ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪು ವಿಷಯದಲ್ಲಿ ಅದೊಂದು ಸತ್ಯವನ್ನು ಅಲ್ಲು ಅರ್ಜುನ್ ಹಾಗೂ ಎನ್ಟಿಆರ್ ಕೂಡ ಒಪ್ಪಿಕೊಂಡು ಸಲಾಂ ಮಾಡಿದ್ದರು, ಯಾವುದು ಗೊತ್ತೇ??

56

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಸ್ನೇಹಿತರನ್ನು ಹೊಂದಿದ್ದರು. ಅವರು ಎಂದರೆ ಎಲ್ಲಾ ನಟರು ಕೂಡ ಗೌರವವನ್ನು ನೀಡುತ್ತಿದ್ದರು. ಅಷ್ಟರಮಟ್ಟಿಗೆ ಅಜಾತಶತ್ರು ವಿನಂತೆ ಎಲ್ಲರ ಮನಗೆದ್ದಂತಹ ವ್ಯಕ್ತಿತ್ವ ಅವರಾಗಿದ್ದರು. ನಿಜಕ್ಕೂ ಕೂಡ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಕೇವಲ ಒಬ್ಬ ಅದ್ಭುತ ನಟನನ್ನು ಮಾತ್ರವಲ್ಲದೆ ಅತ್ಯದ್ಭುತ ವ್ಯಕ್ತಿಯನ್ನು ಕೂಡ ಕಳೆದುಕೊಂಡಂತಾಗಿದೆ. ನೃತ್ಯ ಸಾಹಸ ದೃಶ್ಯಗಳು ಏನೇ ಇರಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜವಾಗಿ ಯಾವುದೇ ಡ್ಯೂಪ್ ಇಲ್ಲದೆ ಮಾಡುತ್ತಿದ್ದರು.

ನಿಜಕ್ಕೂ ಕೂಡ ಅವರಂತಹ ನಟನನ್ನು ಕನ್ನಡ ಚಿತ್ರರಂಗ ಮತ್ತೆ ಪಡೆಯುತ್ತಿದ್ದಾರೆ ನಂಬಲು ಸಾಧ್ಯವಿಲ್ಲ. ಇನ್ನು ಅವರೊಂದಿಗೆ 13 ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿರುವ ಸಾಹಸ ನಿರ್ದೇಶಕ ರವಿವರ್ಮ ಅವರು ಅವರ ಕುರಿತಂತೆ ಒಂದು ವಿಚಾರವನ್ನು ಹೇಳಿದ್ದಾರೆ. ನಿಮಗೆಲ್ಲ ಗೊತ್ತಿರುವಂತೆ ರವಿವರ್ಮ ಈಗಾಗಲೇ ಪ್ರತಿಯೊಂದು ಭಾಷೆಗಳಲ್ಲೂ ಕೂಡ ಸ್ಟಾರ್ ನಟರ ಸಿನಿಮಾಗಳಲ್ಲಿ ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವಂತಹ ಸಾಹಸ ನಿರ್ದೇಶಕ. ಇನ್ನು ಅವರು ತೆಲುಗು ಸಿನಿಮಾಗಳಲ್ಲಿ ಕೂಡ ಸಾರ್ ನಟರೊಂದಿಗೆ ನಟಿಸಿದ್ದಾರೆ.

ಅದರಲ್ಲೂ ಅಲ್ಲು ಅರ್ಜುನ್ ಹಾಗೂ ಜೂನಿಯರ್ ಎನ್ಟಿಆರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ರವಿವರ್ಮ ರವರಿಗೆ ಏನು ಹೇಳಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ. ಅವರಿಗೆಲ್ಲ ರವಿವರ್ಮ ರವರು ಕನ್ನಡ ಮೂಲದಿಂದ ಬಂದವರೆಂದು ತಿಳಿದಿದೆ. ಹೀಗಾಗಿ ಅವರು ಬಂದಾಗ ನಾವು ಪುನೀತ್ ರಾಜಕುಮಾರ್ ಅವರ ಮಟ್ಟಕ್ಕೆ ಸಾಹಸ ದೃಶ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಸ್ವಲ್ಪ ನೋಡಿಕೊಂಡು ಮಾಡಿ ಮಾಸ್ಟರ್ ಎನ್ನುವುದಾಗಿ ಹೇಳುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಪರಭಾಷೆಗಳಲ್ಲಿ ಕೂಡ ಪುನೀತ್ ರಾಜಕುಮಾರ್ ರವರು ತಮ್ಮ ಪ್ರತಿಭೆಯ ಗುರುತನ್ನು ಮೂಡಿಸಿದ್ದರು. ನಿಜಕ್ಕೂ ಕೂಡ ಇದನ್ನೆಲ್ಲ ನೆನೆಸಿಕೊಂಡರೆ ಇಂದಿನ ದಿನಗಳಲ್ಲಿ ಕಣ್ಣು ತೇವವಾಗುತ್ತದೆ. ಅಪ್ಪು ನಿಜವಾದ ಸೂಪರ್ ಸ್ಟಾರ್ ಆಗಿದ್ದರು.

Get real time updates directly on you device, subscribe now.