ವಿಶೇಷ ಶಕ್ತಿಯನ್ನು ಹೊಂದಿರುವಂತಹ ಹುತ್ತದ ದೇವಿ ಪದ್ಮಾವತಿ, ಎಂತಹ ಕಷ್ಟವೇ ಇರಲಿ, ಒಮ್ಮೆ ಭೇಟಿ ಕೊಡಿ. ಇರುವುದು ಎಲ್ಲಿ ಗೊತ್ತೇ??

ವಿಶೇಷ ಶಕ್ತಿಯನ್ನು ಹೊಂದಿರುವಂತಹ ಹುತ್ತದ ದೇವಿ ಪದ್ಮಾವತಿ, ಎಂತಹ ಕಷ್ಟವೇ ಇರಲಿ, ಒಮ್ಮೆ ಭೇಟಿ ಕೊಡಿ. ಇರುವುದು ಎಲ್ಲಿ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಾವಿಂದು ನಿಮಗೆ ವಿಶೇಷವಾದ ಒಂದು ದೇವಾಲಯದ ಬಗ್ಗೆ ಹೇಳುತ್ತೇವೆ. ಈ ದೇವಾಲಯದ ವಿಶೇಷತೆಯೇ ಹುತ್ತದಲ್ಲಿ ನೆಲೆಸಿರುವ ದೇವಿ ಹಾಗೂ ನಾಗದೇವತೆ. ಈ ಪವಾಡಸದೃಶ ದೇವಿಯ ದೇವಾಲಯ ಇರುವುದು ಶಿವಮೊಗ್ಗದ ಸಾಗರ ತಾಲೂಕಿನ ಒಡಂಬೈಲು ಎಂಬಲ್ಲಿ. ಇದು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಜೋಗ ಜಲಪಾತದಿಂದ ಕೇವಲ 12 ಕಿಲೋಮೀಟರ್ ಅಂತರದಲ್ಲಿದೆ.

ಇಲ್ಲಿ ನೆಲೆಸಿರುವ ಪದ್ಮಾವತಿ ದೇವಿಯನ್ನು ಬಳೆ ಪದ್ಮಾವತಿ ಎಂದು ಕರೆಯುತ್ತಾರೆ. ಯಾಕೆಂದರೆ ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ತಾಯಿಗೆ ಹರಕೆ ಹೊರುವ ಭಕ್ತರು ಆಕೆಗೆ ಬಳೆಯ ಸೇವೆಯನ್ನು ಮಾಡುತ್ತಾರೆ. ಇಲ್ಲಿನ ಧರ್ಮಾಧಿಕಾರಿಗಳಿಂದ ಅಭಯವನ್ನು ಪಡೆದು ಹರಕೆ ಹೊತ್ತ ಭಕ್ತಾದಿಗಳು ಸಮಸ್ಯೆಯನ್ನು ದೇವಿ ಪರಿಹರಿಸುತ್ತಾಳೆ. ಜನರು ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತಾರೋ ಅದನ್ನ ನಡೆಸಿಕೊಡುತ್ತಾಳೆ.

ಇದು ಈ ದೇವಿಯನ್ನು ಮನಸ್ಸಿನಲ್ಲಿ ನೆನೆಸಿಕೊಂಡರೆ ಆ ಸ್ಥಳದ ಕನಸು ಕೂಡ ಬೀಳುತ್ತದೆ, ಈ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸಮಾಧಾನವಾಗುತ್ತದೆ. ಇನ್ನು ಈ ದೇವಿಯ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಮೂರೂ ಹೊತ್ತು ದೇವಿಯ ಪ್ರಸಾದವಾಗಿ ಅನ್ನಸಂತರ್ಪಣೆಯನ್ನು ಮಾಡುವುದು ವಿಶೇಷ. ಇನ್ನು ಈ ದೇವಾಲಯಕ್ಕೆ ಭೇಟಿ ನೀಡುವ ಸಮಯ 6: 30 ರಿಂದ ಮಧ್ಯಾಹ್ನ 2ರವರೆಗೆ ನಂತರ ಸಂಜೆ 4ರಿಂದ 7ರವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಈ ಅವಧಿಯ ಒಳಗೆ ಪೂಜೆಗಳನ್ನು ಮಾಡಿಸಬಹುದು. ಪದ್ಮಾವತಿದೇವಿ, ನಾಗ ಹಾಗೂ ಭೂತರಾಜ ಮೂವರಿಂದ ಒಡಂಬೈಲು ಶಕ್ತಿಶಾಲಿ ಸ್ಥಳವಾಗಿದೆ. ಇಲ್ಲಿ ದೇವಿಯ ದರ್ಶನಕ್ಕೆ ಮಾತ್ರವಲ್ಲದೆ ನಾಗ ದೋಷ ನಿವಾರಣೆಗೂ ಜನ ಆಗಮಿಸುತ್ತಾರೆ. ಆದರೆ ಮಾಧ್ಯಮಗಳಲ್ಲೂ ಹೆಚ್ಚಾಗಿ ಪ್ರಚಾರಕ್ಕೆ ಬರದ ಕಾರಣ ಈ ದೇವಾಲಯದ ಮಹಿಮೆ ಹಲವರಿಗೆ ಗೊತ್ತಿಲ್ಲ. ಸಾಧ್ಯವಾದರೆ ನೀವೂ ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ, ದೇವಿಯ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲದೆ ಇತರರೊಂದಿಗೂ ಈ ದೇವಾಲಯದ ಮಹಿಮೆಯನ್ನು ಹಂಚಿಕೊಳ್ಳಿ.