ಕನ್ನಡತಿ ಅಮ್ಮಮ್ಮ ಪಾತ್ರ ಕೊನೆಯಾಗುವುದು ಬೇಡ ಎನ್ನುತ್ತಿರುವ ಅಭಿಮಾನಿಗಳಿಗೆ ಸಿಗಲಿದೆಯೇ ಸಿಹಿ ಸುದ್ದಿ, ಹೊಸ ಪ್ಲಾನ್ ಏನು ಗೊತ್ತೇ??

ಕನ್ನಡತಿ ಅಮ್ಮಮ್ಮ ಪಾತ್ರ ಕೊನೆಯಾಗುವುದು ಬೇಡ ಎನ್ನುತ್ತಿರುವ ಅಭಿಮಾನಿಗಳಿಗೆ ಸಿಗಲಿದೆಯೇ ಸಿಹಿ ಸುದ್ದಿ, ಹೊಸ ಪ್ಲಾನ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈ ಹಿಂದೆ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಗಿದ್ದ ಬೇಡಿಕೆ ಈಗ ಇರೋದು ಕನ್ನಡತಿ ಧಾರಾವಾಹಿಗೆ. ಕನ್ನಡತಿಯಲ್ಲಿ ದಿನವೂ ಏನಾಗುತ್ತೋ ಅನ್ನೋ ಕುತೂಹಲದಲ್ಲಿ ದಿನ ಎಪಿಸೋಡ್ ಗಾಗಿ ಕಾದು ಕುಳಿತಿರುತ್ತಾರೆ ಕನ್ನಡತಿ ಅಭಿಮಾನಿಗಳು. ಸದ್ಯ ಅಭಿಮಾನಿಗಳು ಕೊಂಚ ಬೇಸರದಲ್ಲಿದ್ದಾರೆ. ಇದಕ್ಕೆ ಕಾರಣ ಅಮ್ಮಮ್ಮ ಎಲ್ಲರನ್ನ ಬಿಟ್ಟು ಹೋಗ್ಬಿಡ್ತಾರಾ ಅನ್ನೊದು!

ಹೌದು, ಕನ್ನಡತಿಯಲ್ಲಿ ದಿನದಿಂದ ದಿನಕ್ಕೆ ಕಥೆ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಮುಂದೆ ಹೀಗೆ ಆಗಬಹುದು ಎಂದು ಯಾರೂ ಊಹೆ ಮಾಡೋಕೂ ಸಾಧ್ಯವಾಗ್ತಿಲ್ಲ. ಹಾಗಾಗಿ ಜನರಿಗೆ ಕನ್ನಡತಿಯಲ್ಳಾಗುವ ಘಟನೆಗಳೆಲ್ಲವೂ ಅತ್ಯಂತ ಇಂಟರೆಸ್ಟಿಂಗ್ ಎನ್ನಿಸುತ್ತಿದೆ. ಇನ್ನು ಸದ್ಯ ಅಮ್ಮಮ್ಮನಿಗೆ ಹುಷಾರಿಲ್ಲ, ಇನ್ನೇನು ಅಮ್ಮಮ್ಮ ತಮ್ಮ ಕೈತಪ್ಪಿ ಹೋಗ್ತಾರೆ ಅನ್ನೋ ಸತ್ಯವನ್ನ ವೈದ್ಯರು ಹರ್ಷನ ಕಿವಿಗೆ ಹಾಕಿಯೇ ಬಿಟ್ಟಿದ್ದಾರೆ. ಇದನ್ನು ಹರ್ಷನಿಗೆ ಅರಗಿಸಿಕೊಳ್ಳೋದಕ್ಕೂ ಆಗ್ತಿಲ್ಲ. ಅಮ್ಮಮ್ಮ ಬದಕ್ಲಿ ಅನ್ನೋ ಪ್ರಾರ್ಥನೆ ಬಿಟ್ಟು ಬೇರೆನೂ ಮಾಡುವ ಸ್ಥಿತಿಯಲ್ಲಿಲ್ಲ ಹರ್ಷ.

ಆದರೂ ಮೇಲ್ನೋಟಕ್ಕೆ ಖುಷಿಯಲ್ಲಿರುವ ಹಾಗೆ ನಟಿಸುತ್ತಾ ಅಮ್ಮಮ್ಮನನ್ನು ಖುಷಿ ಪಡಿಸೋದಕ್ಕೆ ಹೊರಟಿದ್ದಾನೆ ಹರ್ಷ. ಆಸ್ಪತ್ರೆಯಲ್ಲಿದ್ದೂ ಭುವಿ, ಹಸಿರುಪೇಟೆ ಎಂದು ಕನವರಿಸುವ ಅಮ್ಮಮ್ಮ ಉಳಿತಾರಾ ಇಲ್ವಾ ಅನ್ನೋದೇ ಸದ್ಯದ ಡೌಟ್. ಆದ್ರೆ ಹರ್ಷ ಜೊತೆ ಇನ್ನೊಬ್ಬರೂ ಕೂಡ ದೇವರ ಮುಂದೆ ಅಮ್ಮಮ್ಮನ ದೀರ್ಘಾಯುಷ್ಯಕ್ಕಾಗಿ ಬೇಡುತ್ತಿದ್ದಾರೆ ಯಾರು ಗೊತ್ತಾ .. ಪ್ರೇಕ್ಷಕರು. ಹೌದು ಅಮ್ಮಮ್ಮ ಪಾತ್ರವನ್ನ ಕೊನೆಗೊಳಿಸಬೇಡಿ ಅಂತ ಕನ್ನಡತಿ ಅಭಿಮಾನಿಗಳು ನಿರ್ದೇಶಕರಿಗೆ ಸಂದೇಶಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಇನ್ನು ಕೆಲವು ಮೂಲಗಳು ಅಮ್ಮಮ್ಮ ಕ್ಯಾರೆಕ್ಟರ್ ಕೊನೆಗೊಳ್ಳುತ್ತೆ, ಭುವಿ ಅವರ ಜವಾಬ್ದಾರಿ ಹೊರುತ್ತಾರೆ ಅಂದ್ರೆ ಇನ್ನೂ ಕೆಲವರು ಅಮ್ಮಮ್ಮ ಇಷ್ಟು ಬೇಗ ಧಾರಾವಾಹಿಯಿಂದ ಹೊರನಡೆಯಲ್ಲ ಎನ್ನುತ್ತಿದ್ದಾರೆ, ಹರ್ಷ ಹೊಸ ಪ್ಲಾನ್ ಮಾಡಿದ್ದು ಹಸಿರುಪೇಟೆ ಗೆ ಹೋಗುವ ಮೂಲಕ ಅಮ್ಮಮ್ಮನನ್ನು ಉಳಿಸಿಕೊಳ್ಳುವ ಪ್ಲಾನ್ ನಲ್ಲಿ ಇದ್ದಾನೆ. ಆದರೆ ಈ ಬಗ್ಗೆಧಾರಾವಾಹಿ ತಂಡ ಮಾತ್ರ ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದರ ಜೊತೆಗೆ ಹರ್ಷ ಹುಡುಗಿ ಯಾರು ಅನ್ನೋದು ಸಾನಿಯಾ ವರೂಧಿನಿಗೆ ಹೇಳುತ್ತಾಳಾ, ಹೇಳಿದ್ರೆ ವರೂ ಏನ್ ಮಾಡ್ತಾಳೆ ಇನ್ನೂ ಮುಂತಾದ ಕುತೂಹಲಕಾರಿ ಅಂಶಗಳು ಕನ್ನಡತಿಯನ್ನು ಮತ್ತೆ ಮತ್ತೆ ನೋಡುವಂತೆ ಮಾಡಿದೆ!