನಾಯಕನಟ ನವರಸ ನಾಯಕ ಜಗ್ಗೇಶ್ ಅಲ್ಲವಂತೆ. ಹಾಗಿದ್ದರೆ ಈ ಅದ್ಭುತ ಚಿತ್ರದ ಎರಡನೇ ಭಾಗದ ನಾಯಕನಟನಾಗಿ ಯಾರು ಆಯ್ಕೆಯಾಗಿದ್ದಾರೆ ಎಂದು ನೋಡೋಣ ಬನ್ನಿ.

ಹೌದು ಗೆಳೆಯರೇ ಎದ್ದೇಳು ಮಂಜುನಾಥ ಚಿತ್ರದ ಎರಡನೇ ಭಾಗದ ನಾಯಕ ಇನ್ಯಾರು ಅಲ್ಲ ಬದಲಾಗಿ ನಿರ್ದೇಶಕ ಗುರುಪ್ರಸಾದ್ ರವರೇ. ಈ ಕುರಿತಂತೆ ಅವರೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಎದ್ದೇಳು ಮಂಜುನಾಥ ಮೊದಲ ಭಾಗದಲ್ಲಿ ನಾಯಕ ಆಲಸ್ಯವನ್ನು ಮೈಗೂಡಿಸಿಕೊಂಡಿರುತ್ತಾನೆ. ಎರಡನೇ ಭಾಗದಲ್ಲಿ ನಾಯಕ ಬೇರೆಯದೇ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎಂಬುದಾಗಿ ಸುಳಿವನ್ನೂ ನೀಡಿದ್ದಾರೆ. ಚಿತ್ರದಲ್ಲಿ ರಚಿತಾ ಮಹಾಲಕ್ಷ್ಮಿ ನಾಯಕಿಯಾಗಲಿದ್ದಾರೆ. ಈ ಚಿತ್ರದ ಕುರಿತಂತೆ ನೀವು ಎಷ್ಟು ಕಾತರರಾಗಿದ್ದೀರವರ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.