ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜನಾರ್ಧನ ರೆಡ್ದಿ ಅವರ ಪುತ್ರ ಕಿರೀಟಿ ರವರ ಚಿತ್ರಕ್ಕೆ ಆಯ್ಕೆಯಾಗಿರುವ ಎರಡು ನಟಿಯರು ಯಾರ್ಯಾರು ಗೊತ್ತೇ?? ಭರ್ಜರಿ ಎಂಟ್ರಿ ಗೆ ನಡೆದಿದೆ ತಯಾರಿ.

272

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಮಾಜಿ ಸಚಿವ, ಗಾಲಿ ಜನಾರ್ಧನ ರೆಡ್ದಿ ಅವರ ಪುತ್ರ ಕಿರೀಟಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡೋದಕ್ಕೆ ಬರ್ತಿದ್ದಾರೆ. ಕಿರೀಟಿ ತಮ್ಮ ಚೊಚ್ಚಲ ಸಿನಿಮಾ ಮುಹೂರ್ತ ಮುಗಿಸಿ ಚಿತ್ರೀಕರಣಕ್ಕೆ ಅಡಿಯಿಟ್ಟಿದ್ದಾರೆ. ಇನ್ನು ಖ್ಯಾತ ನಟಿಯರಿಬ್ಬರು ಈ ಚಿತ್ರದಲ್ಲಿ ಕಿರೀಟಿಗೆ ಜೊತೆಯಾಗಲಿದ್ದಾರೆ. ಯಾರು ಗೊತ್ತಾ?

ಅವರೇ ತಮಿಳು ಸಿನಿಮಾ ರಂಗದ ಫೇಮಸ್ ನಟಿ ಜೆನಿಲಿಯಾ ಮತ್ತು ಕನ್ನಡದ ಹುಡುಗಿ ಶ್ರೀಲೀಲಾ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡ್ತ ಇರೋ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದರೆ, ಜೆನಿಲಿಯಾ ಪಾತ್ರ ಏನು ಎನ್ನುವುದನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಜನಿಲಿಯಾ ತಮಿಳು ಚಿತ್ರಗಳಲ್ಲಿ ಹೆಚ್ಚು ನಟಿಸಿದವರು. ಕನ್ನಡದಲ್ಲಿ ಶಿವರಾಜ್ ಕುಮಾರ್ ನಟನೆಯ ಸತ್ಯ ಇನ್ ಲವ್ ಚಿತ್ರದಲ್ಲಿ ನಟಿಸಿದ್ದ ಜೆನಿಲಿಯಾ ಮತ್ತೆ ಕಾಣಿಸಿಕೊಂಡಿದ್ದು ಬಾಲಿವುಡ್ ನಲ್ಲಿ.

ಆದರೆ ನಟ ರಿತೇಶ್ ದೇಶಮುಖ ಅವರನ್ನು ಮದುವೆಯಾದ ನಂತರ ಅವರು ಸಿನಿಮಾ ರಂಗದಿಂದ ದೂರನೇ ಉಳಿದ್ರು. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು ಜನಿಲಿಯಾ. ಇದೀಗ ಕಿರೀಟಿ ನಟನೆಯ ಮೊದಲ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಮತ್ತೆ ಚಿತ್ರೋದ್ಯಮಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾವನ್ನು ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾ ಮೂಡಿಬರಲಿದೆ. ಬಾರಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಈ ಚಿತ್ರದ ನಾಮಕರಣ ಇನ್ನೂ ಆಗಿಲ್ಲ. ಹಾಗೆಯೇ ಇದರಲ್ಲಿ ನಟಿಸುವ ತಾರಾಬಳಗವೂ ದೊಡ್ದದಿದೆ. ಕಿರೀಟಿಯವರ ಚಿತ್ರದ ಚಿತ್ರೀಕರಣಕ್ಕೆ ಆಲ್ ಸೆಟ್ ಆಗಿದ್ದು ಚಿತ್ರೀಕರಣ ಆಗುವುದೊಂದೇ ಬಾಕಿ.

Get real time updates directly on you device, subscribe now.